April 26, 2024

Bhavana Tv

Its Your Channel

ಹೊಟ್ಟೆಕಿಚ್ಚಿನ ಸೂರಜ್ ನಾಯ್ಕ ಬುರುಡೆ ಬಿಡುವುದು ಮೊದಲು ನಿಲ್ಲಿಸಲಿ ; ಶಾಸಕ ದಿನಕರ ಶೆಟ್ಟಿ

ಹೊನ್ನಾವರ; ಹೊಟ್ಟೆಕಿಚ್ಚಿನ ಸೂರಜ್ ನಾಯ್ಕ ಬುರುಡೆ ಬಿಡುವುದು ಮೊದಲು ನಿಲ್ಲಿಸಲಿ ಎಂದು ಶಾಸಕ ದಿನಕರ ಶೆಟ್ಟಿ ಸ್ವಾತಂತ್ರ‍್ಯೊತ್ಸವ ದಿನ ಧ್ವಜಾರೋಹಣ ವಿಷಯದಲ್ಲಿ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಆರೋಪಕ್ಕೆ ಖಡಕ್ ಉತ್ತರ ನೀಡಿದ್ದಾರೆ.

ಸ್ವಾತಂತ್ರ‍್ಯೊತ್ಸವ ದಿನ ಧ್ವಜಾರೋಹಣ ವಿಷಯದಲ್ಲಿ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಆರೋಪಕ್ಕೆ ಹೊನ್ನಾವರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಅಧ್ಯಕ್ಷನಾಗಿರುದರಿಂದ ಅಲ್ಲಿ ಧ್ವಜಾರೋಹಣ ಮಾಡಿದ್ದೇನೆ. ಅದೇ ಶಾಲೆಯ ಪುಟ್ಟ ಬಾಲಕಿ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ದೇಶಪ್ರೇಮ ಮೆರೆದಿರುದರಿಂದ ಆ ವೇಳೆ ಅದನ್ನು ಗುರುತಿಸಿ ಪ್ರಶಂಸೆ ವ್ಯಕ್ತಪಡಿಸಿದ್ದೇನೆ. ಅಲ್ಲದೆ ಅಧಿಕಾರ ಇದ್ದಾಗ ಹಾಗೂ ಇಲ್ಲದಾಗ ಕುಮಟಾದ ಎರಡು ಆಟೋ ನಿಲ್ದಾಣದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಬಿಜೆಪಿ ಪಕ್ಷದ ಕಾರ್ಯಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಇನ್ನು ತಾಲೂಕ ಆಡಳಿತ ಮಣಕಿ ಮೈದಾನದಲ್ಲಿ ಆಯೋಜಿಸಿದ ಕಾರ್ಯಕ್ರಮ ಪ್ರೊಟೊಕಾಲ್ ಪ್ರಕಾರ ಸಹಾಯಕ ಆಯುಕ್ತರು ಮಾಡಬೇಕು. ಅಲ್ಲಿ ನಾನು ತೆರಳಿ ಧ್ವಜಾರೋಹಣ ನಡೆಸುದು ಸರಿಯಾದ ಕ್ರಮ ಅಲ್ಲ. ಎಲ್ಲಾ ಕಡೆ ಒಂದೇ ಸಮಯದಲ್ಲಿ ಧ್ವಜಾರೋಹಣ ನಡೆಯುದರಿಂದ ಸಾಧ್ಯವಾದಷ್ಟು ಭಾಗಿಯಾಗಿದ್ದೇನೆ. ಅವರ ಪ್ರಕಾರ ನನಗೆ ಎರಡು ಕ್ಷೇತ್ರವಿದ್ದು, ಎರಡು ಕಡೆಯಲ್ಲಿಯೂ ಒಂದೆ ವೇಳೆ ಭಾಗವಹಿಸಲು ಸಾಧ್ಯವಾಗಲಿದೆಯಾ ಎಂದು ಅರಿತು ಮಾತನಾಡಲಿ.
ಇನ್ನು ರಾಷ್ಟ್ರಪ್ರೇಮದ ಪಾಠ ಸೂರಜ್ ನಾಯ್ಕರಿಂದ ಕಲಿಯುವ ಅಗತ್ಯವಿಲ್ಲ. ಭಾರತ ಸೇವಾದಳದ ರಾಜ್ಯ ಸಮಿತಿ ಸದಸ್ಯನಾಗಿದ್ದೇನೆ. ಅಲ್ಲಿ ಧ್ವಜಾರೋಹಣ ಧ್ವಜ ಕಟ್ಟುವುದು ಸೇರಿದಂತೆ ರಾಷ್ಟ್ರಧ್ವಜ ಮಹತ್ವವನ್ನು ಗೌರವ ಸೂಚನೆಯನ್ನು ತಿಳಿಸಲಾಗುತ್ತದೆ. ಇನ್ನು ಕ್ಷಮೆ ಕೇಳಲು ಹೇಳಲು ಸೂರಜ್ ನಾಯ್ಕ ಯಾರು ? ನಾನು ಎಲ್ಲಿಯೂ ಭಾಗವಹಿಸದೆ ಹೊದರೆ ತಪ್ಪಾಗುತ್ತಿತ್ತು. ಮೂರು ಕಡೆ ಧ್ವಜಾರೋಹಣ ಹಾಗೂ ಒಂದು ಕಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಇದರಿಂದ ಕ್ಷಮೆ ಕೇಳುವ ಅಗತ್ಯವಿಲ್ಲ. ಕ್ಷೇತ್ರದ ಜನರು ಕ್ಷಮೆ ಕೇಳಲು ಹೇಳಿದರೆ ಜನತೆಯ ನಿರ್ಧಾರಕ್ಕೆ ತಲೆ ಬಾಗುವೆ. ಸೂರಜ್ ನಾಯ್ಕ ಎರಡು ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಬೇಕೆಂದು ಕನಸು ಕಾಣುತ್ತಿದ್ದು, ಪ್ರೊಟೊ ಕಾಲ ಅರಿತುಕೊಳ್ಳಲಿ ಎಂದು ಸಲಹೆ ನೀಡಿದರು.

error: