March 25, 2024

Bhavana Tv

Its Your Channel

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಸಂಘದ ವತಿಯಿಂದ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ

ಹೊನ್ನಾವರ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಸಂಘದ ವತಿಯಿಂದ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ ಸರ್ಕಾರಿ ನೌಕರರ ಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ತಹಶೀಲ್ದಾರ ನಾಗರಾಜ ನಾಯ್ಕಡ್ ಉದ್ಘಾಟಿಸಿದರು. ನಂತರ ಮಾತನಾಡಿ ಸರ್ಕಾರಿ ನೌಕರರು ದಿನನಿತ್ಯದ ಕಾರ್ಯ ಒತ್ತಡದ ನಡುವೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧನೆ ಮಾಡುತ್ತಿದ್ದಾರೆ. ಆ ಮೂಲಕ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿರುವದಕ್ಕೆ ತಾಲೂಕ ಆಡಳಿತದ ಪರವಾಗಿ ಅಭಿನಂದಿಸಿದರು. ಅದೇ ರೀತಿ ತಮ್ಮ ಸೇವಾ ಚಟುವಟಿಕೆಯಲ್ಲಿ ಸಾರ್ವಜನಿರಿಗೆ ಉತ್ತಮ ಸೇವೆ ನೀಡುವ ಮೂಲಕ ಕತ್ಯರ್ವ ನಿಭಾಯಿಸುವ ಮೂಲಕ ಜನಸ್ನೇಹಿ ಅಧಿಕಾರಿಯಾಗುವಂತೆ ಸಲಹೆ ನೀಡಿದರು.
ತಾ.ಪಂ. ಆಡಳಿತಾಧಿಕಾರಿ ವಿನೋಧ ಅನ್ವೇಕರ್ ಮಾತನಾಡಿ ನಮ್ಮೆಲ್ಲರ ಮೇಲೆ ಕಾರ್ಯಾಂಗದ ಉನ್ನತ ಜವಬ್ದಾರಿ ಇರುದರಿಂದ ನಾವು ಎಚ್ಚರಿಕೆಯಿಂದ ಅದನ್ನು ನಿಭಾಯಿಸಬೇಕಿದೆ. ತಾಲೂಕಿನ ಅಧಿಕಾರಿವರ್ಗ ಉತ್ತಮ ರೀತಿಯಲ್ಲಿದ್ದು, ಸಾರ್ವಜನಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸುವತ್ತ ಗಮನವಹಿಸಬೇಕಿದೆ. ಸಾಧಕರಿಗೆ ಸನ್ಮಾನಿಸಿರುವದರಿಂದ ಇನ್ನಷ್ಟು ಸಾಧನೆಗೆ ಪ್ರೇರಣಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪದಕ ವಿಚೇತರಾದ ತಾಲೂಕಿನ ನೌಕರರನ್ನು, ಜಿಲ್ಲಾ ಮಟ್ಟದ ಸರ್ವೊತ್ತಮ ಪ್ರಶಸ್ತಿç ಪುರಸ್ಕಾರ ಪಡೆದ ಖಜಾನೆ ಇಲಾಖೆಯ ರಾಜೇಶ ನಾಯ್ಕ, ಪಿ.ಡಿ.ಓ ಅಣ್ಣಪ್ಪ ಮುಕ್ರಿ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ ಎಲ್ಲಾ ಅಧಿಕಾರಿಗಳು ಸರ್ಕಾರಿ ನೌಕರರ ಸಂಘದ ಅಡಿಯಲ್ಲಿ ಬರುತ್ತದೆ. “ಜನಸೇವೆಗಾಗಿ ನಾವು ನೀವು” ಎನ್ನುವ ಶೀರ್ಷಿಕೆಯಡಿ ಹಲವು ಕಾರ್ಯಕ್ರಮ ನಡೆಯುತ್ತಿದೆ. ಅದನ್ನು ಪರಿಣಾಮಕಾರಿ ಜಾರಿ ಮಾಡುವ ಮೂಲಕ ನಮ್ಮ ಕತ್ಯರ್ವ ನಿಭಾಯಿಸೋಣ. ತಾಲೂಕಿನಲ್ಲಿ ಸ್ವಂತ ಕಟ್ಟಡದಲ್ಲಿ ಕಟ್ಟಡ ಅಗತ್ಯವಿದ್ದು, ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸೋಣ ಎಂದರು.
ಸಂಘಟನೆಯ ತಾಲೂಕ ಅಧ್ಯಕ್ಷ ರಾಜಕುಮಾರ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿನ ಸಂಘಟನೆಯ ಪದಾಧಿಕಾರಿಗಳಾದ ಅಣ್ಣಪ್ಪ ಮುಕ್ರಿ, ಎಂ.ಜಿ.ನಾಯ್ಕ, ದೇವರಾಜ್ ಕರ್ಕಿ, ಚಂದ್ರಶೇಖರ ಕಳಸ, ಜಗದೀಶ ನಾಯ್ಕ, ಆರ್.ಜಿ.ಭಟ್ ಸುಧೀಶ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.

error: