April 24, 2024

Bhavana Tv

Its Your Channel

ಗುಣವಂತೆ ಸುಭಾಷ್ ಯುವಕ ಸಂಘದಿoದ ಮಾಜಿ ಸೈನಿಕರಿಗೆ ಸನ್ಮಾನ

ಹೊನ್ನಾವರ: 75 ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಗುಣವಂತೆಯ ಸರ್ಕಾರಿ ಮಾದರಿ ಶಾಲೆಯ ಸಭಾಂಗಣದಲ್ಲಿ ನಾಗರಿಕ ಪತ್ರಿಕೆ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರರವರ ಅಧ್ಯಕ್ಷತೆಯಲ್ಲಿ ಹೊನ್ನಾವರ ತಾಲೂಕಿನ ಮಾಜಿ ಸೈನಿಕರಾದ ಮಂಕಿಯ ವಾಮನ ಸುಬ್ರಾಯ ನಾಯ್ಕ, ಹೊಸಪಟ್ಟಣದ ಅಶೋಕ ಎಸ್ ನಾಯ್ಕ, ಗುಣವಂತೆಯ ತಿಮ್ಮಪ್ಪ ಎಮ್ ಗೌಡ, ಹೊನ್ನಾವರದ ಉಮೇಶ ನಾಯ್ಕ ಹಾಗೂ ಜುನಾವ್ ಮೆಂಡಿಸ್ ಇವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ವಾಯು ದಳದಿಂದ ನಿವೃತ್ತರಾದ ವಾಮನ ಎಸ್.ನಾಯ್ಕ ಮಾತನಾಡಿ, ಇಂದಿನ ಶುಭ ಸಂದರ್ಭದಲ್ಲಿ ಸುಭಾಷ್ ಯುವಕ ಸಂಘ ಇದರ ಅಧ್ಯಕ್ಷರಾದ ಶಂಕರ ಗೌಡ ಹಾಗೂ ಸಂಘದ ಎಲ್ಲಾ ಸದಸ್ಯರಿಗೆ ಮಾಜಿ ಸೈನಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು. ವಿಶೇಷವಾಗಿ ತಾನು ರಾಜಸ್ಥಾನದ ದೂರದ ಹಳ್ಳಿಯಾದ ಬಿಕಾನಿಯರ್ ಜಿಲ್ಲೆಯ ನಾಲ್ ಹಳ್ಳಿಯ ಹಾಗೂ ಎತ್ತರದ ಪ್ರದೇಶವಾದ ಲಡಾಕ್ ನಲ್ಲಿ ಕೆಲಸ ಮಾಡಿದ ಅನುಭವಗಳನ್ನು ಸಭೆಯಲ್ಲಿ ಹಂಚಿಕೊAಡರು.

ಸನ್ಮಾನ ಸ್ವೀಕರಿಸಿದ ಅಶೋಕ ಎಸ್.ನಾಯ್ಕ ಮಾತನಾಡಿ ತಾನು ಸೇವೆ ಸಲ್ಲಿಸಿದ ಸ್ಥಳಗಳ ವಿವರ ನೀಡುತ್ತ ತನ್ನ 32 ವರ್ಷದ ಸೇವೆಯ ಅನುಭವದ ಬಗ್ಗೆ ಸಭೆಯಲ್ಲಿ ತಿಳಿಸಿದರು. ತನ್ನ ಊರಿನಲ್ಲಿ ಸನ್ಮಾನ ಸ್ವೀಕರಿಸಿದ ತಿಮ್ಮಪ್ಪ ಎನ್.ಗೌಡ ಮಾತನಾಡಿ ದೇಶಾಭಿಮಾನ ಹಾಗೂ ಸೈನಿಕರ ಬಗ್ಗೆ ಗೌರವ ಇದ್ದ ಸಂಘದ ಅಧ್ಯಕ್ಷರಾದ ಶಂಕರ ಗೌಡರಿಗೆ ಅಭಿನಂದನೆ ಸಲ್ಲಿಸುತ್ತಾ ಈಗ ಸೈನ್ಯದಲ್ಲಿ ಅಗ್ನಿ ವೀರ ಸೇವೆಗೆ ಯುವಕರು ಸೇರ್ಪಡೆ ಆಗಬೇಕೆಂದು ಕರೆ ನೀಡಿದರು, ಉಮೇಶ ನಾಯ್ಕ ಹಾಗೂ ಜುನಾವ್ ಮೆಂಡಿಸ್ ಸಭೆಯಲ್ಲಿ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊAಡರು. ಅತಿಥಿಗಳಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀಕಾಂತ ಎಸ್. ನಾಯ್ಕ( ದಾನಿಗಳು) ಸಭೆಯಲ್ಲಿ ಮಾತನಾಡಿ ಸೈನಿಕರ ಕರ್ತವ್ಯ ನಿಷ್ಠೆಬಗ್ಗೆ ತನ್ನ ಅನುಭವದ ಮಾಹಿತಿಯನ್ನು ಸಭೆಗೆ ತಿಳಿಸಿದರು ಸಭಾಧ್ಯಕ್ಷತೆಯನ್ನು ವಹಿಸಿದ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ನಮ್ಮ ತಾಲೂಕಿನ ಐದು ಜನ ಮಾಜಿ ಸೈನಿಕರನ್ನು ಸನ್ಮಾನಿಸುವ ಭಾಗ್ಯವನ್ನು ಸುಭಾಸ್ ಯುವಕ ಸಂಘದವರು ಅವಕಾಶ ಕಲ್ಪಿಸಿದಕ್ಕಾಗಿ ಯುವಕ ಸಂಘಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಸೈನಿಕರು ಗಡಿಯಲ್ಲಿ ದೇಶವನ್ನು ಕಾಯುತ್ತ ಇದ್ದರಿಂದ ನಾವೆಲ್ಲಾ ಇಲ್ಲಿ ಸುರಕ್ಷಿತವಾಗಿದ್ದೇವೆ ಮತ್ತು 75ನೇ ವರ್ಷದ ಸ್ವಾತಂತ್ರ‍್ಯ ಅಮೃತ ಮಹೋತ್ಸವ ದಂದು ಮಾಜಿ ಸೈನಿಕರಿಗೆ ಸನ್ಮಾನ ನೀಡಿದ ಯುವಕ ಸಂಘದ ಉತ್ತಮ ಕೆಲಸದ ಬಗ್ಗೆ ಹೊಗಳಿದರು.

error: