March 25, 2024

Bhavana Tv

Its Your Channel

ಹೊನ್ನಾವರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ದ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ನಾಗರಾಜ ನಾಯ್ಕಡ

ಹೊನ್ನಾವರ : ಸ್ವಾತಂತ್ರ‍್ಯೋತ್ಸವದ 75ನೇ ಅಮೃತ ಮಹೋತ್ಸವಕ್ಕೆ ಪಾದಾರ್ಪಣೆ ಮಾಡಿದ್ದರೂ ಹಲವು ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಅವೆಲ್ಲವನ್ನು ಮೀರಿ ನಿಂತು ನಾವೆಲ್ಲ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ’ ಎಂದು ತಹಸೀಲ್ದಾರ್ ನಾಗರಾಜ ನಾಯ್ಕಡ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಆಜಾದಿ ಕಾ ಅಮೃತಮಹೋತ್ಸವದ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶವು ಅನೇಕ ಏಳು ಬೀಳುಗಳನ್ನು ಕಾಣುತ್ತಾ ಸಮಗ್ರತೆಯನ್ನು ಕಾಯ್ದುಕೊಂಡು ಪ್ರಗತಿ ಪಥದತ್ತ ದಾಪುಗಾಲಿಟ್ಟು, ಪ್ರಪಂಚವೇ ಭಾರತವನ್ನು ದಿಟ್ಟಿಸಿ ನೋಡುವಂತೆ ಉಜ್ವಲ ರಾಷ್ಟ್ರವಾಗಿ ಪ್ರಗತಿಪಥದಲ್ಲಿ ಸಾಗುತ್ತಿದೆ. ದೇಶ ಕಾಯುವ ಸೈನಿಕರನ್ನು ಬಲಪಡಿಸಬೇಕಿದೆ. ಅನ್ನ ನೀಡುವ ರೈತಬಂಧುರನ್ನು ಗೌರವಿಸಬೇಕು. ಪೂರ್ವಜರ ಸ್ವದೇಶಾಭಿಮಾನವನ್ನು ತಾಳಬೇಕು. ನಮ್ಮ ಯುವ ಶಕ್ತಿ ದುರಾಸೆ ಹಾಗೂ ದುಶ್ಚಟಗಳಿಗೆ ಬಲಿಯಾಗದೆ ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲರಾದವರನ್ನು ಮೇಲೆತ್ತಿ ಸಮಾಜದ ಮುಖ್ಯ ವಾಹಿನಿಗೆ ಒಳಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದರು.

ಸನ್ಮಾನ : ಈ ಸಂದರ್ಭದಲ್ಲಿ ವಿವಿಧ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸನ್ಮಾನಿಸಲಾಯಿತು.

ನೆರೆ ಸಂದರ್ಭದಲ್ಲಿ ನೆರೆ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಅವರನ್ನು ಸ್ಥಳಾಂತರ ಮಾಡುವುದಕ್ಕೆ ಮುತುವರ್ಜಿ ವಹಿಸಿದ ಗ್ರಾಮ ಲೆಕ್ಕಾಧಿಕಾರಿಗಳಾದ ನಗರಬಸ್ತಿಕೇರಿಯ ಭರತ್ ಆಚಾರ್ಯ, ಹೆರಂಗಡಿಯ ಸುನೀಲ್ ಕುಮಾರ್, ಬಳ್ಕೂರಿನ ರಕ್ಷಿತ್ ಪೂಜಾರಿ, ಮುಗ್ವಾದ ಸುಪ್ರಿತಾ ಆಚಾರ್ಯ, ಹಳದೀಪುರದ ವೈಭವಿ ಭಂಡಾರಿ, ಗ್ರಾಮ ಸಹಾಯಕ ಮೋಹನ ನಾಯ್ಕ ಚಿಕ್ಕನಕೋಡ್, ಆರೋಗ್ಯ ಇಲಾಖೆಯ ಪ್ರಯೋಗ ತಂತ್ರಜ್ಞ ಉಮೇಶ ಜಿ.ಕೆ, ಹವಾಲ್ದಾರ್ ಉದಯ್ ಮಗದೂರ್, ಪೌರ ಕಾರ್ಮಿಕ ಕೃಷ್ಣ ಕೋರಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಭಾರತಿ ಕರ್ಕಿ, ತಾಪಂನ ಕೃಷ್ಣಾನಂದ ಕೆ, ಗ್ರಹ ರಕ್ಷಕ ದಳದ ಮಂಜುನಾಥ ದೇಶಭಂಡಾರಿ, ಭೂ ಮಾಪನ ಇಲಾಖೆಯ ಸದಾಶಿವ ಬಾಣಸಿ, ಕಂದಾಯ ಇಲಾಖೆಯ ಕೇಶವ ನಾಯ್ಕ, ಜ್ಯೋತಿ ಶೆಡಗೇರಿ, ಆಶಾ ಹೆಗಡೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಯಿಂದ ಅಸಾಧಾರಣ ಪ್ರತಿಭೆ ಎಂದು ಗುರುತಿಸಿ ನಗದು ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಾಪಂ ಆಡಳಿತಾಧಿಕಾರಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್, ಇಒ ಸುರೇಶ ನಾಯ್ಕ, ಬಿಇಒ ಜಿ.ಎಸ್.ನಾಯ್ಕ, ಸಿಪಿಐ ಶ್ರೀಧರ ಎಸ್.ಆರ್., ಉಷಾ ಪಾವಸ್ಕರ್, ಪ.ಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ರೆಡ್ ಕ್ರಾಸ್ ನ ಡಾ. ಜಿ.ಪಿ.ಪಾಟಣಕರ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಉಷಾ ಹಾಸ್ಯಗಾರ್, ಜನಪ್ರತಿನಿಧಿಗಳು, ಸಾಹಿತಿಗಳು ಇದ್ದರು. ಪಟ್ಟಣದ ಶಾಲಾ ವಿದ್ಯಾರ್ಥಿಗಳು ಶರತಿ ಸಾಲಿನಲ್ಲಿ ವಾದ್ಯಗೋಷ್ಠಿಯೊಂದಿಗೆ ಬಂದು ಕಾರ್ಯಕ್ರಮಕ್ಕೆ ಮೆರಗು ಕೊಟ್ಟರು. ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ನಿರ್ವಹಿಸಿದರು.

ವರದಿ: ವೆಂಕಟೇಶ ಮೇಸ್ತ

error: