March 29, 2024

Bhavana Tv

Its Your Channel

ಮಟ್ಟಿನಗದ್ದೆ ಕುಗ್ರಾಮಕ್ಕೆ ಕರುನಾಡ ವಿಜಯ ಸೇನೆ ಭೇಟಿ

ಹೊನ್ನಾವರ ತಾಲೂಕಿನ ಗೆರುಸೊಪ್ಪಾದ ಮಟ್ಟಿನಗದ್ದೆ ಎಂಬ ಕುಗ್ರಾಮಕ್ಕೆ ಕರುನಾಡ ವಿಜಯ ಸೇನೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯ ಸಿಗದೇ ವಂಚಿತರಾಗಿರುವ ಜನರನ್ನು ಸಂಪರ್ಕಿಸಿ ಅವರೊಂದಿಗೆ ಚರ್ಚೆ ಮಾಡಿದರು.
ಗ್ರಾಮದ ಜನರು ಹಲವು ವರ್ಷಗಳಿಂದ ಮೂಲಭೂತ ಸೌಕರ್ಯ ಅದರಲ್ಲಿ ಮುಖ್ಯವಾಗಿ ವಿದ್ಯುತ್ ಸಂಪರ್ಕ, ರಸ್ತೆ ಸಂಪರ್ಕ,ಸರಿಯಾಗಿ ಶಾಲೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ಜನರನ್ನು ಕಂಡು ಅವರಿಗೆ ಸಿಗುವಂತ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುತ್ತೇವೆ ಎಂದು ಅವರಿಗೆ ಭರವಸೆ ಕೊಡಲಾಯಿತು ಹಾಗೆ ಅಲ್ಲಿಯ ಹಲವಾರು ಜನರು ಕರುನಾಡ ವಿಜಯ ಸೇನೆಗೆ ಸೇರ್ಪಡೆಯಾದರು. ಸುಮಾರು 80 ಕ್ಕೂ ಹೆಚ್ಚು ಮನೆಗಳಿದ್ದು ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತರಾಗಿದ್ದಾರೆ.ಗ್ರಾಮಕ್ಕೆ ನಾಲ್ಕುವರೆ ಕೋಟಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಜಾರಿಯಾಗಿ ದೆ ಹಾಗು ಕಾಮಗಾರಿಯ ಮೊತ್ತವನ್ನು ಸಹ ಉಲ್ಲೇಖಿಸಿ ಫಲಕ ಅಳವಡಿಸಲಾಗಿದೆ. ಆದರೆ ಕಾಮಗಾರಿ ಮಾತ್ರ ಇನ್ನೂ ಮುಂದುವರೆದಿಲ್ಲ ಅಲ್ಲಿಯ ಜನರು ಹೇಳುವುದೆಂದರೆ ರಾಜಕಾರಣಿಗಳು ತಮ್ಮನ್ನ ಕೇವಲ ಚುನಾವಣೆಗೆ ಸೀಮಿತವಾಗಿಟ್ಟಿದ್ದಾರೆ ಎಂಬುದೇ ಅವರ ಗೋಳು. ಇಂತಹ ಹಲವಾರು ಸಮಸ್ಯೆಗಳನ್ನು ಆಲಿಸಿ ಉಪ್ಪೊಣಿ ಗ್ರಾಮ ಪಂಚಾಯತ್ ಗೆ ಹೋಗಿ ಎಲ್ಲಾ ಸಮಸ್ಯೆ ಸರಿಪಡಿಸಲು ಅಲ್ಲಿ ಪಿಡಿಒ ಅವರನ್ನು ಭೇಟಿಯಾಗಿ ಇನ್ನು ಹತ್ತು ದಿನದಲ್ಲಿ ಸಾಮನ್ಯ ಸಭೆ ಕರೆದು ಶೀಘ್ರದಲ್ಲಿ ಅಲ್ಲಿಯ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕರುನಾಡ ವಿಜಯ ಸೇನೆ ಆಗ್ರಹಿಸಿದರು

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರು ವಿನಾಯಕ ಆಚಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಾಯ್ಕ್ ಹಡಿಕಲ್, , ಯುವ ಘಟಕ ಅಧ್ಯಕ್ಷರು ರಾಘವೇಂದ್ರ ನಾಯ್ಕ,ಉಪಾಧ್ಯಕ್ಷರಾದ ನಿತಿನ್ ಆಚಾರ್ಯ, ಹಾಗೂ ಮಟ್ಟಿನಗದ್ದೆಯಲ್ಲಿ ನೂತನವಾಗಿ ಸೆರ್ಪಡೆಯಾದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.

error: