March 22, 2024

Bhavana Tv

Its Your Channel

ಕಾರ್ಬನ್ ಪೈಬರ್ ದೋಟಿ ಉಪಯೋಗದ ಕುರಿತು ಉಚಿತ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ

ಹೊನ್ನಾವರ ತಾಲೂಕಿನ ಹರಡಸೆಯಲ್ಲಿ “ಈಸೀ ಲೈಫ್ ಎಂಟರ್‌ಪ್ರೈಸಸ್” ವತಿಯಿಂದ ಕಾರ್ಬನ್ ಪೈಬರ್ ದೋಟಿ ಉಪಯೋಗದ ಕುರಿತು ಉಚಿತ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ ನಡೆಯಿತು.

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗೂ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರವೆಂಬAತೆ, ನೆಲದಿಂದಲೇ 80 ಅಡಿಯ ವರೆಗೆ ಮದ್ದು ಹೊಡೆಯಲು ಮತ್ತು ಕೊನೆ ಕೊಯ್ಯಲು ಕಾರ್ಬನ್ ಪೈಬರ್ ದೋಟಿ ಬಂದಿದೆ. ಈ ದೋಟಿ ಹಗುರವಾಗಿದ್ದು, ಮನೆ ಮಂದಿಯೇ ಮರಗೆಲಸ ಮಾಡಬಹುದು.

ಇಂಥ ದೋಟಿಯ ಕುರಿತಾಗಿ, ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕೇಂದ್ರ “ಈಸೀ ಲೈಫ್ ಎಂಟರ್ ಪ್ರೈಸಸ್” ನ ಸಂಪನ್ಮೂಲವ್ಯಕ್ತಿ ರಾಜೇಶ್ ಭಟ್ ಮಾತನಾಡಿ “ವಿದೇಶಗಳಲ್ಲಿ ಬಹುಮಹಡಿ ಕಟ್ಟಡಗಳನ್ನು ಸ್ವಚ್ಛಗೊಳಿಸಲು ಈ ದೋಟಿ ಬಳಸುತ್ತಿದ್ದರು. ಇದೀಗ ಭಾರತದಲ್ಲಿ ಔಷಧಿ ಹೊಡೆಯುವ ಹಾಗೂ ಕೊನೆ ಕೊಯ್ಯುವ ಕೆಲಸಕ್ಕೆ ಬಳಕೆಯಾಗುತ್ತಿದೆ. ಇದರ ಉತ್ಪಾದನೆ ವಿದೇಶದಲ್ಲಿ ಆಗುತ್ತಿದ್ದು, ಬಿಡಿಭಾಗಗಳನ್ನು ಮಾತ್ರಾ ಭಾರತದಲ್ಲಿ ತಯಾರಿಸಲಾಗುತ್ತಿದೆ.” ಎಂದು ಪರಿಪೂರ್ಣ ಮಾಹಿತಿ ನೀಡಿದರು.

ಕಾರ್ಯಕ್ರಮದ ಆಯೋಜಕ ಹರಡಸೆಯ ವಿಘ್ನೇಶ್ ಭಂಡಾರಿ ಮಾತನಾಡಿ “ತಮ್ಮ ಅನುಭವದ ಅನಿಸಿಕೆ” ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಸೇರಿದಂತೆ, ಗ್ರಾಮಸ್ಥರು, ಪ್ರಗತಿಪರ ಕೃಷಿಕರು ಪಾಲ್ಗೊಂಡು ಮಾಹಿತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.

ವರದಿ: ನರಸಿಂಹ ನಾಯ್ಕ್ ಹರಡಸೆ.

error: