March 29, 2024

Bhavana Tv

Its Your Channel

೨೦೧೯-೨೦ ನೇ ಸಾಲಿನ ಸೇವಾ ಚಟುವಟಿಕೆಗಳಿಗಾಗಿ ಹೊನ್ನಾವರ ರೋಟರಿ ಕ್ಲಬ್ ಗೆ ನಾಲ್ಕು ಪ್ರಶಸ್ತಿ.

ಹೊನ್ನಾವರ ; ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ರೋಟರಿ ಜಿಲ್ಲೆ ೩೧೭೦ ರ ೨೦೧೯-೨೦ ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹೊನ್ನಾವರ ರೋಟರಿ ಕ್ಲಬ್‌ಗೆ ಆ ಸಾಲಿನ ಸೇವಾ ಚಟುವಟಿಕೆಗಳಿಗಾಗಿ ನಾಲ್ಕು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಅಂದಿನ ಅವಧಿಯ ರೋಟರಿ ಕ್ಲಬ್‌ನ ಅಸಿಸ್ಟಂಟ್ ಗವರ್ನರ್ ಆದ ಜಿ.ಎಸ್. ಹೆಗಡೆ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ಚಟುವಟಿಕೆಗಳಿಗೆ ಕ್ಲಬ್‌ಗೆ “ಸಮುದಾಯ ಸೇವೆಯಲ್ಲಿ ಅತ್ಯುತ್ತಮ” ಮತ್ತು “ಯುವಜನ ಸೇವೆಯಲ್ಲಿ ಅತ್ಯುತ್ತಮ” ಪ್ರಶಸ್ತಿಗಳನ್ನು ನೀಡಲಾಗಿದೆ. ಹಾಗೂ ೨೦೧೯-೨೦ ನೇ ಸಾಲಿನಲ್ಲಿ ಅಧ್ಯಕ್ಷರಾದ ರೋ. ದಿನೇಶ ಕಾಮತ ಅವರಿಗೆ ” ಅತ್ಯುತ್ತಮ ಅಧ್ಯಕ್ಷ” ಮತ್ತು ಕಾರ್ಯದರ್ಶಿಗಳಾದ ರೋ. ಎಸ್ ಎನ್ ಹೆಗಡೆ ಅವರಿಗೆ ” ಅತ್ಯುತ್ತಮ ಕಾರ್ಯದರ್ಶಿ ” ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಹೊನ್ನಾವರ ರೋಟರಿ ಕ್ಲಬ್‌ಗೆ ಬಂದಿರುವ ಪ್ರಶಸ್ತಿಗೆ ಕಾರಣಿಕರ್ತರಾದ ಅಂದಿನ ಅವಧಿಯ ಅಧ್ಯಕ್ಷರಾದ ರೋ. ದಿನೇಶ ಕಾಮತ ಅವರಿಗೆ ” ಮತ್ತು ಕಾರ್ಯದರ್ಶಿಗಳಾದ ರೋ. ಎಸ್ ಎನ್ ಹೆಗಡೆ ಅವರಿಗೆ ಹಾಲಿ ರೋಟರಿ ಅಧ್ಯಕ್ಷರಾದ ರೋ. ಸ್ಟೀಫನ್ ರೊಡ್ರಿಗಿಸ್ ಅಭಿನಂದನೆಗಳನ್ನು ತಿಳಿಸಿದ್ದಾರೆ.

error: