April 24, 2024

Bhavana Tv

Its Your Channel

ಜನ್ನಕಡ್ಕಲ್ ಗ್ರಾಮದಲ್ಲಿ 75 ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಬೈಕ್ ರ‍್ಯಾಲಿ

ಹೊನ್ನಾವರ ತಾಲೂಕಿನ ಜನ್ನಕಡ್ಕಲ್ ಗ್ರಾಮದಲ್ಲಿ 75 ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳುವ ಮೂಲಕ ವಿನೂತನವಾಗಿ ಸ್ವಾತಂತ್ರ‍್ಯೋತ್ಸವ ಆಚರಿಸಲಾಯಿತು.

ಗ್ರಾಮದ ಉತ್ಸಾಹಿ ಯುವಕರು ಹಾಗೂ ಹಿರಿಯರು ಸೇರಿ ಆಗಸ್ಟ್ 15 ರ ಮುಂಜಾನೆಯೇ ನೂರಾರು ಬೈಕ್ ಗಳ ಮೂಲಕ ದೇಶಪ್ರೇಮದ ಜೈಕಾರದ ಘೋಷಣೆ ಕೂಗುತ್ತಾ, ಗ್ರಾಮದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಧ್ವಜಾರೋಹಣದಲ್ಲಿ ಪಾಲ್ಗೊಂಡರು. ಜನ್ನಕಡ್ಕಲ್ ಹಿರಿಯ ಪ್ರಾಥಮಿಕ ಶಾಲೆಯಿಂದ ರ‍್ಯಾಲಿ
ಹೊರಟು ಮೊದಲಿಗೆ ಹರಡಸೆ ಹಿರಿಯ ಪ್ರಾಥಮಿಕ ಶಾಲೆಗೆ ತಲುಪಿ ಧ್ವಜಾರೋಹಣದಲ್ಲಿ ಭಾಗಿಯಾದರು. ಬಳಿಕ ಜನ್ನದ ಕಿರಿಯ ಪ್ರಾಥಮಿಕ ಶಾಲೆಗೆ ಹೋಗಿ ಅಲ್ಲಿನ ಧ್ವಜಾರೋಹಣದಲ್ಲಿ ಭಾಗಿಯಾದರು. ನಂತರ ಪುನಃ ಜನ್ನಕಡ್ಕಲ್ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಧ್ವಜಾರೋಹಣದಲ್ಲಿ ಪಾಲ್ಗೊಳ್ಳುವ ಮೂಲಕ ಬೈಕ್ ರ‍್ಯಾಲಿ ಸಂಪನ್ನಗೊಳಿಸಿದರು.

ಜನ್ನಕಡ್ಕಲ್ ಗ್ರಾಮದಲ್ಲಿ ಮೂರು ಶಾಲೆಗಳಿದ್ದು, 75 ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಕೇಸರಿ ಬಿಳಿ ಹಸಿರಿನ ಪತಾಕೆ, ತಳಿರು ತೋರಣಗಳಿಂದ ಶಾಲೆಗಳನ್ನು ಸಿಂಗರಿಸಲಾಗಿತ್ತು. ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಗೀತೆ ಹಾಡಿ, ಶಿಸ್ತಿನಿಂದ ಪಥಸಂಚಲನ ಮಾಡಿದ ಬಳಿಕ ಸಭಾಕಾರ್ಯಕ್ರಮ ಪ್ರಾರಂಭವಾಯಿತು.

ಸ್ವಾತAತ್ರ‍್ಯ ಅಮೃತ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ಈ ಹಿಂದೆ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ಸ್ವಾತಂತ್ರ‍್ಯ ದಿನಾಚರಣೆಯಂದು ಶಾಲೆಯಲ್ಲಿ
ಬಹುಮಾನ ನೀಡಲಾಯಿತು. ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ಭಾಷಣ, ದೇಶಭಕ್ತಿಗೀತೆ ಸೇರಿದಂತೆ ದೇಶಾಭಿಮಾನ ಪ್ರೆರೇಪಿಸುವ ಲಘು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದಕ್ಕೆ ಪೂರಕವಾಗಿ ಶಿಕ್ಷಕರು ಹಾಗೂ ವೇದಿಕೆಯಲ್ಲಿನ ಗಣ್ಯರ ಭಾಷಣ, ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ. ಯವರು, ಪಾಲಕರು, ಹಳೆಯ ವಿದ್ಯಾರ್ಥಿಗಳು, ಜನಪ್ರತಿನಿದಿನಗಳು, ಸೇರಿದಂತೆ ಊರನಾಗರಿಕರು ಉಪಸ್ಥಿತರಿದ್ದರು.

ವರದಿ: ನರಸಿಂಹ ನಾಯ್ಕ್ ಹರಡಸೆ.

error: