April 24, 2024

Bhavana Tv

Its Your Channel

ನಂಬಿಕೆ ದ್ರೋಹ ಎಸಗಿದ ಆರೋಪಿಗೆ ೨ ವರ್ಷ ಜೈಲು ಶಿಕ್ಷೆ ಮತ್ತು ರೂ. ೨,೦೦೦/- ದಂಡ

ಹೊನ್ನಾವರ ತಾಲೂಕಿನ ಮಾವಿನಕುರ್ವಾ ಹೊಸಾಡ ಶಾಖೆ ಅಂಚೆ ಕಚೇರಿಯಲ್ಲಿ ಬ್ರಾಂಚ್ ಪೋಸ್ಪ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿತನು ೨೦೦೬ನೇ ಸಾಲಿನಲ್ಲಿ ಠೇವಣಿದಾರರ ಖಾತೆಯ ಹಣವನ್ನು ಪಾಸ್ ಪುಸ್ತಕದಲ್ಲಿ ಜಮಾ ತೋರಿಸಿ ಅಂಚೆ ಇಲಾಖೆಯ ದಾಖಲಾತಿಗಳಲ್ಲಿ ಆ ಹಣವನ್ನು ಜಮಾ ತೋರಿಸದೇ ತನ್ನ ಸ್ವಂತಕ್ಕೆ ಉಪಯೋಗಿಸಿ ದುರುಪಯೋಗಪಡಿಸಿಕೊಂಡು ನಂಬಿಕೆ ದ್ರೋಹ ಮಾಡಿದ ಆರೋಪಿ ಸಾ: ಉಪ್ಲೆ ಕಡ್ಡಿ ಗ್ರಾಮದ ಮಹಾಬಲೇಶ್ವರ ಯಾನೆ ರವಿ ಗಣಪತಿ ಭಂಡಾರಿ ಎಂಬುವನ ಮೇಲೆ ದಾಖಲಾದ ೫ ಪ್ರಕರಣಗಳಿಗೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕುಮಾರ ಜಿ. ಯವರು ವಿಚಾರಣೆ ನಡೆಸಿ ೨ ವರ್ಷ ಜೈಲು ಶಿಕ್ಷೆ ಮತ್ತು ರೂಪಾಯಿ ೨,೦೦೦/- ದಂಡ ವಿಧಿಸಿರುತ್ತಾರೆ.

ಆರೋಪಿಯು ದಿನಾಂಕ ೧೩-೦೧-೨೦೦೧ ರಂದು ಹೊನ್ನಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಾವಿನಕುರ್ವಾ ಹೊಸಾಡ ಶಾಖೆ ಅಂಚೆ ಕಚೇರಿಯಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿತನು ೨೦೦೬ನೇ ಸಾಲಿನಲ್ಲಿ ಠೇವಣಿದಾರರಾದ ೧) ಶ್ರೀಮತಿ ಸುಭದ್ರಾ ಗಣಪತಿ ನಾಯ್ಕ ೨) ಗಣಪತಿ ಮಂಜು ಗೌಡ ೩)ಮಾದೇವಿ ಈರಪ್ಪ ನಾಯ್ಕ ೪) ಗಣಪತಿ ಸುಬ್ರಾಯ ಗೌಡ ೫) ಕರಿಯಮ್ಮ ಗೋವಿಂದ ಗೌಡ ಇವರೆಲ್ಲರೂ ತಮ್ಮ ಖಾತೆಯಲ್ಲಿ ಠೇವಣಿ ಇಟ್ಟಂತಹ ಹಣವನ್ನು ಪಾಸ್ ಪುಸ್ತಕದಲ್ಲಿ ಜಮಾ ತೋರಿಸಿದ್ದು ಅಂಚೆ ಇಲಾಖೆಯ ದಾಖಲಾತಿಗಳಲ್ಲಿ ಈ ಮೇಲಿನ ಖಾತೆದಾರರು ಇಟ್ಟಂತಹ ಹಣವನ್ನು ಜಮಾ ತೋರಿಸದೇ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ವಿಶ್ವಾಸ ದ್ರೋಹ ಮಾಡಿದ ಆರೋಪಕ್ಕೆ ಆರೋಪಿತನ ವಿರುದ್ದ ೫ ಪ್ರಕರಣಗಳನ್ನು ದಾಖಲಿಸಿ ಅದರ ಸಿ.ಸಿ.ನಂಬರ – ೭೪/೧೬, ೭೫/೧೬, ೧೧೧/೧೬, ೧೧೨/೧೬, ೧೧೩/೧೬ ರ ಪ್ರಕರಣಕ್ಕೆ ಕಾರಣನಾಗಿದ್ದಾನೆ.

ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಹೊನ್ನಾವರ ಪೊಲೀಸ್ ಠಾಣೆಯ ಆಗಿನ ಪಿ. ಎಸ್. ಐ. ರೇವತಿ ಮತ್ತು ಆಗಿನ ಪಿ. ಎಸ್. ಐ. ವೆಂಕಪ್ಪ ನಾಯಕ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವೆಂಕಟೇಶ ಕೆ. ಗೌಡ ಈ ಪ್ರಕರಣದಲ್ಲಿ ೧೧ ಜನ ಸಾಕ್ಷಿದಾರರನ್ನು ವಿಚಾರಿಸಿ ವಾದಿಸಿದ್ದರು.

error: