April 25, 2024

Bhavana Tv

Its Your Channel

ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೊನ್ನಾವರ ಮಹಿಳಾ ಘಟಕ ಸ್ಥಾಪನೆ

ಹೊನ್ನಾವರ ; ರಾಜ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯು ರಾಜ್ಯದ ಎಲ್ಲಾ ಶಾಖೆಗಳಿಗೂ ನೀಡಿದ ಮಾರ್ಗದರ್ಶನದಂತೆ, “ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ” ಬ್ಯಾನರ್ ಅಡಿಯಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೊನ್ನಾವರ ಶಾಖೆಯ ಮಹಿಳಾ ಘಟಕವನ್ನು ಡಾ. ಮಂಜುಳಾY.P ಅವರ ನೇತೃತ್ವದಲ್ಲಿ ಆರಂಭಿಸಲಾಯಿತು. ಭಾ.ವೈ.ವಿ.ಸ೦ಸ್ಥೆ ಹೊನ್ನಾವರ ಶಾಖೆಯ ಅಧ್ಯಕ್ಷರಾದ ಡಾ.ವಿಶಾಲ V ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಡಾ.ಮಂಜುಳಾ Y.P ಅವರ ಹೆಸರನ್ನು ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಡಾ.ವೈಶಾಲಿ ನಾಯ್ಕ ಅವರ ಹೆಸರನ್ನು ಅನುಮೋದಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ.ಅನುಪಮ H.S ಮಾತನಾಡುತ್ತಾ ಸಮಾಜದಲ್ಲಿ ಮಹಿಳಾ ವೈದ್ಯರ ಪಾತ್ರಗಳ ಕುರಿತು ವಿವರಿಸಿದರು. ಡಾ.ಮಂಜುಳಾ Y.P ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರನ್ನು ಸ್ವಾಗತಿಸುತ್ತಾ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಹಿಳಾ ಘಟಕದ ಉದ್ದೇಶಗಳು ಮತ್ತು ಪರಿಕಲ್ಪನೆಗಳ ಕುರಿತು ವಿವರಿಸಿದರು. ಮಹಿಳಾ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ತನಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ತಿಳಿಸಿದರು.

error: