April 25, 2024

Bhavana Tv

Its Your Channel

ಅರೇಅಂಗಡಿಯಲ್ಲಿ ಹಾಸ್ಯ ಕಲಾವಿದ ಶ್ರೀಧರ ಹೆಗಡೆ ಕಾಸರಕೋಡ ಆಯೋಜಿಸಿದ ” ಕಾಸರಕೋಡು ಹಾಸ್ಯಯಾತ್ರೆ” ಯಕ್ಷಗಾನ

ಹೊನ್ನಾವರ : ಆಧುನಿಕ ಪ್ರಚಾರದ ಭರಾಟೆಯಲ್ಲಿಯೂ ಯಕ್ಷಗಾನ ಇತರೆ ಕಲೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಪೈಪೋಟಿ ನೀಡುತ್ತಿದೆ ಎಂದು ಜಿ.ಪಂ.ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅಭಿಪ್ರಾಯಪಟ್ಟರು.
ಅರೇಅಂಗಡಿಯಲ್ಲಿ ಹಾಸ್ಯ ಕಲಾವಿದ ಶ್ರೀಧರ ಹೆಗಡೆ ಕಾಸರಕೋಡ ಆಯೋಜಿಸಿದ “ ಕಾಸರಕೋಡು ಹಾಸ್ಯಯಾತ್ರೆ” ಕಾರ್ಯಕ್ರಮ ಉದ್ಘಾಟನೆಯ ಬಳಿಕ ಮಾತನಾಡಿ ಯಕ್ಷಗಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂದಿಗೂ ಶುದ್ದವಾದ ಕನ್ನಡದ ಮೂಲಕ ಜನಮಾನಸದಲ್ಲಿ ಯಕ್ಷಗಾನ ಅಚ್ಚಳಿಯದ ಪ್ರಭಾವಬೀರುತ್ತಿದೆ. ಪೌರಾಣಿಕ ಯಕ್ಷಗಾನಗಳು ಎಷ್ಟುಬಾರಿ ನೋಡಿದರು ಮತ್ತೆ ಮತ್ತೆ ನೋಡಬೇಕು ಎನ್ನುವಷ್ಟು ಕೂತೂಹಲ ಮೂಡಲು ಕಲಾವಿದರ ಪರಿಶ್ರಮ ಕಾರಣವಾಗಿದೆ. ಒರ್ವ ಹಾಸ್ಯಕಲಾವಿದರರಾದ ಶ್ರೀಧರ ಹೆಗಡೆ ಮೂರು ದಿನಗಳ ಕಾಲ ಕಾರ್ಯಕ್ರಮ ಸಂಘಟಿಸಿ ಕಲಾವಿದರಿಗೆ ಪೋತ್ಸಾಹಿಸುವ ಕಾರ್ಯ ಪ್ರಶಂಸನಾರ್ಹ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಕಲಾವಿದ ದತ್ತಮೂರ್ತಿ ಭಟ್ ಮಾತನಾಡಿ ಇಂದು ಯಕ್ಷಗಾನ ಹಲವು ಏಳುಬೀಲುಗಳ ಮಧ್ಯೆ ಸಾಗುತ್ತಿದೆ. ಸರ್ಕಾರ ಯಕ್ಷಗಾನ ಅಕಾಡೆಮಿ ಮಾಡಿದ್ದು, ಇದೀಗ ಅಧ್ಯಕ್ಷರ ಆಯ್ಕೆ ತೆರವಾಗಿ ಬಹು ತಿಂಗಳುಗಳು ಕಳೆದರು ಆಯ್ಕೆ ಮಾಡಲು ಮನಸ್ಸು ಮಾಡುತ್ತಿಲ್ಲ. ಯಕ್ಷಗಾನದ ಧ್ವನಿಯಾಗಲು ಅಧ್ಯಕ್ಷರ ಆಯ್ಕೆ ನಡೆಸುವಂತೆ ಸರ್ಕಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗೆ ಒತ್ತಾಯಿಸಿದರು. ನೆರೆಯ ದಕ್ಷಿಣ ಕನ್ನಡ ಮೇಳಗಳು ಬಾಕ್ಸ ಆಫಿಸನಲ್ಲಿ ಲಾಭ ಗಳಿಸುವಲ್ಲಿ ಉತ್ತರಕನ್ನಡ ಜಿಲ್ಲೆಯ ಕಲಾವಿದರ ಪಾತ್ರ ಬಹುದೊಡ್ಡದಾಗಿದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಉದ್ಯಮಿ ಐ.ಎಸ್.ಹೆಗಡೆ, ಗಣಪತಿ ಬಾಲಕೃಷ್ಣ ಕಮಟೆ, ನಿವೃತ್ತ ಶಿಕ್ಷಕಿ ಪಾರ್ವತಿ ಹೆಗಡೆ ಉಪಸ್ಥಿತರಿದ್ದರು. ಉಪನ್ಯಾಸಕ ಕೆ.ಎಸ್.ಹೆಗಡೆ ಸ್ವಾಗತಿಸಿ ಪ್ರಶಾಂತ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಕಲಾವಿದರ ಕೂಡುವಿಕೆಯಲ್ಲಿ ಪೌಂಡಕ-ನರಕಾಸುರ ಯಕ್ಷಗಾನ ಪ್ರದರ್ಶನಗೊಂಡಿತು.

error: