April 26, 2024

Bhavana Tv

Its Your Channel

“ ನಿವೃತ್ತ ಯೋಧರಿಗೆ ಸನ್ಮಾನ ಶ್ಲಾಘನೀಯ “- ಗಣಪತಿ ಎನ್.ಹೆಗಡೆ

ಹೊನ್ನಾವರ: 15/08/2022 ರಂದು ಆಜಾದಿಕಾ ಅಮೃತ ಮಹೋತ್ಸವವನ್ನು ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ವೈವಿಧ್ಯಮಯವಾಗಿ ಆಚರಿಸಲಾಯಿತು.
15 ವರ್ಷಗಳಕಾಲ ಸೇನೆಯಲ್ಲಿ ಕರ‍್ಯನಿರ್ವಹಿಸಿ ನಿವೃತ್ತಿ ಪಡೆದು ಪ್ರಸ್ತುತ ಪೋಸ್ಟ್ ಆಫೀಸ್ ಕುಮಟಾದಲ್ಲಿ ಹಿರಿಯ ಅಧಿಕಾರಿಗಳಾಗಿರುವ ಗಣಪತಿ ಎನ್ ಹೆಗಡೆ ಕತಗಾಲ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡಿ ಸೇನೆಯ ರಚನೆಯ ಕುರಿತು ತಿಳಿಸಿದರು. “ದೇಶಸೇವೆ ಮಾಡುವುದು ಹೆಮ್ಮೆಯ ಸಂಗತಿ ಪ್ರಸ್ತುತ ದಿನದಲ್ಲಿ ಕೇಂದ್ರ ಸರ್ಕಾರ ಉತ್ತಮ ಅವಕಾಶ ನೀಡಿದೆ ಅದನ್ನು ಬಳಸಿಕೊಳ್ಳಿ” ಎಂದರು. ನಿವೃತ್ತ ಯೋಧರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ತಮ್ಮ ಸೇವಾವಧಿಯ ಅನುಭವವನ್ನು ಹಂಚಿಕೊAಡು ಶಿಕ್ಷಣಾ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ತಿಳಿಸಿದರು.ರಾಷ್ಟç ಪ್ರೇಮದ ಉದ್ಘೋಷಣೆ ಮಾಡಿಸಿ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯ ಏಳ್ಗೆಗೆ ಶುಭ ಹಾರೈಸಿದರು.
ಶಾಲೆಯ ಮುಖ್ಯಾಧ್ಯಾಪಕರಾದ ಎಲ್.ಎಮ್.ಹೆಗಡೆಯವರು ಮಾತನಾಡಿ “ಜನ್ಮದಾತೆ, ಜಗನ್ಮಾತೆ ,ಭಾರತ ಮಾತೆ ತ್ರಿಶಕ್ತಿಯನ್ನು” ಸದಾ ಸ್ಮರಿಸಬೇಕು.ಜಲಿಯನ್ ವಾಲಾಭಾಗ್ ಕಿಡಿ ಭಗತ್ ಸಿಂಗ್, ಸೈಮನ್ ಕಮಿಷನ್ ಪ್ರತಿರೋಧಿ ಲಾಲಾ ಲಜಪತ್ ರಾಯ್, ಐ ಎನ್ ಎ ಸ್ಥಾಪಕ ಸುಭಾಷ್ ಚಂದ್ರಭೋಸ್,ಜಗತ್ತಿಗೆ ಸತ್ಯ,ಅಹಿಂಸೆಯ ಸತ್ವ ಸಾರಿದ ಮಹಾತ್ಮಗಾಂಧೀಜಿಯವರು ಸಹಸ್ರ ಸಹಸ್ರ ಸಂಖ್ಯೆಯ ಜನರ ತ್ಯಾಗ,ಬಲಿದಾನ ಸಾರ್ಥಕತೆ ಪಡೆದು ಇಂದು 75 ರ ಸಂಭ್ರಮದಲ್ಲಿದ್ದೇವೆ.100 ರ ಸಂಭ್ರಮವನ್ನು ನೋಡುವಾಗ ಭಾರತ ವಿಶ್ವಗುರು ಆಗಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದ ಅಧ್ಯಕ್ಷರು ಗ್ರಾಮ ಪಂಚಾಯತ ಕರ್ಕಿ, ದೈವಜ್ಞ ಮಠ ಕರ್ಕಿ, ಅಶೋಕ ರೇವಣಕರ್, ಪುಟ್ಟು ಹೆಗಡೆ, ಮಾಲಿಕರು ಎಸ್.ಆರ್.ಎಲ್, ವಿಠ್ಠಲ ದೇವರು ಭಟ್ಟ ದೇವರ ಆಟ, ಅಬ್ದುಲ್ ಸಾಬ್ ಇವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಘನ ಅಧ್ಯಕ್ಷರು, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಆದ ಗಜಾನನ ಹೆಗಡೆಯವರು ಅಮೃತ ಮಹೋತ್ಸವಕ್ಕೆ ಶುಭ ಹಾರೈಸಿದರು.
ಭಾಷಣ,ಪ್ರಬಂಧ,ದೇಶಭಕ್ತಿಗೀತೆ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶ್ರೀಕಾಂತ ಹಿಟ್ನಳ್ಳಿ ಸ್ವಾಗತಿಸಿದರು. ಮುಕ್ತಾ ನಾಯ್ಕ ಕರ‍್ಯಕ್ರಮ ನಿರೂಪಿಸಿದರು. ಸೀಮಾ ಭಟ್ಟ ವಂದಿಸಿದರು. ಎಲ್ಲ ಶಿಕ್ಷಕರು ಸಿಬ್ಬಂದಿಗಳು,ವಿದ್ಯಾರ್ಥಿಗಳು ಸಕಾಲದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

error: