April 24, 2024

Bhavana Tv

Its Your Channel

ಗ್ರಾಮ ಪಂಚಾಯತ ಕೆಳಗಿನೂರುನಿಂದ 75 ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಕಾರ್ಯಕ್ರಮ

ಹೊನ್ನಾವರ : ಅಮೃತ ಮಹೋತ್ಸವದ ಅಂಗವಾಗಿ ಗ್ರಾಮ ಪಂಚಾಯತ ಕೆಳಗಿನೂರು ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಶಾಲೆಗಳು ಸೇರಿಕೊಂಡು ಒಕ್ಕಲಿಗರ ಸಭಾಭವನ ಕೆಳಗಿನೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಮ್ರವನ್ನು ತಹಸೀಲ್ದಾರ್ ನಾಗರಾಜ ನಾಯ್ಕಡ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗ್ರಾ. ಪಂ. ಅಧ್ಯಕ್ಷ ಗಂಗಾಧರ ಗೌಡ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ. ಪಂ. ಇ. ಒ ಸುರೇಶ ನಾಯ್ಕ, ಗ್ರಾ. ಪಂ. ಉಪಾಧ್ಯಕ್ಷೆ ನೀಲಾ ಕೃಷ್ಣ ಗೌಡ, ಗ್ರಾ. ಪಂ. ಎಲ್ಲಾ ಸದಸ್ಯರು ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಒಕ್ಕಲಿಗ ಸಂಘದ ಉಪಾಧ್ಯಕ್ಷರು, ನಿವೃತ್ತ ಯೋಧರಾದ ತಿಮ್ಮಪ್ಪ ಮಂಜು ಗೌಡ ಹಾಗೂ ಮಾದೇವ ರಾಮ ಗೌಡ ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಮುಕ್ರಿ ವೇದಿಕೆಯಲ್ಲಿ ಇದ್ದರು.

ನಿವೃತ್ತ ಯೋಧರಾದ ತಿಮ್ಮಪ್ಪ ಮಂಜು ಗೌಡ ಹಾಗೂ ಹಾಲಿ ಕರ್ತವ್ಯದಲ್ಲಿರುವ ಯೋಧ ಮಾದೇವ ರಾಮ ಗೌಡ ಇವರಿಗೆ ಗ್ರಾಮ ಪಂಚಾಯತ ವತಿಯಿಂದ ಸನ್ಮಾನಿಸಲಾಯಿತು. ಈ ಬಾರಿಯ ಎಸ್.ಎಲ್.ಸಿ ಯಲ್ಲಿ 90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರಾವಳಿ ಹೈಸ್ಕೂಲ್‌ನ 8 ವಿದ್ಯಾರ್ಥಿಗಳಿಗೆ ಹಾಗೂ ಮಝರೆಲ್ಲೋ ಹೈಸ್ಕೂಲ್ 3 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಹಶೀಲ್ದಾರರವರಿಗೆ ಒಕ್ಕಲಿಗರ ಸಂಘದಿAದ ಹಾಗೂ ಗ್ರಾಮ ಪಂಚಾಯತದಿAದ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಛದ್ಮವೇಷ ಸ್ಪರ್ಧೆಯನ್ನು ನಡೆಸಲಾಯಿತು. ಎಲ್ಲಾ ಮಕ್ಕಳಿಗೂ ಊಟದ ವ್ಯವಸ್ಥೆಯನ್ನು ಮಾಡಿಸಲಾಗಿತ್ತು. ಊಟದ ನಂತರ ಮಧ್ಯಾಹ್ನದ ಅವಧಿಯಲ್ಲಿ ದೇಶಭಕ್ತಿಗೀತೆ ಮತ್ತು ಭಾಷಣ ಸ್ಪರ್ಧೆಗಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಂದ ನಡೆಯಿತು. ಸ್ಪರ್ಧೆಗಳಿಗೂ ಪ್ರತ್ಯೇಕ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಆಗಮಿಸಿದ ಎಲ್ಲಾ 500 ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ ವತಿಯಿಂದ ನೋಟ್‌ಬುಕ್ ವಿತರಣೆ ಮಾಡಲಾಯಿತು.

ಗ್ರಾಮ ಪಂಚಾಯದಿAದ 75ನೇ ವರ್ಷದ ಅಮೃತ ಮಹೋತ್ಸವಕ್ಕೆ ಒಂದು ಉತ್ತಮವಾದ ಕಾರ್ಯಕ್ರಮನ್ನು ಸಂಘಟಿಸಿ ಶಾಲೆಯ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಕ್ಕಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಒಂದು ದಿನದ ಈ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿತ್ತು. ವಿದ್ಯಾರ್ಥಿಗಳ ಆಗಮನಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಕೊಡಲಾಗಿತ್ತು.

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಗಂಗಾಧರ ಗೌಡ, ಉಪಾಧ್ಯಕ್ಷರಾದ ನೀಲಾ ಕೃಷ್ಣ ಗೌಡ, ಸದಸ್ಯರಾದ ಶಿವಾನಂದ ಶಂಭು ಗೌಡ, ಅಣ್ಣಪ್ಪ ನರಸ ಗೌಡ, ಸುರೇಶ ಮಂಜು ಗೌಡ, ವಿಷ್ಣು ಗಣಪ ನಾಯ್ಕ, ಶ್ರೀಮತಿ ದೇವಿ ಮಾಲ್ಲ ಗೌಡ, ಅನಿತಾ ಮಾಜೇಶ್ವರ ಗೌಡ, ಚಿತ್ತಾಕ್ಷೀ ಹನ್ನಂತ ಗೌಡ, ಭಾರತಿ ಸತೀಶ ನಾಯ್ಕ, ಜಾನಕಿ ಸಂಜಯ ಹರ ಶಾಲೆಯ ಮುಖ್ಯೋಪಾಧ್ಯಾಯರು ಎಸ್.ಡಿ.ಎಮ್.ಸಿ ಅಧ್ಯಕ್ಷರು, ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.

error: