April 20, 2024

Bhavana Tv

Its Your Channel

ಹೊನ್ನಾವರದಲ್ಲಿ ವಕೀಲರ ದಿನಾಚರಣೆ

ಹೊನ್ನಾವರ: ತಾವು ತೊಡಗಿಸಿಕೊಂಡ ಕ್ಷೇತ್ರದಲ್ಲಿ ಅಧ್ಯಯನಶೀಲತೆ, ಕಾರ್ಯತತ್ಪರತೆ, ವೃತ್ತಿ ಪ್ರ‍್ರಾಮಾಣೀಕತೆ, ಹಾಗೂ ವೃತ್ತಿಪರತೆಯನ್ನು ಅಳವಡಿಸಿಕೊಂಡಾಗ, ವಕೀಲರಿಗೆ ನ್ಯಾಯದಾನದಲ್ಲಿ ಹೆಚ್ಚು ಶಕ್ತಿಯುತವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೊನ್ನಾವರ ಸಿವಿಲ್ ಜಡ್ಜ್ ಹಿರಿಯ ವಿಭಾಗ ನ್ಯಾಯಾಧೀಶ ಕುಮಾರ ಜಿ. ಅಭಿಪ್ರಾಯಪಟ್ಟರು.

ಅವರು ವಕೀಲರ ಸಂಘ ಏರ್ಪಡಿಸಿದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ವಕೀಲರ ಸಂಘದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಡಾ: ಬಾಬು ರಾಜೇಂದ್ರ ಪ್ರಸಾದ ಅವರ ಜನ್ಮ ದಿನವನ್ನು ವಕೀಲರ ದಿನಾಚರಣೆಯಾಗಿ ಆಚರಿಸುತ್ತಿರುವ ಮಹತ್ವವನ್ನು ವಿವರಿಸಿದರು.

ಅತಿಥಿಗಳಾಗಿ ಆಗಮಿಸಿದ ಜೆ.ಎಮ್.ಎಫ್.ಸಿ ನ್ಯಾಯಾಧೀಶ ಜಿ.ಬಿ ಹಳ್ಳಿಕಾಯಿ ಮಾತನಾಡಿ ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ಹೊತ್ತಿರುವ ವಕೀಲರು ವೃತ್ತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ವಕೀಲ ವೃತ್ತಿ ಪವಿತ್ರವಾದ ಕ್ಷೇತ್ರ. ಅದರಲ್ಲಿ ತೊಡಗಿಕೊಳ್ಳುವ ಶೈಲಿಯಿಂದ ಹೆಸರು, ಸಂಪತ್ತು, ಜನಬೆಂಬಲ ಅರಸಿ ಬರುತ್ತದೆ. ವೃತ್ತಿ ಪಾವಿತ್ರತೆಯನ್ನು, ಪ್ರಾಮಾಣಿಕತೆಯನ್ನು ಉಳಿಸಿಕೊಂಡಷ್ಟು ಎತ್ತರಕ್ಕೆ ಏರಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಉದಯ ನಾಯ್ಕ, ಚಿತ್ತಾರ, ವಕೀಲರು, ಮಾತನಾಡಿ ರಾಷ್ಟçದ ಸ್ವಾತಂತ್ರ ಚಳುವಳಿಯಲ್ಲಿ ಹಾಗೂ ಸಾಮಾಜಿಕ ಹೋರಾಟದಲ್ಲಿ ಪಾಲ್ಗೊಂಡು ದೇಶದ ಜನಪರ ಆಶಯಗಳಿಗೆ ದಿಕ್ಸೂಚಿಯಾದ ವಕೀಲ ವೃತ್ತಿಯ ಘನತೆ ರಕ್ಷಿಸುವ, ಎತ್ತರಿಸುವ ಕಾಪಾಡಿಕೊಳ್ಳುವ ಜವಾಬ್ದಾರಿ ಇಂದಿನ ಹೊಸ ತಲೆಮಾರಿನ ಸವಾಲು ಆಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಜಿ.ವಿ.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರಂಭದಲ್ಲಿ ವಕೀಲರಾದ ಸುಜಾತಾ ಅಡಿ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಸರ್ಕಾರಿ ಅಭಿಯೋಜಕಿ ಸಂಪದಾ ಗುನಗಾ ವಕೀಲರಾದ ಜಿ.ಪಿ.ಹೆಗಡೆ ಕಣ್ಣಿ, ಎಮ್.ಎಸ್.ಭಟ್ಟ ಕಟ್ಟಿU,ೆ ಸತೀಶ ಭಟ್ ಉಳಗೆರೆ, ವಿ.ಎಮ್.ಭಂಡಾರಿ ಇನ್ನಿತರರು ಸಭೆಯನ್ನು ಉದ್ಧೇಶಿಸಿ ಮಾತನಾಡಿದರು. ಶ್ಯಾಮಲಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಸಂಗೀತ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಸರ್ಕಾರಿ ಅಭಿಯೋಜಕ ವೆಂಕಟೇಶ ಗೌಡ, ವಕೀಲರ ಸಂಘದ ಕಾರ್ಯದರ್ಶಿ ಮನೋಜ ಜಾಲಿಸತ್ಗಿ, ಹೆಚ್ಚುವರಿ ಸರ್ಕಾರಿ ಅಭಿಯೋಜಕ ಪ್ರಮೋದ ಭಟ್, ಉಪಸ್ಥಿತಿಯಲ್ಲಿದ್ದರು.

error: