December 3, 2021

Bhavana Tv

Its Your Channel

ಡಾII ಎಂ. ಪಿ. ಕರ್ಕಿಯವರಿಗೆ ಎಂ.ಪಿ.ಇ. ಸೊಸೈಟಿಯಿಂದ ಅಶ್ರುತರ್ಪಣ

ಹೊನ್ನಾವರ: ಸರಳತೆ, ಸಜ್ಜನಿಕೆ, ನೇರನುಡಿ, ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಬದ್ಧತೆಯಂತಹ ಅಪರೂಪದ ಗುಣಗಳ ಗಣಿಯಾಗಿದ್ದ ಡಾII ಎಂ. ಪಿ. ಕರ್ಕಿ ನಮ್ಮನ್ನು ಅಗಲಿರುವುದು ಸಮಾಜಕ್ಕೆ ಮತ್ತು ಎಂ.ಪಿ.ಇ. ಸಂಸ್ಥೆಗೆ ತುಂಬಾ ನೋವಿನ ಸಂಗತಿ ಎಂದು ಎಂ.ಪಿ.ಇ. ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ಎಂ.ಭಟ್ಟ ಹೇಳಿದರು. ಡಾII ಕರ್ಕಿಯವರು ಕಟ್ಟಿ ಬೆಳೆಸಿದ ಎಂ.ಪಿ.ಇ. ಸಂಸ್ಥೆಯ ಆವಾರದಲ್ಲಿ ಮಂಗಳವಾರ ಅವರ ಪಾರ್ಥೀವ ಶರೀರದ ದರ್ಶನ ಪಡೆದು ಅವರು ಮಾತನಾಡಿದರು.
ಎಂ.ಪಿ.ಇ. ಸಂಸ್ಥೆಯ ಆಡಳಿತ ಮಂಡಳಿ ಡಾII ಕರ್ಕಿಯವರನ್ನು ಸದಾ ಸ್ಮರಿಸುತ್ತದೆ. ಸಂಸ್ಥೆಗಾಗಿ ಅವರು ಸಮರ್ಪಣಾಭಾವದಿಂದ ಕೊನೆಯ ಉಸಿರಿನವರೆಗೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ನೆಟ್ಟ ಶಿಕ್ಷಣದ ಸಸಿ ಇಂದು ಹೆಮ್ಮರವಾಗಿ ಬೆಳೆದಿದೆ. ಮೊನ್ನೆ ಮೊನ್ನೆಯವರೆಗೂ ಅವರು ಎಂ.ಪಿ.ಇ. ಸಂಸ್ಥೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು. ಇದು ನಮಗೆಲ್ಲರಿಗೂ ಸ್ಪೂರ್ತಿಯ ಸಂಗತಿಯಾಗಿತ್ತು ಎಂದರು.


ಎಂ.ಪಿ.ಇ. ಸಂಸ್ಥೆಯ ಅಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ, ಖಜಾಂಚಿ ಉಮೇಶ ನಾಯ್ಕ, ನಿರ್ದೇಶಕರಾದ ನಾಗರಾಜ ಕಾಮತ್, ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಡಾ. ಎಂ. ಪಿ. ಕರ್ಕಿಯವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಸದರಾದ ಅನಂತಕುಮಾರ ಹೆಗಡೆ, ಹೊನ್ನಾವರ-ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ, ಶಿವಾನಿ ಮೊದಲಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.

error: