October 4, 2022

Bhavana Tv

Its Your Channel

ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ವಿಜೃಂಭಣೆಯ ಸ್ವಾತಂತ್ರ‍್ಯದ ಅಮೃತ ಮಹೋತ್ಸವ

ಹೊನ್ನಾವರ:- “75 ವರ್ಷಗಳನ್ನು ಪೂರೈಸಿ 76ನೇ ಸ್ವಾತಂತ್ಯದ ದಿನಾಚರಣೆಯಲ್ಲಿ ನಾವೆಲ್ಲ ಭಾಗಿಗಳಾಗುತ್ತಿರುವುದು ಹೆಮ್ಮೆಯ ವಿಚಾರ. ಸಾರ್ವಜನಿಕರಿಗೆ ಸದಾ ಹತ್ತಿರದಲ್ಲಿ ಇದ್ದು ಸೇವೆ ಸಲ್ಲಿಸುವಂತ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನಮಗೆ ಲಭಿಸಿರುವುದು ಸುದೈವ.ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಒಟ್ಟಿಗೆ ಸೇರಿ ಪ್ರಯತ್ನಿಸೋಣ” ಎಂದು ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ರಾಜೇಶ ಕಿಣಿ ಹೇಳಿದರು.
ಅವರು ಧ್ವಜಾರೋಹಣ ಮಾಡಿ ಆಸ್ಪತ್ರೆಯ ಸಮಸ್ತ ಸಿಬ್ಬಂಧಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.ಅವರು ಮಾತನ್ನು ಮುಂದುವರಿಸುತ್ತಾ “ನಮ್ಮ ಆಸ್ಪತ್ರೆಯ ಇಂದು ಉತ್ತಮ ರೀತಿಯ ಸೇವೆ ನೀಡುವಲ್ಲಿ ಸಹದ್ಯೋಗಿಗಳಾದ ವೈದ್ಯಾಧಿಕಾರಿಗಳು, ಸಿಬ್ಬಂಧಿ ವರ್ಗದವರ ಕಠಿಣ ಪರಿಶ್ರಮವೇ ಕಾರಣ. ಇಂದು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಮ್ಮ ಆಸ್ಪತ್ರೆ ಆರೋಗ್ಯ ಕರ್ನಾಟಕ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಉತ್ತಮ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದೆ. ನಾವೆಲ್ಲ ಒಟ್ಟಾಗಿ, ಸಕರಾತ್ಮಕ ನಡುವಳಿಕೆಗಳ ಮೂಲಕ ಉತ್ತಮ ಸೇವೆ ನೀಡೋಣ. ಆಸ್ಪತ್ರೆಯ ಅಭಿವೃದ್ದಿಯಲ್ಲಿ ದಾನಿಗಳ ಪಾತ್ರವು ಮುಖ್ಯವಾಗಿದೆ. ಹಲವು ರೀತಿಯ ಸಹಕಾರವನ್ನು ನೀಡಿದ್ದಾರೆೆ.ಅವರನ್ನು ಸಹ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೆನೆ. ಎಲ್ಲರಿಗೂ ಅಮೃತ ಸ್ವಾತಂತ್ರೊö್ಯÃತ್ಸವ ಶುಭಾಶಯಗಳು” ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ಆಸ್ಪತ್ರೆವತಿಯಿಂದ ಉತ್ತಮ ಸಾರ್ವಜನಿಕೆ ಸೇವೆಗಾಗಿ ದಂತ ವೈದೆ ಡಾ ಅನುರಾಧ, ಐ.ಸಿ.ಟಿ.ಸಿ ಆಪ್ತಸಮಾಲೋಚಕರಾದ ವಿನಾಯಕ ಪಟಗಾರ, ತಾಲೂಕ ಆಡಳಿತದಿಂದ ಐ.ಸಿ.ಟಿ.ಸಿ ಪ್ರಯೋಗಶಾಲಾ ತಂತ್ರಜ್ಞರಾದ ಉಮೇಶ ಕೆ ರವರಿಗೆ ಸನ್ಮಾನಿಸಲಾಯಿತು.ಆಸ್ಪತ್ರೆಯ ಸಿಬ್ಬಂಧಿಗಳಿಗಾಗಿ ಮ್ಯುಜಿಕೆಲ್ ಚೇರ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮಹಿಳಾ ಸಿಬ್ಬಂಧಿಗಳು,ವೈದ್ಯಾಧಿಕಾರಿಗಳು ಉತ್ಸಾಹದಿಂದ ಭಾಗವಹಿಸಿದರು.ಮ್ಯುಜಿಕಲ್ ಸ್ಪರ್ಧೆಯಲ್ಲಿ ಶುಶ್ರೂಷಾಧಿಕಾರಿ ಶೋಭಾ ಬಹುಮಾನ ಗೆದ್ದರು. ದ್ವೀತಿಯ ದರ್ಜೆ ಸಹಾಯಕರು,ಮತ್ತು ಗಾಯಕರಾದ ವೆಂಕಟೇಶ್ ಜೆ ದೇಶಭಕ್ತಿ ಗೀತೆಗಳನ್ನು ಹಾಡುವದರ ಮೂಲಕ ಗಮನ ಸೆಳೆದರು. ಕ್ಷ ಕಿರಣ ತಂತ್ರಜ್ಞರಾದ ಶ್ರೀ ಚಂದ್ರಶೇಖರ ಕಳಸ ಕಾರ್ಯಕ್ರಮವನ್ನು ನಿರ್ವಹಿಸಿದರು.ಆಸ್ಪತ್ರೆಯ ಎಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

About Post Author

error: