
ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಲು ಬಂದಿದ್ದಾರೆ ಎಂದು ಹೊನ್ನಾವರದ ನಿವಾಸಿ ತುಳಸಿದಾಸ ಗಣಪತಿ ಪಾವಸ್ಕರ ಎನ್ನುವವರು ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಿದ್ದಾರೆ.
ಹೊನ್ನಾವರ ; ಬಜಾರ ರಸ್ತೆಯ ತೇಲಂಗ ಕಾಂಪ್ಲೆಕ್ಷನಲ್ಲಿನ ಅಂಗಡಿಯಲ್ಲಿ ತುಳಸಿದಾಸ ಗಣಪತಿ ಪಾವಸ್ಕರ ಎನ್ನುವವರು ಚಪ್ಪಲಿ ಅಂಗಡಿಯನ್ನು ನಡೆಸುತ್ತಿದ್ದು ದಿನಾಂಕ 21/01/2022ರ ಶುಕ್ರವಾರ ಕಟ್ಟಡದ ಮಾಲಿಕತ್ವಕ್ಕೆ ಸಂಭAಧ ಪಟ್ಟ ವ್ಯಕ್ತಿಗಳು ಸುಮಾರು 5 ಜನ ಸ್ವಿಪ್ಟ ವಿಡಿಐ ಕಾರಿನಿಂದ ಇಳಿದು ಬಂದು ತಮ್ಮ ಚಪ್ಪಲಿ ಅಂಗಡಿಯನ್ನು ಅಕ್ರಮ ಪ್ರವೇಶ ಮಾಡಿ ” ಅವಾಚ್ಯ ಶಬ್ದಗಳಿಂದ ಬೈದು ಅಂಗಡಿಯನ್ನು ಬಿಟ್ಟು ಹೋಗಿ ಇಲ್ಲದಿದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ನಿಮ್ಮ ಕೊಲೆ ಮಾಡಿ ಈ ಅಂಗಡಿಯಿAದ ಹೊರಹಾಕುತ್ತೇವೆ, ನೀವು ಈ ಅಂಗಡಿಯಲ್ಲಿ ಹೇಗೆ ವ್ಯಾಪಾರ ಮಾಡುತ್ತಿರಿ ನಾವು ನೋಡುತ್ತೇವೆ, ನಿಮಗೆಲ್ಲ ವ್ಯಾಪಾರ ಮಾಡಲು ಬಿಡಬಾರದು ನೀವು ಚಪ್ಪಲಿ ಹೊಲಿಯುವುದಕ್ಕೆ ಲಾಯಕ್ಕು ಎಂದು ಅವಾಚ್ಯ ಶಬ್ಬಗಳಿಂದ ಬೈದಿರುತ್ತಾರೆ.
ಅಲ್ಲದೇ ಪ್ರಿಯಾ ತುಳಸಿದಾಸ ಪಾವಸ್ಕರ ಇವಳನ್ನು ಸಹ ಬೈದಿದ್ದು ನೀನು ಈ ಅಂಗಡಿಯಲ್ಲಿ ಏನು ಮಾಡುತ್ತಿರುವೆ” ಎಂದು ಬೈದು ಜೊತೆ ವಿಕೃತವಾಗಿ ನಡೆದುಕೊಂಡಿರುವುದಲ್ಲದೆ ನನ್ನ ನಡತೆಯ ಬಗ್ಗೆ, ಅವಹೇಳನಕಾರಿಯಾಗಿ ಬೈದಿರುತ್ತಾರೆ, ನಾವು ಪರಿಶಿಷ್ಟ ಜಾತಿಯವರಾಗಿದ್ದು ಈ ಆರೋಪಿಗಳು ಮೇಲ್ಜಾತಿಯವರಾಗಿದ್ದು ಧಾರವಾಡದಿಂದ ಬಾಡಿಗೆ ರೌಡಿಗಳನ್ನು ಕರೆದು ತಂದು ಕೊಲೆ ಬೆದರಿಕೆ ಹಾಕಿರುವುದಲ್ಲದೆ ನಮ್ಮ ವ್ಯಾಪಾರಕ್ಕೆ ಅಡ್ಡಿಯನ್ನುಂಟು ಮಾಡಿರುತ್ತಾರೆ ಈ ಆರೋಪಿಗಳು ರೌಡಿ ಮತ್ತು ಪುಂಡಫೋಕರಿಗಳಾಗಿದ್ದು ಯಾವುದೇ ಸಂದರ್ಭದಲ್ಲೂ ನಮ್ಮ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳಿರುವುದರಿಂದ ಇವರಿಂದ ನಮಗೆ ರಕ್ಷಣೆ ನೀಡುವುದಲ್ಲದೇ ಇವರ ವಿರುದ್ದ ಪರಿಶಿಷ್ಟ ಜಾತಿ ಬುಡಕಟ್ಟು ಜನಾಂಗ ದೌರ್ಜನ್ಯ ಪ್ರತಿಬಂಧಕ ತಿದ್ದುಪಡಿ ಕಾಯ್ದೆ 2016ರ ರಡಿಯಲ್ಲಿ ಪ್ರಕರಣ ದಾಖಲಿಸುವಂತೆ ಪೋಲಿಸ್ ಠಾಣೆಯಲ್ಲಿ ಕೇಸನ್ನು ತುಳಸಿದಾಸ ಗಣಪತಿ ಪಾವಸ್ಕರ ಮತ್ತು ಪ್ರಿಯಾ ತುಳಸಿದಾಸ ಪಾವಸ್ಕರ ನೀಡಿರುತ್ತಾರೆ.
ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಖೆ ಮುಂದುವರಿದಿದೆ.

More Stories
ಕಾಸರಕೋಡ ಟೊ0ಕಾದಲ್ಲಿ ಸ್ಥಳೀಯ ಹೋರಾಟಗಾರರ ಮತ್ತು ಗುತ್ತಿಗೆ ಪಡೆದ ಕಂಪನಿಯವರ ನಡುವೆ ನಡೆದ ಜಗಳದ ವಿಡಿಯೋ ವೈರಲ್
ಹೊನ್ನಾವರ ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ
ಹೊನ್ನಾವರ ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ‘ಜನ ಸೇವೆಗಾಗಿ ನಾವು ನೀವು’ ಅಧಿಕಾರಿಗಳ ಸಭೆ