January 25, 2022

Bhavana Tv

Its Your Channel

ಶ್ರೀ ಉಪ್ಪೋಣಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಜೃಂಭಣೆಯಿOದ ಸಂಪನ್ನ ಗೊಂಡ ಸಹಸ್ರ ದೀಪೋತ್ಸವ

ಹೊನ್ನಾವರ ತಾಲೂಕಿನ ದೇವಿ ದೇವಸ್ಥಾನಗಳೊಂದಾದ ಉಪ್ಪೋಣಿಯ ಶ್ರೀ ಚಾಮುಂಡೇಶ್ವರಿ ಹಾಗೂ ಪರಿವಾರ ದೇವರ ಸನ್ನಿಧಿಯಲ್ಲಿ ಬುಧುವಾರ ದಂದು ಸಹಸ್ರ ದೀಪೋತ್ಸವ ದೇವಸ್ಥಾನದ ಅರ್ಚಕರಾದ ರವಿ ನಾಯ್ಕ ರವರ ನೇತ್ರತ್ವದಲ್ಲಿ ಅತಿ ವಿಜೃಂಭಣೆಯಿoದ ನೆರೆವೇರಿತು.

ಗೇರುಸೊಪ್ಪಾ ಸೀಮೆ ಮುಖ್ಯಪ್ರಾಣ ದೇವಸ್ಥಾನದ ಅರ್ಚಕರಾದ ಶ್ರೀ ಸೂರಾಲು ಚಂದ್ರಶೇಖರ ಭಟ್ಟ ರವರು ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಬುಧುವಾರ ಸಂಜೆ ದೇವಿಯ ಪೂಜೆ ಕೈಗೊಂಡು ಪ್ರಪ್ರಥಮವಾಗಿ ಸನ್ನಿದಾನದಲ್ಲಿ ದೀಪೋತ್ಸವ ಪ್ರಾರಂಭಿಸಿದ್ದು ಸೂರಾಲು ಚಂದ್ರಶೇಖರ ಭಟ್ಟ ರು ದೇವರರಲ್ಲಿ ಪ್ರಾರ್ಥಯಿಸಿ ದೇವರ ಎದುರಿನ ನಂದಾದೀಪವನ್ನು ಉಜ್ವಲಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ ದೀಪೋತ್ಸವ ಮಹತ್ವ ಕುರಿತು ವಿವರಿಸಿ ಶುಭ ಕೋರಿದರು.

ನಂತರ ಹಾಜರಿದ್ದ ಎಲ್ಲ ಭಕ್ತರು ದೇವಸ್ಥಾನದ ಪ್ರಾಂಗಣ ಹಾಗೂ ದೇವಸ್ಥಾನದ ಆವಾರದಲ್ಲಿ ಇಡಲಾದ ದೀಪವನ್ನು ಉಜ್ವಲಿಸುವ ಮೂಲಕ ದೀಪ ಸೇವೆಯನ್ನು ಕೈಗೊಂಡರು..


ಸಾವಿರಕ್ಕೂ ಹೆಚ್ಚು ದೀಪ ಬೆಳಗಿಸಲಾಯಿತು. ದೇವಸ್ಥಾನದ ಅರ್ಚಕರಾದ ರವಿ ನಾಯ್ಕರು ಬಂದ ಎಲ್ಲ ಭಕ್ತಾಧಿಗಳಿಗೆ ಹಾಗೂ ಸೂರಾಲು ಚಂದ್ರಶೇಖರ ಭಟ್ಟರವರಿಗೆ ಮತ್ತು ಸಹಾಯ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು.


ಜಿ ಹೆಚ್ ನಾಯ್ಕ ಎಲ್ಲರನ್ನೂ ಸ್ವಾಗತಿಸಿದರು ರಾಜೇಶ ನಾಯ್ಕ ಹೆಗ್ಗಾರ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಗೇಂದ್ರ ನಾಯ್ಕ,, ಭವಾನಿಶಂಕರ ನಾಯ್ಕ, ಎಮ್ ಜಿ ನಾಯ್ಕ , ರಾಘವೇಂದ್ರ ನಾಯ್ಕ ಉಪ್ಪೋಣಿ, ಗಜಾನನ ನಾಯ್ಕ ಬೆಂಗಳೂರು, ನಾರಾಯಣ ಮುಡೇಶ್ವರ, ಉಮೇಶ ನಾಯ್ಕ ಕೆಂಬಾಲ ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು.
ದೀಪೋತ್ಸವದ ನಂತರ ಪಲ್ಲಕ್ಕಿ ಉತ್ಸವ ನೆರೆವೇರಿಸಲಾಯಿತು ನಂತರ ಮಹಾ ಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಿತು

error: