April 25, 2024

Bhavana Tv

Its Your Channel

ಸ್ವತಂತ್ರ ಭಾರತದ ಅಮೃತ ಮಹೋತ್ಸವ’ದ ಅಂಗವಾಗಿ ಹೊನ್ನಾವರ ಪಟ್ಟಣದಲ್ಲಿ ‘ಅಮೃತ ಸಂಭ್ರಮ ಜಾಥಾ’

ಹೊನ್ನಾವರ: ಸ್ವತಂತ್ರ ಭಾರತದ ಅಮೃತ ಮಹೋತ್ಸವ’ದ ಅಂಗವಾಗಿ ಹೊನ್ನಾವರ ಪಟ್ಟಣದಲ್ಲಿ ‘ಅಮೃತ ಸಂಭ್ರಮ ಜಾಥಾ’ ರವಿವಾರ ನಡೆಯಿತು.

ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಹೊನ್ನಾವರ,ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ ಇದರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಗೇರುಸೊಪ್ಪಾ ವೃತ್ತದಿಂದ ಶರಾವತಿ ವೃತ್ತದವರೆಗೆ ಜಾಥಾ ಜರುಗಿತು

ಜಾತಾ ಉದ್ದೇಶಿಸಿ ರಾಷ್ಟಪ್ರಶಸ್ತಿ ವಿಜೇತ ಶಿಕ್ಷಕ ಲಯನ್ಸ ಸದಸ್ಯ ಎಸ್.ಜೆ ಕೈರನ್ ಮಾತನಾಡಿ,ನಮ್ಮ ರಾಷ್ಟ್ರ ಬಾವುಟ ಕೇವಲ ಮೂರು ಬಣ್ಣದ ಬಟ್ಟೆಯ ಒಂದು ಬಾವುಟ ಅಲ್ಲ. ಮೇಲಿರುವ ಕೇಸರಿ ಅದು ತ್ಯಾಗದ ಸಂಕೇತ. ಮಧ್ಯದಲ್ಲಿರುವ ಬಿಳಿ ಪರಿಶುದ್ಧ ಜೀವನಕ್ಕೆ ನಾಂದಿ ಹಾಡುವಂತ ಸಂದೇಶವನ್ನ ನೀಡುತ್ತದೆ.ಹಸಿರು ಬಣ್ಣ ಪ್ರಗತಿಯ ಸಂಕೇತ.ಮದ್ಯದಲ್ಲಿ ಅಶೋಕ ಸ್ತಂಭದ ಚಕ್ರದಲ್ಲಿನ ೨೪ ಗೆರೆಗಳು ಪ್ರತಿಯೊಬ್ಬ ಮನುಷ್ಯನು ದಿನದ ೨೪ ತಾಸು ಸತತವಾಗಿ ಪ್ರಾಮಾಣಿಕವಾಗಿ ದೇಶ ಪ್ರೇಮಿಯಾಗಿ ಶ್ರಮ ಪಡಬೇಕು ಎನ್ನುವುದನ್ನು ಹೇಳುತ್ತದೆ ಎಂದರು.
ಈ ದೇಶಕ್ಕಾಗಿ ಹುತಾತ್ಮರಾದಂತಹ ಲಕ್ಷಾಂತರ ಸೈನಿಕರನ್ನ ನಾವು ನೆನೆಸಿಕೊಳ್ಳಬೇಕು. ಒಂದು ದೇಶ ಪ್ರಗತಿ ಆಗಬೇಕಾದರೆ ಮೂರೂ ಅಂಶ ಬಹಳ ಮುಖ್ಯ. ಶಿಕ್ಷಣ, ಕೃಷಿ ಮತ್ತು ಸೈನ್ಯ ಈ ಮೂರೂ ವಿಷಯದ ಮೇಲೆ ಒಬ್ಬ ಮನುಷ್ಯ ಕೇಂದ್ರೀಕರಿಸಿದರೆ ನಮ್ಮ ದೇಶ ತನ್ನಿಂದ ತಾನೇ ಸಮೃದ್ಧಿಯಾಗುತ್ತದೆ. ನಮ್ಮ ದೇಶಕ್ಕಾಗಿ ಹೋರಾಟ ಮಾಡಿದವರನ್ನು ಇವತ್ತು ನೆನೆಸಿಕೊಳ್ಳಬೇಕು ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಕೆ,ಸಿ ವರ್ಗಿಸ್,ಉಪಾಧ್ಯಕ್ಷ ಎಮ್ ಜಿ ನಾಯ್ಕ ಕಾರ್ಯದರ್ಶಿ ರಾಜೇಶ್ ಸಾಳೆ ಹಿತ್ತಲ್,ಖಜಾಂಚಿ ರೋಶನ್ ಶೇಟ್ ,ಲಿಯೋ ಕ್ಲಬ್ ಅಧ್ಯಕ್ಷೆ ಧನ್ಯಾ ಭಟ್,ಕಾರ್ಯದರ್ಶಿ ಸಂದೇಶ ನಾಯಕ್ ಸದಸ್ಯರಾದ ಮಹೇಶ ನಾಯ್ಕ, ಮನ್ವಿಕಾ ಶೇಟ್, ಐಶ್ವರ್ಯ ಶೇಟ್, ಲಯನ್ಸ ಸದಸ್ಯರಾದ ರೋಶನ್ ಶೇಟ್, ಎ.ವಿ.ಶ್ಯಾನಭಾಗ, ಶ್ರೀಕಾಂತ ಹೆಗಡೆಕರ್, ಮಹೇಶ ನಾಯ್ಕ, ವೀಣಾ ಶ್ಯಾನಭಾಗ, ಕುಸುಮಾ ಎನ್.ಜಿ.ಭಟ್, ಮಂಜುನಾಥ ಆಚಾರ್ಯ ಸದಸ್ಯರು, ಪಾಲ್ಗೊಂಡಿದ್ದರು

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: