April 17, 2024

Bhavana Tv

Its Your Channel

ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಯುವಕನಿಗೆ ನೆರವಾದ ಹೊನ್ನಾವರದ ರೋಟರಿ ಕ್ಲಬ್

ಹೊನ್ನಾವರ: ಗೇರುಸೊಪ್ಪಾದ 21 ವರ್ಷದ ವಿನಾಯಕ ಪುರಂದರ ನಾಯ್ಕ ರವರು ಎರಡು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು ಆತನ ಜೀವ ಉಳಿಸಿಕೊಳ್ಳಲು ತಾಯಿ ತನ್ನ ಕಿಡ್ನಿ ದಾನ ಮಾಡಲು ಮುಂದಾಗಿದ್ದರು. ಕಿಡ್ನಿ ಜೋಡಣೆಯ ಶಸ್ತç ಚಿಕಿತ್ಸೆಗೆ ಅಂದಾಜು 10 ಲಕ್ಷ ಖರ್ಚಾಗಲಿದ್ದು ತಾಯಿ ಮತ್ತು ಮಗ ತುಂಬ ಬಡ ಕುಟುಂಬದವರಾಗಿದ್ದು ಹಣವಿಲ್ಲದೆ ತೊಂದರೆಯಿAದ ಪರದಾಡುತ್ತಿರುವುದನ್ನು ಗಮನಿಸಿದ ರೋಟರಿ ಕ್ಲಬ್ ಸದಸ್ಯರು ನೆರವಾಗಿದ್ದಾರೆ.
ತಾಲೂಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಆಗಮಿಸಿದ ಯುವಕನಿಗೆ ಬುಧವಾರ ರೋಟರಿ ಕ್ಲಬ್ ಸದಸ್ಯರು ಭೇಟಿಯಾಗಿ 30 ಸಾವಿರ ಧನಸಹಾಯದ ಚೆಕ್ ಯುವಕ ವಿನಾಯ ಹಾಗೂ ತಾಯಿ ರೇಣುಕಾ ನಾಯ್ಕ ಇವರಿಗೆ ಹಸ್ತಾಂತರಿಸಿದರು. ನಂತರ ರೋಟರಿ ಅಧ್ಯಕ್ಷ ಸ್ಟೀಪನ್ ರೋಡ್ರಗ್ರೀಸ್ ಮಾತನಾಡಿ ಕಳೆದ 57 ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯ ಮಾಡಿದ್ದ ರೋಟರಿ ಕ್ಲಬ್ ಜನಮನ್ನಣಿ ಪಡೆದಿದೆ. ತಾಯಿಯೇ ಕಿಡ್ನಿ ದಾನ ಮಾಡಲು ಮುಂದಾಗಿದ್ದು, ಆರ್ಥಿಕ ಸಂಕಷ್ಟದ ಸ್ಥಿತಿ ಮನಗಂಡು ರೋಟರಿ ಸದಸ್ಯರು ಒಗ್ಗೂಡಿ ಇಂದು ಆರ್ಥಿಕ ನೆರವು ನೀಡುತ್ತಿದ್ದೇವೆ. ಸಂಘ ಸಂಸ್ಥೆಯವರು ಸಾರ್ವಜನಿಕರು ನೆರವಾಗಲಿ. ಯುವಕ ಚಿಕಿತ್ಸೆ ಪಡೆದು ಶೀಘ್ರ ಗುಣಮುಖವಾಗಿ ನಮ್ಮೊಂದಿಗೆ ಗುರುತಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ, ಅಧಿಕ್ಷಕರಾದ ಶಶಿಕಲಾ ನಾಯ್ಕ, ರೋಟರಿ ಕಾರ್ಯದರ್ಶಿ ಮಹೇಶ ಕಲ್ಯಾಣಪುರ, ಸೂರ್ಯಕಾಂತ ಸಾರಂಗ, ಸತ್ಯ ಜಾವಗಲ್, ದಿನೇಶ ಕಾಮತ್, ವಿ.ಜಿ.ನಾಯ್ಕ, ದೀಪಕ ಲೋಪೀಸ್, ಪ್ರಕಾಶ ರೋಡಗ್ರೀಸ್, ಡಾ ರಮೇಶ ಗೌಡ, ಡಾ. ಗುರುದತ್ತ ಕುಲಕರ್ಣಿ, ಆಪ್ತಸಹಾಯಕ ವಿನಾಯಕ ಪಟಗಾರ ಮತ್ತಿತರರು ಉಪಸ್ಥಿತರಿದ್ದರು.

error: