February 1, 2023

Bhavana Tv

Its Your Channel

ಅರೇಅಂಗಡಿಯ ತೊಟ್ಟಿಲಗುಂಡಿಯಲ್ಲಿ ಆಸ್ತಿ ವಿಷಯಕ್ಕೆ ಸಂಭದಿಸಿದoತೆ ಕೊಲೆ , ಮೂವರು ಆರೋಪಿಗಳು ನ್ಯಾಯಲಯದ ಮುಂದೆ ಶರಣು

ಹೊನ್ನಾವರ ತಾಲೂಕಿನ ಅರೇಅಂಗಡಿಯ ತೊಟ್ಟಿಲಗುಂಡಿಯಲ್ಲಿ ಆಸ್ತಿ ವಿಷಯಕ್ಕೆ ಸಂಭದಿಸಿದAತೆ ನಡೆದ ಕೊಲೆ ಪ್ರಕರಣಕ್ಕೆ ಸಂಭದಿಸಿದAತೆ ನಡೆದ ಪ್ರಮುಖ ಮೂವರು ಆರೋಪಿಗಳು ನ್ಯಾಯಲಯದ ಮುಂದೆ ಶರಣಾಗಿದ್ದಾರೆ.

  ನ 5 ರಂದು ಆಸ್ತಿ ವಿಷಯಕ್ಕೆ ಹೊನ್ನಾವರದಲ್ಲಿ ಸಹೋದರರ ನಡುವೆ ನಡೆದ ಕಲಹದಲ್ಲಿ  ಹನುಮಂತ ನಾಯ್ಕ ಇವರು ಮೃತಪಟ್ಟು, ಮಾರುತಿ ನಾಯ್ಕ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಭದಿಸಿದAತೆ ನಾಲ್ವರ ವಿರುದ್ದ ಪೊಲೀಸ್ ಠಾಣಿಯಲ್ಲಿ ದೂರು ದಾಖಲಾಗಿತ್ತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ  ಬಲೆ ಬೀಸಿದ್ದರು. ಘಟನೆ ನಡೆದ ಮಾರನೆ ದಿನವೇ ಘಟನೆಗೆ ಸಂಭದಿಸಿದAತೆ ನಾಲ್ಕನೇ ಆರೋಪಿಯಾದ ಹೊಸಾಕುಳಿಯ ಮಂಜುನಾಥ ಮುಕ್ರಿ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಮುಖ ಆರೋಪಿಗಳ ಪತ್ತೆಗಾಗಿ ಅರೇಅಂಗಡಿಯ ಸುತ್ತಮುತ್ತ ಪ್ರದೇಶ ಮತ್ತು ಚಿಕ್ಕನಕೋಡ ಗ್ರಾಮದ ವಿವಿಧಡೆ ಶೋಧ ಕಾರ್ಯ ನಡೆಸಿದ್ದರು. ಬುಧವಾರ ಮುಂಜಾನೆ ಆರೋಪಿಗಳಾದ ತೊಟ್ಟಲಗುಂಡಿಯ ಮೃತರ ಸಹೋದರರಾದ ವಿನಾಯಕ ಹೊನ್ನಪ್ಪ ನಾಯ್ಕ, ಚಿದಂಬರ ನಾಯ್ಕ, ಹಾಗೂ ಜನಕಡ್ಕಲ್ ಮೂಲದ ಮಂಜುನಾಥ ಗಿಡ್ಡ ನಾಯ್ಕ ಇವರು ಹೊನ್ನಾವರ. ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ,

About Post Author

error: