February 6, 2023

Bhavana Tv

Its Your Channel

ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆಯ ಕುರಿತು ಹೊನ್ನಾವರ ಪಟ್ಟಣದಲ್ಲಿ ಜಾಗೃತಿ ಜಾಥಾ

ಹೊನ್ನಾವರ: ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆಯ ಕುರಿತು ಹೊನ್ನಾವರ ಪಟ್ಟಣದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ಬುಧವಾರ ಜಾಗೃತಿ ಜಾಥಾ ಜರುಗಿತು.

ಶರಾವತಿ ವೃತ್ತದ ಬಳಿ ಜಾಥಾ ಕಾರ್ಯಕ್ರಮಕ್ಕೆ ತಹಶೀಲ್ದಾರ ನಾಗರಾಜ ನಾಯ್ಕಡ್ ಚಾಲನೆ ನೀಡಿದರು. ನಂತರ ಮಾತನಾಡಿ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಮತದಾರ ಪಟ್ಟಿಯ ಕರಡು ಪ್ರತಿಯನ್ನು ಪ್ರಕಟಿಸಲಾಗುತ್ತಿದೆ. ಈ ಕರಡು ಪ್ರತಿಯಲ್ಲಿ ಜನವರಿ 1ರಂದು 18 ವರ್ಷವಾಗುವ ಪ್ರತಿಯೊರ್ವರಿಗೂ ಸೆರ್ಪಡೆಗೆ ಅವಕಾಶ ಇದ್ದು, ಈ ಬಗ್ಗೆ ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರ ಹೆಸರು, ತಿದ್ದುಪಡಿಗೆ ಅವಕಾಶ ಇದ್ದು, ಎಲ್ಲಾ ಮತಗಟ್ಟೆಯಲ್ಲಿ ಪ್ರಕಟಿಸಲಾಗುವುದು. ತಿದ್ದುಪಡಿಗಳಿಗೆ ಬಿ.ಎಲ್.ಓ ಮೂಲಕ ಹಾಗೂ ತಹಶೀಲ್ದಾರ ಕಾರ್ಯಲಯದ ಮೂಲಕ ಸಂಭದಿಸಿದ ದಾಖಲಾತಿ ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.
ಜಾಥಾವು ಪಟ್ಟಣದ ಶರಾವತಿ ವೃತ್ತದಿಂದ ತೇಲಂಗ ರಸ್ತೆಯ ಮೂಲಕ ಬಜಾರ ಮಾರ್ಗವಾಗಿ ತಹಶೀಲ್ದಾರ ಕಾರ್ಯಲಯದವರೆಗೆ ಜಾಗೃತಿ ಜಾಥಾ ಜರುಗಿತು. ಪ.ಪಂ.ಉಪಾಧ್ಯಕ್ಷೆ ನಿಶಾ ಶೇಟ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಭಟ್, ಸದಸ್ಯ ಶ್ರೀಪಾದ ನಾಯ್ಕ, ಯಿವಜನಸೇವಾಕ್ರೀಡಾಧಿಕಾರಿ ಸುಧೀಶ ನಾಯ್ಕ, ಕಂದಾಯ ಹಾಗೂ ತಾ.ಪಂ. ಪ.ಪಂ.ಸಿಬ್ಬAದಿಗಳು ಎಸ್.ಡಿ.ಎಂ.ಮತ್ತು ಐಟಿಐ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About Post Author

error: