April 19, 2024

Bhavana Tv

Its Your Channel

ಹಲಸಂಗಿ ಗೆಳೆಯರ ಸಾಹಿತ್ಯಿಕ ಕೊಡುಗೆ ಅನುಪಮವಾದದ್ದು- ಪ್ರೊ. ನಾಗರಾಜ ಹೆಗಡೆ ಅಪಗಾಲ

ಹೊನ್ನಾವರ :- ಮಧುರ ಚೆನ್ನ, ಸಿಂಪಿ ಲಿಂಗಣ್ಣ, ಪಿ. ಧೂಲಾ ಮತ್ತು ಕಾಪಸೆ ರೇವಪ್ಪ ಮೊದಲಾದ ಗೆಳೆಯರು ‘ಹಲಸಂಗಿ ಗೆಳೆಯರು’ ಎಂಬ ಹೆಸರಿನಲ್ಲಿ ಹತ್ತೊಂಬತ್ತನೇ ಶತಮಾನದ ಪೂರ್ವಾರ್ಧದಲ್ಲಿ ಗೈದಿರುವ ಸಾಹಿತ್ಯಿಕ ಸಾಧನೆ ಅನುಪಮವಾದದ್ದು. ಅವರ ಕಾರ್ಯಚಟುವಟಿಕೆ, ಸಾಹಿತ್ಯ – ಸಾಧನೆ, ಸಿದ್ಧಿಗಳು ಅನನ್ಯವಾದವುಗಳು. ಮೂಲತಃ ಕವಿಗಳಾದ ಅವರೆಲ್ಲ ಸೃಜನಶೀಲ ಸಾಹಿತ್ಯದ ಜೊತೆಜೊತೆಗೆ ನಾಡು-ನುಡಿಯ ಕಾರ್ಯದಲ್ಲಿಯೂ ಅವರು ವೈಯಕ್ತಿಕವಾಗಿ, ಸಾಂಘಿಕವಾಗಿ ಮಾಡಿದ ಕಾರ್ಯ ಅವಿಸ್ಮರಣೀಯವಾಗಿದೆ ಎಂದು ಪ್ರೊ. ನಾಗರಾಜ ಹೆಗಡೆ ಅಪಗಾಲ ಅಭಿಪ್ರಾಯಪಟ್ಟರು.
ಹಲಸಂಗಿ ಗೆಳೆಯರ ಪ್ರತಿಷ್ಠಾನ, ವಿಜಯಪುರ ಹಾಗೂ ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜಿನ ಕನ್ನಡ ಸಂಘಗಳ ಆಶ್ರಯದಲ್ಲಿ ನಡೆದ ಹಲಸಂಗಿ ಗೆಳೆಯರ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾನ ಮನಸ್ಕ, ಸಮಾನ ಅಭಿರುಚಿಯ ಮನಸುಗಳು ಒಂದಾದಾಗ ಇತಿಹಾಸದಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ಅನುಭವಮಂಟಪ, ವ್ಯಾಸಕೂಟ, ದಾಸಕೂಟ, ಧಾರವಾಡ ಗೆಳೆಯರ ಬಳಗ, ಹಲಸಂಗಿ ಗೆಳೆಯರ ಗುಂಪು ಇವೆಲ್ಲವೂ ಕನ್ನಡ ಸಾಹಿತ್ಯದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತ ಕೊಡುಗೆಗಳನ್ನು ನೀಡಿವೆ ಎಂದರು.
ಮತ್ತೋರ್ವ ಉಪನ್ಯಾಸಕರಾದ ಪ್ರೊ. ಪ್ರಶಾಂತ ಹೆಗಡೆ ಮೂಡಲಮನೆ ಅವರು ಹಲಸಂಗಿ ಗೆಳೆಯರ ಕಾವ್ಯ ಸಾಧನೆ ಬಗ್ಗೆ ಮಾತನಾಡಿ, ಹಲಸಂಗಿ ಗೆಳೆಯರ ಕವಿತೆಗಳೆಲ್ಲ ವ್ಯಕ್ತಿನಿಷ್ಠವಾದವುಗಳು. ಆದರ್ಶದ ಕನಸುಗಾರಿಕೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅದಕ್ಕೊಂಡು ಘನತೆಯನ್ನು, ಧನ್ಯತೆಯನ್ನು ತಂದುಕೊಳ್ಳಲು ಹಂಬಲಿಸುತ್ತಿರುವುದು ಹಲಸಂಗಿ ಗೆಳೆಯರ ಪ್ರತಿಯೊಂದು ಕವಿತೆಯಲ್ಲಿ ಎದ್ದು ಕಾಣುವ ಅಂಶವಾಗಿದೆ. ಧ್ಯೇಯವಾದಿತ್ವ, ಆಧ್ಯಾತ್ಮಿಕ ಆದರ್ಶ ಇವೆರಡೂ ಅವÀರ ಕೃತಿಗಳಲ್ಲಿ ಕಂಡುಬರುವ ಮಹತ್ತರ ಅಂಶಗಳಾಗಿವೆ ಎಂದರು.
ಹಲಸAಗಿ ಗೆಳೆಯರ ಪ್ರತಿಷ್ಠಾನ, ವಿಜಯಪುರದ ಸದಸ್ಯ ಸಂಚಾಲಕರಾದ ಡಾ. ಎಸ್. ಕೆ. ಕೊಪ್ಪ ಸರ್ವರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಶ್ರೀಪಾದ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಡಾ. ವಿ. ಎಂ. ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ವಿದ್ಯಾಧರ ಕಡತೋಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

error: