April 26, 2024

Bhavana Tv

Its Your Channel

ಹೊನ್ನಾವರದ ಕರ್ಕಿ ನಾಕಾ ಬಳಿ ಆರಂಭವಾದ ಸಿರಿ ನರ್ಸರಿ

ಹೊನ್ನಾವರದ ಕರ್ಕಿ ನಾಕಾ ಬಳಿ ಇತ್ತೀಚೆಗೆ ಆರಂಭವಾದ ಸಿರಿ ನರ್ಸರಿ ಹೊನ್ನಾವರ ಕುಮಟಾ ಹಾಗೂ ಭಟ್ಕಳ ಸೇರಿದಂತೆ ನೆರೆಯ ತಾಲ್ಲೂಕುಗಳಲ್ಲಿ ಅತ್ಯಂತ ಜನಪ್ರಿಯತೆ ಪಡೆಯುತ್ತಿದೆ.
ಕುಮಟಾ ತಾಲ್ಲೂಕಿನ ಮಿರ್ಜಾನದ ಶ್ರೀನಿವಾಸ ನಾಯ್ಕರವರು ಇದನ್ನು ಆರಂಭಿಸಿದ್ದು, ಜಿಲ್ಲೆಯ ಜನತೆಗೆ ಕೃಷಿಯಲ್ಲಿ ಹೊಸತನದ ಕೊಡುಗೆಯನ್ನು ನೀಡುವ ಭರವಸೆ ಹೊಂದಿದ್ದಾರೆ. ಕೃಷಿಯಲ್ಲಿ ಎಂ ಎಸ್ ಸಿ ಪದವಿಯನ್ನು ಪಡೆದಿರುವ ಶ್ರೀನಿವಾಸ ನಾಯ್ಕ ದೇಶದ ಅನೇಕ ಪ್ರಮುಖ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಸಿರಿ ನರ್ಸರಿಯಲ್ಲಿ ವಿಶಾಲವಾದ ಜಾಗದಲ್ಲಿ ಗಿಡಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲಂಕಾರಿಕ ಗಿಡಗಳೊಂದಿಗೆ ಉತ್ತಮ ತಳಿಯ ಅಡಿಕೆ ಹಾಗೂ ಮಾವಿನ ತಳಿಯ ಸಸಿಗಳು ಲಭ್ಯವಿದೆ. ಸಾಮಾನ್ಯವಾಗಿ ಹೊನ್ನಾವರದ ಸುತ್ತಮುತ್ತಲಿನ ಜನತೆ ಉತ್ತಮ ಹೂವಿನ ಅಥವಾ ಇನ್ನೀತರ ಗಿಡಗಳಿಗಾಗಿ ಬೇರೆಡಗೆ ಹೋಗಬೇಕಾಗಿತ್ತು. ಆದರೆ ಈಗ ಸ್ಥಳೀಯವಾಗಿಯೇ ಲಭ್ಯವಾಗಿರುವುದರಿಂದ ಜನತೆಗೆ ಉತ್ತಮ ಸೌಲಭ್ಯ ದೊರೆದಂತಾಗಿದೆ.
ಈ ಕುರಿತು ಭಾವನಾ ಟಿವಿಯೊಂದಿಗೆ ಮಾತನಾಡಿದ ಸಿರಿ ನರ್ಸರಿಯ ಮಾಲೀಕ ಶ್ರೀನಿವಾಸ ನಾಯ್ಕ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸುರೇಶ್ ಕಾಮತರವರು ಮಾತನಾಡಿ ಸಿರಿ ನರಸರಿ ಜಿಲ್ಲೆಯಲ್ಲಿಯೇ ವಿಶೇಷವಾದ ನರ್ಸರಿ.ಉತ್ತಮವಾದ ಮಾರ್ಗದರ್ಶನ ನೀಡುತ್ತಿರುವ ಶ್ರೀನಿವಾಸ ನಾಯ್ಕರವರ ಅಭಿನಂದನೀಯ ಎಂದರು.

     ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ
error: