March 29, 2024

Bhavana Tv

Its Your Channel

ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯಿಂದ 27 ನೇಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಾಲೋಚನೆ ಸಭೆ

ಹೊನ್ನಾವರ: ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ 27 ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಾಲೋಚನೆ ಸಭೆಯನ್ನು ಮಾವಿನಕುರ್ವಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಜಿ ಶಂಕರ ಉಪಸ್ಥಿತರಿದ್ದರು. ತಮ್ಮ ಸರಳ ಸಜ್ಜನಿಕೆಯ ಉದಾರ ಗುಣಗಳಿಂದ ತಮ್ಮ ಹಿರಿಯರು ಸಾಮಾಜಿಕ ಕಳಕಳಿ ಉಳ್ಳವರಿಂದ ಇವತ್ತಿನ ಸಮಾಲೋಚನೆ ಸಭೆಯು ಉದ್ಘಾಟನೆ ಆಗಬೇಕು ಅಂದಾಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಜಿ ಶಂಕರ ಅವರು ಜೆ ಟಿ ಪೈ ಅವರನ್ನು ಸಭೆಯ ಉದ್ಘಾಟಕರಾಗಿ ಆಹ್ವಾನ ನೀಡಿದರು.

ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಜೆ ಟಿ ಪೈ ಈ ಸಂಘಟನೆಗೆ ಪ್ರಾಮಾಣಿಕ ಅಧ್ಯಕ್ಷರು ಪ್ರಾಮಾಣಿಕ ಪದಾಧಿಕಾರಿಗಳು ಇದ್ದಾರೆ. ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ ಅಧ್ಯಕ್ಷರು ರಾಜಕೀಯವಾಗಿ ಆರ್ಥಿಕವಾಗಿ ಬೆಳವಣಿಗೆಗೆ ಸಾಧಿಸದೆ ಇರಬಹುದು ಹೋರಾಟದ ವಿಷಯದಲ್ಲಿ ಅವರು ಯಾವತ್ತು ಅಗ್ರಗಣ್ಯ ನಾಯಕರು ಸಮಗ್ರ ಹೊನ್ನಾವರದ ಅಭಿವೃದ್ಧಿಗೆ ಅವರು ಕಂಕಣಬಧ್ಧರಾಗಿ ಕೆಲಸ ಮಾಡುತ್ತೀದ್ದಾರೆ ಎಂದು ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು.

ಜಿ ಜಿ ಶಂಕರ್ ಮಾತನಾಡಿ ಸಂಘಟನೆ ನಮ್ಮೇಲ್ಲರ ಸಮಸ್ಯೆ ಬಗೆಹರಿಸಲು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮಾಲೋಚನೆ ಸಭೆಯನ್ನು ನಡೆಸಿಕೊಂಡು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವಾಗ ನಾವು ಸಹ ಅವರ ಜೊತೆ ಕೈಜೋಡಿಸಿಬೇಕು ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಜಿ ಎನ್ ಗೌಡರು ವಹಿಸಿದ್ದರು. ಈ ಸಂದರ್ಭದಲ್ಲಿ ಜಿ ಎನ್ ಗೌಡರ ಹೋರಾಟದ ಸಾಧನೆ ಪಟ್ಟ ಹೋರಾಟದ ದಿನಗಳ ಸಾಮಾಜಿಕ ಕಳಕಳಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಇವರ ಸೇವೆಯನ್ನು ಪರಿಗಣಿಸಿ ಸನ್ಮಾನ ಕಾರ್ಯಕ್ರಮವನ್ನು ಜಿ ಎನ್ ಗೌಡರಿಗೆ ಆ ಭಾಗದ ಸಮಸ್ತ ಜನಪ್ರತಿನಿಧಿಗಳು ಊರಿನ ನಾಗರಿಕ ಬಂಧುಗಳು ಸನ್ಮಾನವನ್ನು ನೇರವೇರಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ ಎನ್ ಗೌಡರು ನಾವು ನೀವು ಕಂಡ ಹೊನ್ನಾವರ ನಿಮ್ಮೇಲ್ಲರ ಹೊನ್ನಾವರ ಆಗಲು ಹೋರಾಟದ ಮೂಲಕ ಗುರಿ ಸಾಧಿಸಲು ಸಾಧ್ಯ ಈ ಸಂಘಟನೆಯಿAದ ಯಾರಿಗೂ ವ್ಯಯಕ್ತಿಕ ಲಾಭ ಇಲ್ಲ ಇದರಲ್ಲಿ ಯಾರು ರಾಜಕೀಯ ವಿಷಬೀಜ ಬಿತ್ತುವ ಅವಶ್ಯಕತೆ ಇಲ್ಲ ರಾಜಕೀಯ ವೇದಿಕೆಗೆ ರಾಜಕೀಯ ವೇದಿಕೆಯಲ್ಲಿ ಉತ್ತರ ಸಿಗುತ್ತದೆ .ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆಯಲ್ಲಿ ನಮ್ಮ ಹೊನ್ನಾವರದ ಸಮಗ್ರ ಸಮಸ್ಯೆಗಳನ್ನು ಬಗೆಹರಿಸಲು ನಾವೇಲ್ಲರು ಪಕ್ಷಾತೀತವಾಗಿ ಶ್ರಮವಹಿಸಿ ಸಾರ್ಥಕತೆ ಪಡೆಯುವುವ ಎಂದರು.

ಪೀಟರ್ ಮೇಂಡಿಸ ಮಾತನಾಡಿ ಒಳ್ಳೆಯ ಬೆಳವಣಿಗೆಗೆ ಒಳ್ಳೆಯ ಕೆಲಸಗಾರರು ಇರುವಾಗ ನಮ್ಮ ಒಳ್ಳೆಯ ಕೆಲಸಕ್ಕೆ ಯಾವತ್ತು ದೇವರ ಆಶೀರ್ವಾದ ಇರುತ್ತದೆ ಛಲದಿಂದ ನಾವು ಅದನ್ನು ಸಾಧಿಸಬೇಕು ಅಂದರು.
ಎಸ್ ಡಿ ಹೆಗಡೆ ಮಾತನಾಡಿ ಧನದಾಹ ಹುಚ್ಚು ಮನಸ್ಸಿನ ಹತ್ತು ಮುಖಗಳು ಯಾರಿಗೂ ಅವಶ್ಯಕತೆ ಇಲ್ಲ .ಕಾಯಾ ವಾಚಾ ಮನಸಾ ಸೇವಾ ಮನೋಭಾವನೆ ಈ ಸಂಘಟನೆಯಲ್ಲಿ ಮುಖ್ಯವಾಗಿ ಬೇಕಾಗಿರುವುದು ಎಂದರು.
ಶಂಕರ್ ಗೌಡ ಮಾತನಾಡಿ ಬದಲಾವಣೆ ನಮ್ಮ ಹ್ರದಯದಲ್ಲಿ ಬಂದಾಗ ಅದರ ಸಾರ್ಥಕತೆ ಪಡೆಯಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಹೊನ್ನಾವರದ ಸಮಗ್ರ ಬೆಳವಣಿಗೆಗೆಯ ಪ್ರಮುಖ ಹಕ್ಕೊತ್ತಾಯ ಮಂಡನೆಯಾದ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಬೆಂಬಲ ಸೂಚಿಸಲಾಯಿತು ಇದಕ್ಕೆ ಸಮಸ್ತರು ಬೆಂಬಲ ಸೂಚಿಸಿದರು

error: