April 25, 2024

Bhavana Tv

Its Your Channel

“ಹೆಚ್.ಐ.ವಿ ತಡೆಗಟ್ಟುವಲ್ಲಿ ಯುವಜನತೆಯ ಪಾತ್ರ ಮುಖ್ಯ”- ಹಿರಿಯ ನ್ಯಾಯಧೀಶ ಕುಮಾರ ಜಿ.

ಹೊನ್ನಾವರ:- “ಹೆಚ್.ಐ.ವಿ ತಡೆಗಟ್ಟಲು ಯುವಜನತೆಯ ಪಾತ್ರ ಮುಖ್ಯವಾಗಿದೆ. ವಿದ್ಯಾವಂತ ಯುವ ಜನತೆ ಹೆಚ್.ಐ.ವಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸೇವೆಯಲ್ಲಿ ತೊಡಗಿಕೊಳ್ಳಬೇಕು.ಹೆಚ್.ಐ.ವಿ ಬರಲು ಕಾರಣವಾಗುವ ನಾಲ್ಕು ಕಾರಣಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ” ಎಂದು ಹೊನ್ನಾವರ ಕಾನೂನು ಸೇವಾ ಸಮಿತಿ ಅಧ್ಯಕ್ಷರು ಮತ್ತು ಹಿರಿಯ ನ್ಯಾಯಧೀಶರಾದ ಶ್ರೀಯುತ ಕುಮಾರ ಜಿ ರವರು ಹೇಳಿದರು.

ಅವರು ತಾಲೂಕಾ ಆಸ್ಪತ್ರೆ ಹೊನ್ನಾವರದಲ್ಲಿ ಆರೋಗ್ಯ ಇಲಾಖೆೆ,ಐ.ಸಿ.ಟಿ.ಸಿ ಕೇಂದ್ರ ತಾಲೂಕಾ ಆಸ್ಪತ್ರೆ ಹೊನ್ನಾವರ,ತಾಲೂಕ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಹೊನ್ನಾವರ, ಸಂತ ಇಗ್ನೇಷಿಯಸ್ ಆರೋಗ್ಯ ವಿಜ್ಞಾನ ಸಂಸ್ಥೆ ಇವುಗಳು ಸಂಯುಕ್ತಾಶ್ರದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವದರ ಮೂಲಕ ಚಾಲನೆ ನೀಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ|| ಉಷಾ ಹಾಸ್ಯಗಾರ ರವರು ಪ್ರಾಸ್ತವಿಕ ಮಾತುಗಳನಾಡುತ್ತ “ಈ ಸಲದ ಘೋಷ ವಾಕ್ಯ “ಸಮಾನಗೊಳಿಸು”. ಅಂದರೆ ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಸಮಾನತೆಗಳನ್ನು ಪರಿಹರಿಸಿ ಏಡ್ಸ್ನ್ನು ಕೊನೆಗೊಳಿಸಿವುದು ಆಗಿದೆ. 2030 ರ ವೇಳೆಗೆ ಏಡ್ಸ್ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಇವತ್ತು ಜನಜಾಗೃತಿ ಸೇರಿದಂತೆ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಅನುಷ್ಠಾನ ಮಾಡುತ್ತಿದೆ. ಇವತ್ತು ಹೊಸ ಹೆಚ್.ಐ.ವಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದು ಸಮಧಾನಕರವಾದರೂ ಸೋಂಕು ಸಂಪೂರ್ಣವಾಗಿ ಹೋಗಿಲ್ಲ. ಹದಿಹರೆಯದವರು ಹೆಚ್.ಐ.ವಿ ಸೊಂಕಿಗೆ ಹೋಗದಂತೆ ತಡೆಗಟ್ಟಲು ಆರೋಗ್ಯ ಇಲಾಖೆ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಮೂಲಕ ಹೆಚ್.ಐ.ವಿ ಏಡ್ಸ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.ಅಲ್ಲದೆ ಹೈಸ್ಕೂಲ್ ಹಂತದಲ್ಲಿ ಆಪ್ತಸಮಾಲೋಚಕರ ಮೂಲಕ ಹದಿಹರೆಯದ ಆರೋಗ್ಯ ಶಿಕ್ಷಣ ತರಬೇತಿ ನೀಡಲಾಗುತ್ತಿದೆ.ಹೆಚ್.ಐ.ವಿ ಸಂಬAಧಿತ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಸೆಂಟ್ ಇಗ್ನೇಶಿಯಸ್ ಆರೋಗ್ಯ ಮಹಾವಿದ್ಯಾಲಯವನ್ನು, ಮತ್ತು ಉತ್ತಮ ಸೇವೆಗಾಗಿ ಐ.ಸಿ.ಟಿ.ಸಿ ಪ್ರಯೋಗಶಾಲಾ ತಂತ್ರಜ್ಞರಾದ ಉಮೇಶ ಕೆ ರವರನ್ನು ಜಿಲ್ಲಾಮಟ್ಟದಲ್ಲಿ ಗುರುತಿಸಿ ಸನ್ಮಾನಿಸುತ್ತಿರುವುದು ಹೊನ್ನಾವರಕ್ಕೆ ಹೆಮ್ಮೆಯ ಸಂಗತಿ” ಎಂದು ಹೇಳಿದ್ದರು. ಅಲ್ಲದೇ ಹೆಚ್.ಐ.ವಿ/ಏಡ್ಸ್ ಹರಡುವ ಬಗ್ಗೆ ಅದನ್ನು ತಡೆಗಟ್ಟುವ ವಿಧಾನ,ಸೋಂಕಿತರಿಗೆ ಇರುವ ಔಷಧೋಪಾಚಾರಗಳ ಸೌಲಭ್ಯ, ತಾಲೂಕಾ ಆಸ್ಪತ್ರೆಯಲ್ಲಿ ಹೆಚ್.ಐ.ವಿ ಕುರಿತು ಇರುವ ಐ.ಸಿ.ಟಿ.ಸಿ ಕೇಂದ್ರಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದರು. ಏಡ್ಸ್ ಜಾಗೃತಿ ಜಾಥವು ಹೊನ್ನಾವರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಘೋಷಣೆಗಳನ್ನು ಕೂಗುತ್ತಾ,ಕರಪತ್ರಗಳನ್ನು ಹಂಚುತ್ತಾ ಜನರಲ್ಲಿ ಜಾಗೃತಿಯನ್ನುಂಟು ಮಾಡಿದ್ದರು. ಪುರಸಭೆಯ ಎದರುಗಡೆ ಸಂತ ಇಗ್ನೇಷಿಯಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಏಡ್ಸ್ ಕುರಿತಾದ ಬೀದಿ ನಾಟಕ ಪ್ರದರ್ಶಿಸಲಾಯಿತು. ಅಲ್ಲದೆ ಸಾರ್ವಜನಿಕರ ಪ್ರಶಂಸೆಗೆ ಒಳಗಾಯಿತು. ಐ.ಸಿ.ಟಿ.ಸಿ ಆಪ್ತಸಮಾಲೋಚಕರಾದ ವಿನಾಯಕರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿ ವಹಿಸಿದ್ದರು. ಸಿವಿಲ್ ಪ್ರಧಾನ ನ್ಯಾಯಧೀಶರಾದ ಶಿ ಚಂದ್ರಶೇಖರ ಬಣಕಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ವಕೀಲರ ಸಂಘದ ಸದಸ್ಯರುಗಳು,ಸರ್ಕಾರಿ ಅಭಿಯೋಜಕರು,ವಕೀಲರುಗಳು, ಆರೋಗ್ದ ಇಲಾಖೆಯ ತಜ್ಷ ವೈದ್ಯರುಗಳು,ಸಿಬ್ಬಂದಿಗಳು,ಸೆAಟ್ ಇಗ್ನೇಶಿಯಸ್ ಭೋದಕ ಸಿಬ್ಬಂಧಿ, ನರ್ಸಿಂಗ್ ವಿದ್ಯಾರ್ಥಿಗಳು ಹಾಜರಿದ್ದರು.

error: