March 29, 2024

Bhavana Tv

Its Your Channel

ಕಾಸರಕೋಡ ಟೊ0ಕಾದಲ್ಲಿ ಸ್ಥಳೀಯ ಹೋರಾಟಗಾರರ ಮತ್ತು ಗುತ್ತಿಗೆ ಪಡೆದ ಕಂಪನಿಯವರ ನಡುವೆ ನಡೆದ ಜಗಳದ ವಿಡಿಯೋ ವೈರಲ್

ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊ0ಕಾದಲ್ಲಿ ವಾಣಿಜ್ಯ ಬಂದರು ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಸಮಯದಲ್ಲಿ ಸ್ಥಳೀಯ ಹೋರಾಟಗಾರರು ಮತ್ತು ಗುತ್ತಿಗೆ ಪಡೆದ ಕಂಪನಿಯವರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದ ವಿಡಿಯೋ ವೈರಲ್ ಆಗಿದ್ದು. ಕಂಪನಿಗೆ ಸಂಬAಧ ಪಟ್ಟವರು ಎನ್ನಲಾದದವರ ಕೈಯಲ್ಲಿ ರಾಡ್ ಮಾದರಿಯ ವಸ್ತು ಹಿಡಿದು ಓಡಾಡುತ್ತಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕಳೆದ ಎರಡು ವರ್ಷದಿಂದ ಬಂದರು ಕಾಮಗಾರಿ ವಿಷಯಕ್ಕೆ ಸಂಬAಧ ಪಟ್ಟಂತೆ ಸ್ಥಳೀಯ ಮೀನುಗಾರರು, ಗುತ್ತಿಗೆ ಪಡೆದ ಕಂಪನಿ ಮತ್ತು ಸರಕಾರದ ನಡುವೆ ತಿಕ್ಕಾಟ ನಡೆಯುತ್ತಲೆ ಇದ್ದು, ದಿನಕ್ಕೊಂದರAತೆ ದೂರು ಪ್ರತಿ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಲೆ ಇದೆ.

ಶುಕ್ರವಾರ ಬೆಳಿಗ್ಗೆ ಸಮಯದಲ್ಲಿ ಬಂದರು ವಿರೋಧಿ ಹೋರಾಟಗಾರರು ಮತ್ತು ಶ್ರೀ ಚಕ್ರ ಎಕ್ಸಿಮ್ ಕಂಪನಿಯ ರಮೇಶ ನಾಯ್ಕ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಅವರ ಜೊತೆ ಇರುವ ಕೆಲವರು ಕೈಯಲ್ಲಿ ರಾಡ್ ಮಾದರಿಯ ವಸ್ತು ಹಿಡಿದು ಓಡಾಡುತ್ತಿರುವ ದ್ರಶ್ಯ ಆತಂಕಕ್ಕೆ ಕಾರಣವಾಗಿದೆ.

ಕಳೆದ ಆರು ತಿಂಗಳ ಹಿಂದೆ ಪೊಲೀಸ್ ಭದ್ರತೆಯಲ್ಲಿ ರಸ್ತೆ ಕಾಮಗಾರಿ ಪ್ರಾರಂಭ ಮಾಡಲಾಗಿತ್ತು. ಆರು ತಿಂಗಳು ಕಳೆದರು ರಸ್ತೆ ಕೆಲಸ ಮುಗಿಯಲೇ ಇಲ್ಲ. ಇಷ್ಟು ವಿಳಂಬ ಯಾಕೆ ಅನ್ನುವುದು ಕೂಡ ಮೀನುಗಾರರ ಪ್ರಶ್ನೆಯಾಗಿದೆ.

ಹಲವು ಟ್ರಕ್ ಗಳೊಂದಿಗೆ ಕೆಲಸ ಮಾಡುತ್ತಿದ್ದಾಗ ಇಲ್ಲಿ ಯಾಕೆ ಕೆಲಸ ಮಾಡುತ್ತೀರಿ ಎಂದು ಮೀನುಗಾರರು ಪ್ರಶ್ನೆ ಮಾಡಿದಾಗ ಗುತ್ತಿಗೆದಾರ ರಮೇಶ ನಾಯ್ಕ ಏರು ದ್ವನಿಯಲ್ಲಿ ಮಾತನಾಡಿದ ವಿಡಿಯೋ ಹರಿದಾಡುತ್ತಿದೆ.

ಪ್ರಕರಣಕ್ಕೆ ಸಂಬAಧ ಪಟ್ಟಂತೆ ಕಾಸರಕೋಡ ಟೊ0ಕಾ ನಿವಾಸಿ ಬಂದರು ವಿರೋಧಿ ಹೋರಾಟಗಾರರಲ್ಲಿ ಪ್ರಮುಖರಾಗಿರುವ ರಾಜೇಶ ಈಶ್ವರ ತಾಂಡೇಲ ಪೊಲೀಸ್ ದೂರು ನೀಡಿದ್ದಾರೆ.

ಕಾಸರಕೋಡ ಟೊ0ಕಾ ಕಡಲತೀರದ ದಕ್ಷಿಣ ಭಾಗದ ಮರಳು ತೀರದಲ್ಲಿ ಜಗದೀಶ ತಿಮ್ಮಪ್ಪ ನಾಯ್ಕ ತುಂಬೋಳ್ಳಿ, ರಮೇಶ ತಿಮ್ಮಪ್ಪ ನಾಯ್ಕ ತುಂಬೋಳ್ಳಿ ಹಾಗೂ ಮತ್ತೊಬ್ಬ ಆರೋಪಿತ ಸೇರಿ ಭಾರಿ ಸರಕು ವಾಹನ ಮತ್ತು ಎರಡು ಕಾರಿನೊಂದಿಗೆ ಅಕ್ರಮವಾಗಿ ಆಗಮಿಸಿ ಸಿ. ಆರ್. ಜಡ್ ವ್ಯಾಪ್ತಿಯಲ್ಲಿ ಸಹಚರರೊಂದಿಗೆ ಸಿಮೆಂಟ್ ಮಿಶ್ರಿತ ಜಲ್ಲಿ ಕಲ್ಲು ಸುರಿಯುತ್ತಿದ್ದಾಗ, ಯಾವುದಾದರು ಇಲಾಖೆಯ ಅನುಮತಿ ಸಿಕ್ಕಿದೆಯಾ ಎಂದು ಪ್ರಶ್ನಿಸಿದಕ್ಕೆ ಏಕಾ ಏಕಿ ಮೂವರು ಆರೋಪಿತರು ಅಡ್ಡಗಟ್ಟಿ ಹಿಡಿದುಕೊಂಡು ಕಾರಿನಲ್ಲಿದ್ದ ರಾಡಿಗೆ ಹೋಲುವವಸ್ತುವಿನಿಂದ ಹಲ್ಲೆಗೆ ಮುಂದಾಗಿ ಅವಾಚ್ಯ ಶಬ್ದಗಳಿಂದ ಬೈದು ನೀನು ಎರಡು ಸಲ ಬದುಕಿ ಉಳಿದಿದ್ದಿಯಾ ಇನ್ನೊಮ್ಮೆ ನಿನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

error: