April 18, 2024

Bhavana Tv

Its Your Channel

ಸಾಹಿತ್ಯವು ಸಂವೇದನೆಯನ್ನು ತಿದ್ದುತ್ತದೆ-ಡಾ ಸಂಧ್ಯಾ ಹೆಗಡೆ

ಹೊನ್ನಾವರ ; ಸರ್ವರ ಒಳಿತನ್ನು ಬಯಸುವದೇ ನಿಜವಾದ ಸಾಹಿತ್ಯ ಅದು ನಮ್ಮ ಸಂವೇದನೆಗಳನ್ನು ವಿಸ್ತರಿಸಿ ಅನುಭವವನ್ನು ಹೆಚ್ಚಿಸುವಂತಿರಬೇಕು ಓದುವುದನ್ನು ನಿಲ್ಲಿಸಿದಾಗ ಜನ ಯೋಚಿಸುವದನ್ನು ನಿಲ್ಲಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ನಿರಂತರ ಓಡನಾಟ ಮತ್ತು ಓದಿನ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಡಾ ಸಂಧ್ಯಾ ಹೆಗಡೆ ದೊಡ್ಡೊಂಡ ಬೆಂಗಳೂರು ಹೇಳಿದರು.

ಹೊನ್ನಾವರ ಎಸ್.ಡಿ.ಎಮ್ ಪದವಿ ಕಾಲೇಜಿನ ಆರ್ ಎಸ್ ಹೆಗಡೆ ಸಭಾಭವನದಲ್ಲಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಸಾಹಿತ್ಯದ ಓದು ಹೇಗೆ ಮತ್ತು ಯಾಕೆ? ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸಾಹಿತ್ಯವು ಮನುಷ್ಯನ ಅಹಂಕಾರವನ್ನು ಕರಗಿಸಿ ಅರಿವನ್ನು ಅರಳಿಸಬೇಕು ಓದಿನಿಂದ ವ್ಯಕ್ತಿಗೆ ಆತ್ಮವಿಶ್ವಾಸ , ಗಟ್ಟಿತನ, ಕಷ್ಟಗಳನ್ನು ಎದುರಿಸುವ ಶಕ್ತಿ ಬರುತ್ತದೆ ಸಾಹಿತ್ಯವು ನಮ್ಮ ಸಂವೇದನೆಯನ್ನು ತಿದ್ದಿ ತೀಡುತ್ತದೆ. ನಮ್ಮ ವೇದನೆಯನ್ನು ದೂರಮಾಡುತ್ತದೆ. ಇತಿಹಾಸದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳೆಲ್ಲರೂ ಪುಸ್ತಕದಿಂದ ಪ್ರೇರೇಪಿತರಾದವರೇ ಆಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ ವಿಜಯಲಕ್ಷಿö್ಮ ಎಂ ನಾಯ್ಕ ಮಾತನಾಡಿ ಪುಸ್ತಕ ಓದುವವರು ಯಾವಗಲೂ ಮೊಬೈಲ್ ನೋಡುವವರನ್ನು ಆಳುತ್ತಾರೆ ವಿದ್ಯಾರ್ಥಿಗಳು ತಮಗೆ ಇಷ್ಟವಾಗುವ ಯಾವುದಾದರೂ ಪುಸ್ತಕದ ಕನಿಷ್ಟ ೨ ಪುಟಗಳನ್ನು ದಿನನಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುಸ್ತಕ ಓದಿಗೆ ವಿಶೇಷ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು
ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೋ ನಾಗರಾಜ ಹೆಗಡೆ ಅಪಗಾಲ, ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು ಪ್ರೋ ಪ್ರಶಾಂತ ಮೂಡಲಮನೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

error: