March 25, 2024

Bhavana Tv

Its Your Channel

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಪ್ರಯುಕ್ತ ಪ್ರಬಂಧ ಸ್ಪರ್ಧೆ-ನನ್ನ ಜೀವನ ಆಶಾದಾಯಕವೋ ಅಥವಾ ನಿರಾಶಾದಾಯಕ?

ಹೊನ್ನಾವರ ; ಮಾನವ ಜೀವ ಅತಿ ಅಮೂಲ್ಯ. ಸಮಸ್ಯೆಗಳಿಗೆ ಪರಿಹಾರ, ಆತ್ಮಹತ್ಯೆ ಒಂದೇ ಮಾತ್ರವಲ್ಲ. ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ವಿಪರ್ಯಾಸ ಹಾಗೂ ದುರ್ಭಾಗ್ಯ. ಇದನ್ನು ತಡೆಗಟ್ಟುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದರ ಪ್ರಯುಕ್ತ ಹೊನ್ನಾವರದ ಸಂತ ಇಗ್ನೇಷಿಯಸ್ ಆಸ್ಪತ್ರೆ, ಮಾನಸಿಕ ವಿಭಾಗ ಇವರ ವತಿಯಿಂದ ನನ್ನ ಜೀವನ ಆಶಾದಾಯಕವೋ ಅಥವಾ ನಿರಾಶಾದಾಯಕ? ಎಂಬ ವಿಷಯದಲ್ಲಿ, ಉತ್ತರ ಕನ್ನಡ ಜಿಲ್ಲೆಯ ೧೮ ರಿಂದ ೩೦ ವರ್ಷದ ವಯೋಮಿತಿಯ ಕನ್ನಡ ಇಲ್ಲವೇ ಇಂಗ್ಲೀಷ ಭಾಷೆಯ, ೧೦೦೦ ಪದಗಳು ಮೀರದಂತೆ ಎ೪ ಗಾತ್ರದ ಕಾಗದದ ಮೇಲೆ ನಿಮ್ಮ ಸ್ವವಿಳಾಸ, ಆಧಾರ ಪ್ರತಿ, ಭಾವಚಿತ್ರ, ದೂರವಾಣಿ ಸಂಖ್ಯೆಯೊAದಿಗೆ ಸೆಪ್ಟೆಂಬರ್ ೩೦ರ ಒಳಗೆ ಕಳಹಿಸತಕ್ಕದ್ದು. ಪ್ರಥಮ ವಿಜೇತರಿಗೆ ೩,೦೦೦/-, ದ್ವೀತಿಯ ೨,೦೦೦/-, ತೃತೀಯ ೧,೦೦೦/- ಬಹುಮಾನವನ್ನು ನೀಡಲಾಗುವುದು. ಪ್ರಬಂಧವನ್ನು ಇ-ಮೇಲ್ ವಿಳಾಸ [email protected] ಅಥವಾ Whatsapp no.9980813356 ಇಲ್ಲವೇ ವೈಯಕ್ತಿಕವಾಗಿ ಪ್ರಬಂಧ ಸ್ಪರ್ಧೆ, ಮನೋರೋಗ ವಿಭಾಗ, ಸಂತ ಇಗ್ನೇಷಿಯಸ್ ಆಸ್ಪತ್ರೆ, ಪ್ರಭಾತನಗರ ಹೊನ್ನಾವರ-೫೮೧೩೩೪. ಈ ವಿಳಾಸಕ್ಕೆ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಗಣೇಶ ಗೌಡ, ಆಪ್ತಸಮಾಲೋಚಕರು, ಮಾನಸಿಕ ವಿಭಾಗಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.. ನಿಮ್ಮ ಪ್ರಬಂಧ ಹಲವಾರು ಜೀವಕ್ಕೆ ಸ್ಪೂರ್ತಿಯಾಗಲಿ.

error: