April 25, 2024

Bhavana Tv

Its Your Channel

“ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಬಡವರ ಪಾಲಿಗೆ ಆರೋಗ್ಯ ಸಂಜೀವಿನಿ” – ಡಾ|| ಮಂಜುನಾಥ ಶೆಟ್ಟಿ

(ತಾಲೂಕಾ ಆಸ್ಪತ್ರೆಯಲ್ಲಿ ಆಯುಷ್ಮಾನ ಭಾರತ
ಅನುಷ್ಠಾನಗೊಂಡು ೩ ವರ್ಷ ಪೂರೈಸಿದ ಹಿನ್ನಲೆ ಆರೋಗ್ಯ ಶಿಭಿರಿಕ್ಕೆ ಚಾಲನೆ)

ಹೊನ್ನಾವರ ; “ಆರ್ಥಿಕ ಕಾರಣದಿಂದ ಚಿಕಿತ್ಸೆ ಪಡೆಯಲು ಸಾದ್ಯವಾಗದೇ ಪರದಾಡುತ್ತಿದ್ದ ಬಡವರಿಗೆ ಸರಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜೀವ ಉಳಿಸುವ ಸಂಜೀವಿನಿಯಾಗಿದೆ. ಬದುಕುವ ಆಶೆ ಬಿಟ್ಟಿದ ಎಷ್ಟೋ ಜನ ಇವತ್ತು ಈ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆದುಕೊಂಡು ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ” ಎಂದು ತಾಲೂಕಾ ಆಸ್ಪತ್ರೆಯ ಹಿರಿಯ ಶಸ್ತç ಚಿಕಿತ್ಸಕ ವೈದ್ಯರಾದ ಡಾ|| ಮಂಜುನಾಥ ಶೆಟ್ಟಿ ಹೇಳಿದ್ದರು. ಅವರು ಹೊನ್ನಾವರದ ತಾಲೂಕಾ ಆಸ್ಪತ್ರೆಯಲ್ಲಿ ಆಯುಷ್ಮಾನ ಭಾರತ ಯೋಜನೆಗೆ ಮೂರು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ನಡೆದ ಆಯುಷ್ಮಾನ ಆರೋಗ್ಯ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರಿದು ಮಾತನಾಡುತ್ತ “ಜಗತ್ತಿನಲ್ಲಿ ಅತಿ ದೊಡ್ಡ ಸರಕಾರ ಪ್ರಾಯೋಜಿತ ಆರೋಗ್ಯ ವಿಮಾ ಯೋಜನೆ ಇದಾಗಿದ್ದು ದೇಶದ್ಯಾದಂತಹ ಕೋಟ್ಯಾಂತರ ಜನ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಂಡರೆ ಯೋಜನೆಯ ಪರಿಪೂರ್ಣ ಲಾಭ ಪಡೆದುಕೊಳ್ಳಲು ಸಾದ್ಯ. ಈ ಯೋಜನೆಯಿಂದ ಸರಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಬರುವವರ ಸಂಖ್ಯೆ ಸಹ ಜಾಸ್ತಿಯಾಗಿದ್ದು, ಆಸ್ಪತ್ರೆಗಳು ಸೇವೆ ಗುಣಮಟ್ಟ ಹೆಚ್ಚಿಸಿಕೊಳ್ಳಲು ಅನುಕುಲವಾಗಿದೆ. ಚಿಕಿತ್ಸೆಗೆ ಬರುವವರು ತಪ್ಪದೆ ಆರೋಗ್ಯ ಕಾರ್ಡ ಅಥವಾ ಆಧಾರ ಕಾರ್ಡ ಮತ್ತು ರೇಶನ್ ಕಾರ್ಡ ತಂದರೆ ಮಾತ್ರ ಆಯುಷ್ಮಾನ್ ಯೋಜನೆಯ ಪಲಾನುಭವಿಗಳಾಗಿ ಪ್ರಯೋಜನ ಪಡೆಯಲು ಸಾದ್ಯ. ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ಮಟ್ಟದ ಆಸ್ಪತ್ರೆಗಳಿಗೆ ಹೋಗುವಾಗ ತಾಲೂಕು ಆಸ್ಪತ್ರೆಯ ವೈದ್ಯರುಗಳನ್ನು ಭೇಟಿ ಮಾಡಿ ರೆಫರಲ್ ಪಡೆದುಕೊಂಡರೆ ಮಾತ್ರ ಆಯುಷ್ಮಾನ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳುಬಹುದು.ಆದ್ದರಿಂದ ಸರಿಯಾದ ಮಾಹಿತಿ ಇದ್ದರೆ ಮಾತ್ರ ಯೋಜನೆಯ ಪರಿಪೂರ್ಣ ಲಾಭ ಪಡೆಯಲು ಸಾದ್ಯ”ಎಂದು ಹೇಳಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿ ಯವರು ಮಾತನಾಡುತ್ತ “ಆಯುಷ್ಮಾನ್ ಯೋಜನೆ ನಮ್ಮ ಆಸ್ಪತ್ರೆಯಲ್ಲಿ ಉತ್ಯುತ್ತಮವಾಗಿ ಜಾರಿಯಾಗುತ್ತಿದ್ದು ರಾಜ್ಯ ಮಟ್ಟದಲ್ಲಿ ಆಸ್ಪತ್ರೆ ಗುರುತಿಸಿಕೊಳ್ಳುವಂತಾಗಿದೆ. ಆಸ್ಪತ್ರೆಯ ಸುಧಾರಣೆಗೆ, ಉತ್ತಮ ಚಿಕಿತ್ಸೆ ನೀಡಲು ಅನೂಕೂಲವಾಗಿದೆ. ಇದರ ಯಶಸ್ವಿಗೆ ಆಸ್ಪತ್ರೆಯ ಸಮಸ್ತ ವೈದ್ಯರುಗಳು ಮತ್ತು ಸಿಬ್ಬಂದಿಗಳ ಪರಿಶ್ರಮವೇ ಕಾರಣ” ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಎಲ್ಲ ತಜ್ಞ ವೈದ್ಯರುಗಳು, ಸಿಬ್ಬಂಧಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಆರೋಗ್ಯ ಮಿತ್ರರಾದ ವೆಂಕಟೇಶ ಪಟಗಾರ ನಿರ್ವಹಿಸಿದ್ದರು. ಇನ್ನೂರ ಐವತ್ತಕ್ಕೂ ಹೆಚ್ಚಿನ ರೋಗಿಗಳು ಶಿಭಿರದಲ್ಲಿ ಭಾಗವಹಿಸಿದರು.


ಹೊನ್ನಾವರ ತಾಲೂಕಾ ಆಸ್ಪತ್ರೆಯ ಆಯುಷ್ಮಾನ್ ಯೋಜನೆಯ ಹೈಲೆಟ್ಸ್
• ಆಯುಷ್ಮಾನ ಆರೋಗ್ಯ ಶಿಭಿರದಲ್ಲಿ ಚಿಕಿತ್ಸೆ ಪಡೆದ ಹೋರ ರೋಗಿಗಳ ಸಂಖ್ಯೆ ೨೭೧
• ಒಳರೋಗಿಯಾಗಿ ಚಿಕಿತ್ಸೆ ಪಡೆದವರ ಸಂಖ್ಯೆ ೯
• ಡೇ ಕೆರ್ ಸಂಖ್ಯೆ ೧೭
• ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಜಾರಿಯಾದಗನಿಂದ ಇಲ್ಲಿಯವರೆಗೆ ಆಯುಷ್ಮಾನ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆದವರ ಒಟ್ಟು ಸಂಖ್ಯೆ ೫೯೬೮
• ಆಯುಷ್ಮಾನ್ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆದ ಕೋವಿಡ್ ಸೊಂಕಿತರು ೫೨೭
• ಆಯುಷ್ಮಾನ್ ಯೋಜನೆ ಉತ್ತಮವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ರಾಜ್ಯಮಟ್ಟದಲ್ಲಿ ಗುರುತಿಸುವಿಕೆ.

error: