February 6, 2023

Bhavana Tv

Its Your Channel

ನ.12ಕ್ಕೆ ಪ್ರೇರಣಾ ಪ್ರವಾಹ-2022″ ಎಂಬ ಶೀರ್ಷಿಕೆಯಡಿಯಲ್ಲಿ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರ

ಹೊನ್ನಾವರ: ದಿನಾಂಕ 12/11/2022 ಶನಿವಾರರಂದು ರೊಟರಿ ಕ್ಲಬ್ ಹೊನ್ನಾವರ, ಯುವಾ ಬ್ರಿಗೇಡ್ ಹೊನ್ನಾವರ ಮತ್ತು ಉತ್ತರಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಪಕರ ಸಂಘ ಕಾರವಾರ ಇವರ ಆಶ್ರಯದಲ್ಲಿ “ಪ್ರೇರಣಾ ಪ್ರವಾಹ-2022″ಎಂಬ ಶೀರ್ಷಿಕೆಯಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಐದು ತಾಲ್ಲೂಕಿನ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

 ಇದೊಂದು ಅಪೂರ್ವ ಅವಕಾಶದ ಕಾರ್ಯಕ್ರಮವಾಗಿದ್ದು ಮಾನ್ಯ ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳು, ಉಪನಿರ್ದೇಶಕರು,ಮತ್ತು ಪ್ರಾಚಾರ್ಯರು ಉಪಸ್ಥಿತರಿದ್ದು ಪೂರ್ವಾಹ್ನ 9.45 ಕ್ಕೆ ಸರಿಯಾಗಿ ಉದ್ಘಾಟನೆಗೊಳ್ಳಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020:-ರೋಹಿತ್ ಚಕ್ರತೀರ್ಥ, ರಾಷ್ಟ್ರೀಯತೆ:-ಚಕ್ರವರ್ತಿ ಸೂಲಿಬೆಲೆ, ಸೃಜನಾತ್ಮಕ ಕಲಿಕೆ:-ಸುರೇಶ ಕುಲಕರ್ಣಿ ಇವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ

ಈ ಕಾರ್ಯಕ್ರಮದಲ್ಲಿ ಪ್ರತಿ ತಾಲ್ಲೂಕಿನ ಐದು ಉತ್ತಮ ಶಿಕ್ಷಕರಿಗೆ ನ್ಯಾಷನಲ್ ಬಿಲ್ಡರ್ ಅವಾರ್ಡ್"ಮತ್ತು 'ಗುರು ಗೌರವ ನಮನ 'ದಿಂದ ಪುರಸ್ಕರಿಸಲಾಗುವುದು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ (ಐ.ಎ.ಎಸ್),  ಅತಿಥಿಗಳಾಗಿ ಪ್ರಿಯಾಂಗ ಎಂ. (ಐ.ಎ.ಎಸ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ, ಉ.ಕ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಈಶ್ವರ ನಾಯ್ಕ, ಡಯಟ್ ಪ್ರಾಚಾರ್ಯರು ಕುಮಟಾ ಎನ್.ಜಿ.ನಾಯಕ. 

 ಸಂಜೆ 06:30ರಿಂದ ಶ್ರೀ ಚಕ್ರವರ್ತಿ ಸೂಲಿಬೆಲೆಯವರಿಂದ "ಸಮರ್ಥ ಭಾರತ ಸಧೃಡ ತರುಣ" ಎಂಬ ವಿಷಯದಲ್ಲಿ ಚಿಂತನ ಮಂಥನ ಕಾರ್ಯಕ್ರಮವು ಜರುಗಲಿದೆ. 
 ನಾಡಿನ ಖ್ಯಾತ ಉಪನ್ಯಾಸಕರಿಂದ ಮೌಲ್ಯಯುತ ಉಪನ್ಯಾಸ ಕಾರ್ಯಕ್ರಮ ಇರುವುದರಿಂದ, ಶಿಕ್ಷಕರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಸಂಜೆ ಸಾರ್ವಜನಿಕರಿಗಾಗಿ ನಡೆಯುವ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮಕ್ಕೂ ಹೆಚ್ಚಿನ ಜನರು ಬಂದು ಸಹಕರಿಸಬೇಕಾಗಿ ರೋಟರಿ ಕ್ಲಬ್ ಅಧ್ಯಕ್ಷರಾದ ಮಹೇಶ ಕಲ್ಯಾಣಪುರ, ಯುವ ಬ್ರಿಗೇಡ್ ಸಂಚಾಲಕರಾದ ಸತೀಶ ಪಟಗಾರ ಮತ್ತು ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷರಾದ ಎಲ್.ಎಮ್.ಹೆಗಡೆಯವರು ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

About Post Author

error: