April 23, 2024

Bhavana Tv

Its Your Channel

ಅಳ್ಳಂಕಿಯ ಪದವಿ ಪೂರ್ವ ಕಾಲೇಜಿನಲ್ಲಿ ಯುವ ಸಪ್ತಾಹ ಕಾರ್ಯಕ್ರಮ

ಹೊನ್ನಾವರ: ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಕಾರವಾರ, ತಾಲೂಕಾ ಯುವ ಒಕ್ಕೂಟ ಹೊನ್ನಾವರ ಶ್ರೀ ಶಂಭುಲಿoಗೇಶ್ವರ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಮೂಡ್ಕಣಿ ಇವರ ಸಹಯೋಗದಲ್ಲಿ ಅಳ್ಳಂಕಿಯ ಪದವಿ ಪೂರ್ವ ಕಾಲೇಜಿನಲ್ಲಿ ಯುವ ಸಪ್ತಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ನಾಯ್ಕ ಮಾತನಾಡಿ ಯುವ ಜನರ ಸ್ಪೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆAದಿಗೂ ಪ್ರಸ್ತುತ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು ಯುವ ಜನರ ಮೇಲೆ ಪ್ರಭಾವ ಬೀರುವುದರಿಂದ ಸ್ವಾಮಿ ವಿವೇಕಾನಂದರು ಯುವ ಜನರಿಗೆ ಆದರ್ಶರಾಗಿದ್ದಾರೆ. ಪ್ರತಿಯೊಬ್ಬರು ವಿವೇಕಾನಂದರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪನ್ಯಾಸಕ ಮಹೇಶ ಹೆಗಡೆ ಮಾತನಾಡಿ ಎಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಕರಿಗೆ ಕರೆಕೊಟ್ಟ ವಿವೇಕಾನಂದರಿಗೆ ಯುವ ಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವ ಶಕ್ತಿಗಿಂತ ಮಿಗಿಲಾದ್ದು ಯಾವುದು ಇಲ್ಲ ಯುವ ಜನರಲ್ಲಿ ಸದಾ ಧನಾತ್ಮಕ ಚಿಂತನೆ ಇರಬೇಕು.ಆಶಾಭಾವ ಇದ್ದಲ್ಲಿ ಜೀವನದಲ್ಲಿ ಗುರಿ ತಲುಪಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಪಾನ್ಯಾಸಕ ಹರೀಶ ಮೇಸ್ತ ಮಾತನಾಡಿ ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ಮಾಡಿದ ಬಾಷಣ ರಾಷ್ಟçದ ಸಂಸ್ಕೃತಿಯನ್ನು ಎತ್ತಿ ಹಿಡಿದಿತ್ತು ಇದರಿಂದ ಭಾರತ ದೇಶದ ಶ್ರೀಮಂತ ಸಂಸ್ಕೃತಿ , ಪರಂಪರೆ ಆಚಾರ ವಿಚಾರಗಳು ಇಡಿ ವಿಶ್ವಕ್ಕೆ ತಿಳಿಯುವಂತಾಯಿತು. ಇಂದಿನ ಯುವಜನರು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತಿಳಿದು ಬಲಿಷ್ಟ ರಾಷ್ಟç ನಿರ್ಮಾಣಕ್ಕೆ ಕೈಜೊಡಿಸುವಂತಾಗಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಯುವ ಸಂಘದ ಉಪಾಧ್ಯಕ್ಷ ಮೇಘರಾಜ ಆಚಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿವೇಕಾನಂದರ ಕುರಿತು ಎರ್ಪಡಿಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

error: