March 24, 2024

Bhavana Tv

Its Your Channel

ಕಾರ್ತಿಕ ಬಾಗಿಲವೈದ್ಯಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಹೊನ್ನಾವರ: ಗೋವಾದ ಮಡಗಾ0ವ್‌ನಲ್ಲಿರುವ ರವೀಂದ್ರ ಭವನದಲ್ಲಿ ನ.15ರಿಂದ 22ರವರೆಗೆ ನಡೆದ ಇಂಡಿಯನ್ ಇಂಟರ್ ನ್ಯಾಷನಲ್ ಇನೋವೇಶನ್ ಆ್ಯಂಡ್ ಇನ್ವೆನ್ಷನ್ ಎಕ್ಸೊ÷್ಪÃ (ಐಎನ್‌ಇಎಕ್ಸ್)- 2022 ಎನ್ನುವ ನಾವೀನ್ಯತೆ ಮತ್ತು ಹೊಸ ಅವಿಷ್ಕಾರಗಳ ಕುರಿತಾದ ಏಳನೆಯ ಅಂತರರಾಷ್ಟ್ರೀಯ ಪ್ರದರ್ಶನದಲ್ಲಿ ಹೊನ್ನಾವರದ ಮಲ್ನಾಡ್ ಎಜುಕೇಶನ್ ಸೊಸೈಟಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಬಿಎಸ್ ಪೂರ್ವ ವಿದ್ಯಾರ್ಥಿ ಕಾರ್ತಿಕ್ ಬಾಗಿಲವೈದ್ಯ ಭಾಗವಹಿಸಿ ತಮ್ಮ ಆವಿಷ್ಕಾರವಾದ ಕಡಿಮೆ ಖರ್ಚಿನಲ್ಲಿ ಸ್ಥಾಯಿ ವಿದ್ಯುತ್ ಬಳಸಿ ಹವೆಯ ಕಲ್ಮಶಗಳ ಬೇರ್ಪಡಿಕೆಯ ಮಾದರಿಯನ್ನು ಪ್ರದರ್ಶಿಸಿ ಬೆಳ್ಳಿಯ ಪದಕವನ್ನು ಗೆದ್ದಿದ್ದಾರೆ.

ಈ ಪ್ರದರ್ಶನದಲ್ಲಿ ಪ್ರಪಂಚದ ವಿವಿಧೆಡೆ ಯ 30 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಹೊನ್ನಾವರದ ಬೇರಂಕಿA- ಕೊಂಡದಕುಳಿಯ ಕಾರ್ತಿಕ್ ತಮ್ಮ ಮಾದರಿಯನ್ನು ಪ್ರದರ್ಶಿಸಲು ಪ್ರೋತ್ಸಾಹಿಸಿದ ಎಸ್‌ಡಿಎಂ ಮಹಾವಿದ್ಯಾಲಯದ ಗುರು ವೃಂದಕ್ಕೆ ಮತ್ತು ಡಾ.ಎಂ.ಪಿ.ಕರ್ಕಿಇನ್ಸಿಟ್ಯೂಟ್
ಆಫ್ ಎಕ್ಸಲೆನ್ಸ್ ಆ್ಯಂಡ್ ರಿಸರ್ಚನ ಮಾರ್ಗದರ್ಶಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇವರ ಸಾಧನೆಗೆ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ, ಎಸ್‌ಡಿಎಂ ಮಹಾವಿದ್ಯಾಲಯದ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ಶ್ರೀಕುಮಾರ ಕೇಬಲ್ ಗುಂಡ್ಲುಪೇಟೆ ಮಾಲಕರಾದ ಶ್ರೀನಿವಾಸ ಅಭಿನಂದಿಸಿ ಶುಭಹಾರೈಸಿದ್ದಾರೆ.

error: