April 26, 2024

Bhavana Tv

Its Your Channel

ಹೊನ್ನಾವರದ ಎಸ್ ಡಿ ಎಂ ಕಾಲೇಜಿನಲ್ಲಿ ಎಂ. ನಾರಾಯಣ ಭಟ್ಟರ ಎಂಬತ್ತರ ಅಭಿನಂದನಾ ಹೊತ್ತಿಗೆ ಪ್ರಕಟಿಸಿದ `ಕಲಾನಿಧಿ’ ಬಿಡುಗಡೆ

ಹೊನ್ನಾವರದ ಎಸ್ ಡಿ ಎಂ ಕಾಲೇಜಿನಲ್ಲಿ ದಿನಾಂಕ 1-11-2022ರಂದು ಸಂಜೆ ಶ್ರೀ ಶ್ರೀಧರ ಭಟ್ಟ ಕೆಕ್ಕಾರು ಇವರ ಅಧ್ಯಕ್ಷತೆಯಲ್ಲಿ ಎಂ. ನಾರಾಯಣ ಭಟ್ಟರ ಎಂಬತ್ತರ ಅಭಿನಂದನಾ ಹೊತ್ತಿಗೆ ಪ್ರಕಟಿಸಿದ `ಕಲಾನಿಧಿ’ ಬಿಡುಗಡೆ ಹಾಗೂ ವಿವಿಧ ಸಂಘ ಸಂಸ್ಥೆ ಗಳಿಂದ ಶಿಷ್ಯರಿಂದ, ಒಡನಾಡಿಗಳಿಂದ ಎಂ. ನಾರಾಯಣ ಭಟ್ಟ ರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಶ್ರೀ ಶ್ರೀಕಾಂತ ಭಟ್ಟ ಕೆಕ್ಕಾರು ಎಲ್ಲರ ಪರವಾಗಿ ಎಂ. ನಾರಾಯಣ ಭಟ ್ಟರನ್ನು ಅಬಿ üನಂದಿಸಿ, ಶ್ರೀಯುತರ ಜೀವನ ಪ್ರೀತಿ, ಸಾಹಿತ್ಯ ಪ್ರೀತಿ, ಚತುರ್ ಭಾಷಾ ಪ್ರಾಮುಖ್ಯತೆ, ಚಿತ್ರಕಲೆ, ಸಂಗ್ರಹ, ಕೃಷಿ, ಅಧ್ಯಯನ, ಅಧ್ಯಾಪನ ಮುಂತಾದ ಪ್ರವೃತ್ತಿಯ ಸುಸಂಸ್ಕೃತ ಜೀವನ ವಿಧಾನವನ್ನು ಸಭೆಗೆ ಪರಿZ Àಯಿಸಿದರು. ಡಾ. ಪತಂಜಲಿ ವೀಣಾಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಧರ ಭಟ್ಟ ಅಧ್ಯಕ್ಷೀಯ ಮಾತುಗಳನ್ನಾಡುತ್ತ `ಎಲ್ಲರೊಳಗೊಂದಾಗಿ,
ಕಷ್ಟ ಸಹಿಷ್ಣುವಾಗಿ, ಉತ್ತಮ ಸಂಸಾರಿಯಾಗಿ ಬಾಳಿದ ಎಂ. ನಾರಾಯಣ ಭಟ್ಟರ ವ್ಯಕ್ತಿತ್ವವನ್ನು ಕೊಂಡಾಡಿದರು. ಪ್ರೊ. ನಾಗರಾಜ ಹೆಗಡೆ ಅಪಗಾಲ, ಪ್ರೊ. ಪ್ರಶಾಂತ ಮೂಡಲಮನೆ ಕರ‍್ಯಕ್ರಮ ನಿರೂಪಿಸಿ, ಎಲ್ಲರನ್ನೂ ವಂದಿಸಿದರು.

ಖ್ಯಾತ ವಾಗ್ಮಿ, ವಿದ್ಯಾ ವಾಚಸ್ಪತಿ, ತಾಳ ಮದ್ದಲೆ ಅರ್ಧದಾರಿಉಪಕಾಂತ ಭಟ್ಟ ಕೆರೆಕೈ ಕಲಾನಿಧಿ' ಗ್ರಂಥವನ್ನು ಬಿಡುಗಡೆಗೊಳಿಸಿನಾರಾಯಣ ಭಟ್ಟ ರ ಸರಳತೆ, ಜೀವನ ಪ್ರೇಮ,ಕಳಕಳಿಯನ್ನು ಸಮಾಜ ಗುರುತಿಸಿದ್ದು ಅರ್ಥಪೂರ್ಣ ಮುಂದೆಯೂ ಈ ಕರ‍್ಯ ನಡೆಯಲಿ’ ಎಂದು ಅಭಿಪ್ರಾಯಪಟ್ಟರು.

ನಂತರ ಯಕ್ಷಗಾನ, ತಾಳಮದ್ದಲೆ, ಶ್ರೀರಾಮ ನಿರ್ಯಾಣ ನಡೆಯಿತು. ರಾಮನಾಗಿ ವಿದ್ಯಾನ್ ಉಮಾಕಾಂತ ಭಟ್ಟ, ಲಕ್ಷö್ಮಣನಾಗಿ ಶ್ರೀ ನಾರಾಯಣ ಯಾಜಿ ಸಾಲೆಬೈಲ್, ದೂರ್ವಾಸನಾಗಿ ಡಾ. ಜಿ.ಕೆ. ಹೆಗಡೆ ಹರಿಕೇರಿ, ಕಾಲ ಪುರುಷನಾಗಿ ಶಿವಾನಂದ ಹೆಗಡೆಕೆರೆಮನೆ ಸೊಗಸಾಗಿ ಪಾತ್ರ ನಿರ್ವಹಣೆ ಮಾಡಿದರು. ಉದ್ಯಮಿ ಎಂ.ಎನ್. ಶ್ರೀರಾಮ ಕರ‍್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿ, ಊಟದ ವ್ಯವಸ್ಥೆ ಕಲ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು

error: