April 19, 2024

Bhavana Tv

Its Your Channel

ಉಪ್ಪೊಣಿಯ ಚಾಮುಂಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ

ಹೊನ್ನಾವರ ತಾಲೂಕಿನ ಉಪ್ಪೊಣಿಯ ಚಾಮುಂಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿಶೇಷವಾದ ಪೂಜೆ ಪುನಸ್ಕಾರಗಳು ನಡೆದವು. ರಾತ್ರಿ ಕುಮಟಾದ ಶ್ರೀ ಮಾರುತಿ ಭಜನಾ ಮಂಡಳಿಯಿAದ ನಡೆದ ಭಕ್ತಿ ಭಜನಾ ಕಾರ್ಯಕ್ರಮ ಭಕ್ತವೃಂದದ ಮೆಚ್ಚುಗೆಗೆ ಸಾಕ್ಷಿಯಾಯಿತು.

ಹೊನ್ನಾವರ ತಾಲೂಕಿನ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಒಂದಾದ ಚಾಮುಂಡೇಶ್ವರಿ ದೇವಾಲಯವು ಉಪ್ಪೊಣಿ ಗ್ರಾಮದಲ್ಲಿದೆ. ಹೊನ್ನಾವರದಿಂದ ಗೇರುಸೊಪ್ಪ ಮಾರ್ಗವಾಗಿ ಕೃಮಿಸಿದಾಗ 25 ಕಿಲೋಮೀಟರ್ ಅಂತರದಲ್ಲಿ ಈ ದೇವಾಲಯವಿದೆ.

ತನ್ನ ಅಪಾರ ಮಹಿಮೆ ಹಾಗೂ ಶಕ್ತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿಯು, ಶೃದ್ದೆಯಿಂದ ಬರುವ ಭಕ್ತರ ಬಾಳನ್ನು ಬೆಳಗುತ್ತಾ, ದುಃಖದಿಂದ ಬರುವ ಭಕ್ತರ ಕಣ್ಣೀರನ್ನು ಒರೆಸುತ್ತಾ ಕರುಣಾಮಯಿಯಾಗಿದ್ದಾಳೆ.
ಬಡವರ ದೀನದಲಿತರ ಉದ್ಧಾರಕ್ಕಾಗಿ ಅವತರಿಸಿದ ಈ ತಾಯಿಯು ಊರು ಪರ ಊರಿನ ಭಕ್ತರಿಗಷ್ಟೇ ಅಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದಲೂ ಬರುವ ಭಕ್ತರ ಕೋರಿಕೆಯನ್ನು ಈಡೇರಿಸುವ ಮಹಾ ಮಾತೆಯಾಗಿದ್ದಾಳೆ. ಧರ್ಮದರ್ಶಿ ಶ್ರೀ ರವಿಯವರಿಗೆ ಮೈ ದರ್ಶನ ಬಂದು, ಭಕ್ತರ ಸಮಸ್ಯೆಗಳನ್ನು ಅರಿತು ಆಲಿಸಿ ಅವರ ಕಷ್ಟ ಕಾರ್ಪಣ್ಯಕ್ಕೆ ಪರಿಹಾರ ನೀಡುವ ದೇವತೆಯಾಗಿ ಮನೆ ಮಾತಾಗಿದ್ದಾಳೆ.

ಅಂತೆಯೇ ಪ್ರತಿ ಶುಕ್ರವಾರ ಹಾಗೂ ಅಮಾವಾಸ್ಯೆಯಂದು ನೂರಾರು ಭಕ್ತರು ಇಲ್ಲಿಗೆ ಬಂದು ದರ್ಶನ ಹಾಗೂ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಬರುವ ಭಕ್ತವೃಂದಕ್ಕೆ ಎರಡೂ ಹೊತ್ತು ಅನ್ನಸಂತರ್ಪಣೆ ಇರುವುದು ಒಂದು ವಿಶೇಷವಾದರೆ; ಇನ್ನೊಂದು ಸನಾತನ ಸಂಸ್ಕೃತಿಗೆ ಪೂರಕವಾದ ಇಲ್ಲಿನ ವಸ್ತ್ರ ಸಂಹಿತೆ.

ನವರಾತ್ರಿಯ ವಿಶೇಷವಾಗಿ ಶ್ರೀ ದೇವಿಯ ಸನ್ನಿದಾನದಲ್ಲಿ ಪ್ರತಿದಿನ ಹಗಲು ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ.

ಅಂತೆಯೇ ಭಾನುಸಪ್ತಮಿ ದಿನದಂದು, ಜಿಲ್ಲೆಯ ಹೆಸರಾಂತ ವಾಹಿನಿ ಭಾವನಾ ಟಿವಿಯ ಮುಖ್ಯಸ್ಥ ಭವಾನಿ ಶಂಕರ ನಾಯ್ಕ್ ಕುಟುಂಬದವರ ಸೇವೆಯಲ್ಲಿ ವಿಶೇಷ ಪೂಜೆ ಪುನಸ್ಕಾರ, ಭಜನಾ ಕಾರ್ಯಕ್ರಮಗಳು ನಡೆದವು.

ರಾತ್ರಿ ಕುಮಟಾದ ಶ್ರೀ ಮಾರುತಿ ಭಜನಾ ಮಂಡಳಿಯ ಪ್ರತಿಭಾನ್ವಿತರಿಂದ ಭಕ್ತಿ ಭಜನಾ ಕಾರ್ಯಕ್ರಮ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಮಾರುತಿ ನಾಯ್ಕ್ ಕೂಜಳ್ಳಿ ಸುಶ್ರಾವ್ಯವಾಗಿ ಹಾಡಿದರು. ಕಂಚಿನ ಕಂಠದ ಶಂಕರ ನಾಯ್ಕ್ ಅವರು ಉಪ್ಪೊಣಿಯ ಶ್ರೀ ಚಾಮುಂಡೇಶ್ವರಿ ದೇವಿಯ ಹೆಸರಿನಲ್ಲಿ ಹಾಡಿದ ಭಕ್ತಿಗೀತೆಗೆ ನೆರೆದಿದ್ದ ಭಕ್ತ ಸಮೂಹವೇ ಚಪ್ಪಾಳೆ ಶಿಳ್ಳೆ ಮೂಲಕ ಪ್ರಶಂಸಿಸಿದ ಕ್ಷಣ ಕಣ್ತುಂಬಿಕೊಳ್ಳುವAತಿತ್ತು. ವೀರೇಂದ್ರ ಗುನಗ ಸಾಹಿತ್ಯ ಪ್ರಧಾನ ಭಕ್ತಿಗೀತೆ ಹಾಡಿದರು. ಇವರಿಗೆ ಪೂರಕವಾಗಿ ಖ್ಯಾತ ಕೀಬೋರ್ಡ್ ವಾದಕ ವಿಜಯ ಮಹಾಲೆ ಹಾರ್ಮೋನಿಯಂ ಸಾಥ್ ನೀಡಿದರು. ಪ್ರತಿಭಾನ್ವಿತ ಹರೀಶ್ ಶೇಟ್ ತಬಲಾ ಸಾಥ್ ನೀಡಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.
ಧರ್ಮದರ್ಶಿ ರವಿ ನಾಯ್ಕ್ ಕುಟುಂಬ ಹಾಗೂ ಆಡಳಿತ ಮಂಡಳಿಯವರು ಕಲಾವಿದರನ್ನು ಗೌರವಿಸಿ ಸತ್ಕರಿಸಿದರು.

ವರದಿ: ನರಸಿಂಹ ನಾಯ್ಕ್ ಹರಡಸೆ

error: