April 26, 2024

Bhavana Tv

Its Your Channel

ನ್ಯೂ ಇಂಗ್ಲಿಷ ಸ್ಕೂಲ್ ವಿದ್ಯಾರ್ಥಿಗಳಿಗೆ ಗೋವು ಸಾಕಣಿಕೆ,ಬೋನ್ಸಾಯಿ ಕೃಷಿಯ ಪ್ರಾತ್ಯಕ್ಷಿಕೆ

ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲಿಷ ಸ್ಕೂಲ್, ಕನ್ನಡ ಮಾಧ್ಯಮದ ಇಕೋಕ್ಲಬ್ ಹಾಗೂ ಸ್ಕೌಟ್-ಗೈಡ್ಸ್ ವಿದ್ಯಾರ್ಥಿಗಳಿಗೆ ಗೋವು ಸಾಕಾಣಿಕೆ ಮತ್ತು ಅಪರೂಪದ ಬೋನ್ಸಾಯಿ ಕೃಷಿಯ ಕುರಿತು ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ನೀಡಲಾಯಿತು.

ಸ್ಕೌಟ ಹಾಗೂ ಗೈಡ್ಸ್ ಮಾರ್ಗದರ್ಶಿ ಶಿಕ್ಷಕರಾದ ಯಶವಂತ ಮೇಸ್ತ ಮತ್ತು ಇಕೋಕ್ಲಬ್‌ನ ಸಂಚಾಲಕ ಶಿಕ್ಷಕಿ ಪವಿತ್ರಾ ಭಟ್ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳನ್ನು ಹೊಸಾಡಾದ ಗೋಶಾಲೆಗೆ ಕರೆದೊಯ್ದು ಗೋವು ಸಾಕಾಣಿಕೆಯ ಪ್ರಾತ್ಯಕ್ಷಿಕೆ, ಗೋವಿನ ಮಹತ್ವ, ಗೋವಿನ ಉತ್ಪನ್ನಗಳ ಮಹತ್ವದ ಕುರಿತಾಗಿ ಮಾಹಿತಿ ನೀಡಲಾಯಿತು. ಕೋವಿಡ್ ನಂತರದ ದಿನಗಳಲ್ಲಿ ಕೋವಿಡ್ ನಿಯಮಾವಳಿಗಳ ಪ್ರಕಾರ ವಿದ್ಯಾರ್ಥಿಗಳು ಕೆಲ ಸಮಯ ವಿವಿಧ ಮಾದರಿಯ ಗೋ ತಳಿಗಳ ಜತೆ ಕಾಲ ಕಳೆದು ಖುಷಿ ಪಟ್ಟರು. ತೀರಾ ಅಪರೂಪವೆನಿಸುವ ಮೂರೂರು ಗ್ರಾವiದ ಕಲ್ಲಬೆಯ ಬೋನ್ಸಾಯಿ ಕೃಷಿ ಕೇಂದ್ರಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಹೊಸ ಮಾದರಿಯ ಕೃಷಿ ಪದ್ಧತಿಯನ್ನು ಅವಲೋಕಿಸಿ ಹಲವಾರು ವಿಷಯಗಳನ್ನು ತಿಳಿದುಕೊಂಡರು. ಬೋನ್ಸಾಯಿ ಕೃಷಿಕರಾದ ಎಲ್. ಆರ್. ಹೆಗಡೆ ಯವರು ಬೋನ್ಸಾಯಿ ಮಾದರಿಯಲ್ಲಿ ಬೆಳೆಸಲಾದ ಹಲವಾರು ಔಷಧಿ ಸಸ್ಯಗಳನ್ನು ಪರಿಚಯಿಸಿದರಲ್ಲದೇ, ಅತ್ಯಂತ ಸಲಭವಾಗಿ ಮಣ್ಣಿನ ಕುಂಡಗಳನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಬೃಹತ್‌ಗಾತ್ರದಲ್ಲಿ ಬೆಳೆಯುವ ಗಿಡಗಳನ್ನು ಮನೆಯಂಗಳದಲ್ಲಿ, ಮನೆಯೊಳಗೆ, ಹಾಗೂ ಮಲಗುವ ಕೋಣೆಗಳಲ್ಲೂ ಕುಂಡದಲ್ಲಿ ಅತೀ ಚಿಕ್ಕದಾಗಿ ಬೆಳೆಸಲು (ಕುಬ್ಜಗಿಡ) ಸಾಧ್ಯವಿದೆ ಎಂದು ತಿಳಿದ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲೂ ಇಂತಹ ಪ್ರಯೋಗ ಮಾಡಲು ಉತ್ಸುಕತೆ ತೋರಿಸಿದರು. ಕೃಷಿ, ಗೋವು ಸಾಕಾಣಿಕೆಯಂತಹ ವಿಷಯಗಳಲ್ಲಿ ವಿದ್ಯಾರ್ಥಿಗಳು ಅನಾಸಕ್ತಿ ತೋರುವ ಈ ಕಾಲಘಟ್ಟದಲ್ಲಿ ಇದೊಂದು ಉತ್ತಮ ಉಪಕ್ರಮವಾಗಿತ್ತು. ಶಿಕ್ಷಕರುಗಳಾದ ರಾಘವೇಂದ್ರ ಹೆಗಡೆ, ಆಶಾ ಮೇಸ್ತ, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಥ ನೀಡಿದರು.

error: