April 24, 2024

Bhavana Tv

Its Your Channel

‘ಜೀವನದಲ್ಲಿ ಬರವಣಿಗೆಗೆ ಮಹತ್ವದ ಪಾತ್ರ’- ಎಸ್. ಡಿ. ಎಮ. ಕಾಲೇಜಿನ ಐ.ಕ್ಯೂ.ಎ.ಸಿ. ಘಟಕದ ಸಂಚಾಲಕ ಡಾ. ಪಿ. ಎಂ. ಹೊನ್ನಾವರ ಅಭಿಪ್ರಾಯ

ಹೊನ್ನಾವರ: ಮನುಷ್ಯನ ಜೀವನದುದ್ದಕ್ಕೂ ಬರವಣಿಗೆಗೆ ಮಹತ್ವದ ಪಾತ್ರವಿದ್ದು, ವಿದ್ಯಾರ್ಥಿಗಳು ಈ ದಿಶೆಯಲ್ಲಿ ತಮ್ಮ ಕೌಶಲ ಉತ್ತಮಪಡಿಸಿಕೊಳಬೇಕು ಎಂದು ಎಸ್. ಡಿ. ಎಮ. ಕಾಲೇಜಿನ ಐ.ಕ್ಯೂ.ಎ.ಸಿ. ಘಟಕದ ಸಂಚಾಲಕ ಡಾ. ಪಿ. ಎಂ. ಹೊನ್ನಾವರ ಅಭಿಪ್ರಾಯಪಟ್ಟರು.
ಇಂಗ್ಲೀಷ್ ಲಿಟರರಿ ಕ್ಲಬ್ ವತಿಯಿಂದ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪತ್ರಿಕೆ ಬ್ಲೂಮ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದಲ್ಲಿ ನಂಬುಗೆಯಿಡಬೇಕು. ಕಲಿಕೆ ನಿರಂತರ ಪ್ರಕ್ರಿಯೆಯಾಗಿದೆ. ಸಕಾರಾತ್ಮಕ ಚಿಂತನೆ ಅಗತ್ಯ. ನಮ್ಮ ಸುತ್ತಮುತ್ತಲು ಘಟನೆಗಳನ್ನು ಅವಲೋಕಿಸಿ ಬರವಣಿಗೆಯ ಮೂಲಕ ಅವುಗಳನ್ನು ದಾಖಲಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯೆ ಡಾ. ವಿಜಯಲಕ್ಷಿö್ಮ ಎಂ. ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಜೊತೆಗೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೆಕು ಎಂದು ಹೇಳಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಎಂ. ಜಿ. ಹೆಗಡೆ ಸ್ವಾಗತಿಸಿದರು. ಇಂಗ್ಲಿಷ್ ಲಿಟರರಿ ಕ್ಲಬ್‌ನ ಕಾರ್ಯದರ್ಶಿ ಅನಿತಾ ನಾಯ್ಕ ಉಪಸ್ಥಿತರಿದ್ದರು.

error: