April 25, 2024

Bhavana Tv

Its Your Channel

ಗುಣ ಮಟ್ಟದ ಆಹಾರ ಪೂರೈಸಲು ಅಗತ್ಯ ಕ್ರಮ ವಹಿಸಿ- ಇ.ಓ ಸುರೇಶ ನಾಯ್ಕ

ಹೊನ್ನಾವರ: ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಪೂರ್ಣ ಯೋಜನೆಯಾದ ಅಕ್ಷರ ದಾಸೋಹ ಯೋಜನೆಯು ಹೊನ್ನಾವರ ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಚುನಾಯಿತ ಪ್ರತಿನಿಧಿಗಳು, ಎಸ್.ಡಿ.ಎಮ್.ಸಿ, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳ ಶ್ರಮ ಅತ್ಯಂತ ಮಹತ್ವದ್ದಾಗಿದೆ. ತಾಲೂಕಿನ 294 ಶಾಲೆಗಳಲ್ಲಿ 506 ಅಡುಗೆ ಸಿಬ್ಬಂದಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಯೋಜನೆಗೆ ಮೆರಗು ಬಂದಿದೆ. ಗುಣಮಟ್ಟದ ಆಹಾರ ನೀಡಲು ಸರಕಾರದ ಸುತ್ತೋಲೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರ ಮುಖ್ಯವಾಗಿದೆ. ಎಂದು ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ ನುಡಿದರು. ಅವರು ಇತ್ತೀಚೆಗೆ ಹೊನ್ನಾವರ ತಾಲೂಕಿನ ನ್ಯೂ ಇಂಗ್ಲೀಷ್ ಸ್ಕೂಲ್ ನಲ್ಲಿ ನಡೆದ ಅಡುಗೆ ಸಿಬ್ಬಂದಿಗಳ ತರಬೇತಿಯನ್ನು ಉದ್ದೇಶಿಸಿ ಮಾತಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಎಂ.ಜಿ.ನಾಯ್ಕ ಮಾತನಾಡಿ ಅಡುಗೆ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕ್ಷೀರಭಾಗ್ಯ ಮತ್ತು ಅಕ್ಷರ ದಾಸೋಹ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿರುವುದು ಹೊನ್ನಾವರದ ವಿಶೇಷತೆಯಾಗಿದೆ. ಅಡುಗೆ ಸಿಬ್ಬಂದಿಗಳಿಗೆ ನ್ಯಾಯಯುತವಾಗಿ ಸಿಗುವ ಸೌಲಭ್ಯಗಳು ಸಿಗುವಂತಾಗಬೇಕು ಹಾಗೂ ಅವರ ಸಂಭಾವನೆ ಹೆಚ್ಚಾಗಬೇಕೆಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಸತೀಶ ನಾಯ್ಕ ಕಾರ್ಯಕ್ರಮಕ್ಕೆ ಶುಭಕೋರಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ನ್ಯೂ ಇಂಗ್ಲೀಷ ಸ್ಕೂಲ್ ಮುಖ್ಯಾಧ್ಯಾಪಕರಾದ ಜಯಂತ ನಾಯಕ್ ಮಾತಾನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಎಮ್.ಹೆಗಡೆ, ಅಡುಗೆ ಸಿಬ್ಬಂದಿಗಳ ಸಂಘದ ಅಧ್ಯಕ್ಷರಾದ ಶ್ರೀಮತಿ ನಾಯ್ಕ ಉಪಸ್ಥಿತರಿದ್ದರು. ಸಿ.ಆರ್.ಪಿ ಜಿ.ಆಯ್.ಗೌಡ ಸ್ವಾಗತಿಸಿದರು. ಶಿಕ್ಷಕ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಉದಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಿ.ಆರ್.ಪಿ ಉಲ್ಲಾಸ ನಾಯ್ಕ ವಂದಿಸಿದರು. ಸಿ.ಆರ್.ಪಿ ಮಧುಕರ ಜೋಶಿ, ಉದಯ ಸಂಗನಾಳ ಮತ್ತು ರೇಖಾ ನಾಯ್ಕ ಸಹಕರಿಸಿದರು.

error: