April 24, 2024

Bhavana Tv

Its Your Channel

ಡಿ. 9 ಮತ್ತು 10 ರಂದು ಜಲವಳ್ಳ ಕರ್ಕಿಯ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ

ಹೊನ್ನಾವರ ತಾಲೂಕಿನ ಜಲವಳ್ಳ ಕರ್ಕಿಯ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಡಿ. 9 ಮತ್ತು 10 ರಂದು ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ ತಿಳಿಸಿದರು.

ಹೊನ್ನಾವರದಲ್ಲಿ ನಡೆದ ಮಾದ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಲವಳ್ಳಿ ಗ್ರಾಮ ಪಂಚಾಯಿತಿ, ಜಲವಳಕರ್ಕಿ ಸರಕಾರಿ ಹಿ.ಪ್ರಾ.ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶತಮಾನೋತ್ಸವ ಆಚರಣೆ ನಡೆಯಲಿದೆ. 1922ರಲ್ಲಿ ಸುಬೇದಾರ ಗೋವಿಂದ ನಾಯ್ಕ ಶಾಲೆಯನ್ನು ಆರಂಭಿಸಿದ್ದರು. ಹಲವು ಏಳುಬೀಳುಗಳ ನಡುವೆ ಗ್ರಾಮಸ್ಥರು ಶಾಲೆಯನ್ನು ಉಳಿಸಿಕೊಂಡಿದ್ದರು. ದಿ. ತಿಮ್ಮಪ್ಪ ಬಿಳಿಯಾ ನಾಯ್ಕ, ನಂತರ ಅವರ ಮಗ ದಿ.ನಾರಾಯಣ ತಿಮ್ಮಪ್ಪ ನಾಯ್ಕ ಶಾಲೆಗೆ ಸ್ಥಳ ಕೊಟ್ಟಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿಕ್ಷಣ ಸಚಿವರಿದ್ದಾಗ ಕಟ್ಟಡಕ್ಕೆ ಅನುದಾನವನ್ನು ಕೊಡುವ ಮೂಲಕ ಸಹಾಯ ಮಾಡಿದ್ದಾರೆ. ಈಗ ಶಾಲೆ ನೂರುವರ್ಷಗಳನ್ನು ಪೂರೈಸಿದೆ ಎಂದು ತಿಳಿಸಿದರು.

ಡಿ.9ರಂದು ಬೆಳಿಗ್ಗೆ 10ಗಂಟೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಉಪಸ್ಥಿತಿಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಶಾಲಾ ಕೊಠಡಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಧ್ವಜಸ್ಥಂಭ ಉದ್ಘಾಟಿಸುವರು. ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಅನಂತಕುಮಾರ ಹೆಗಡೆ, ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್.ವಿ.ಸಂಕನೂರು, ಶಾಸಕ ದಿನಕರ ಶೆಟ್ಟಿ, ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಜಲವಳ್ಳಿ ಗ್ರಾ. ಪಂ.ಅಧ್ಯಕ್ಷ ಮಂಜುಳಾ ಗೌಡ, ಮಾಜಿ ಶಾಸಕ ಜೆ.ಡಿ.ನಾಯ್ಕ ಮತ್ತಿತರರು ಪಾಲ್ಗೊಳ್ಳುವರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ನ್ಯಾಯವಾದಿ ಎಂ.ಎನ್.ಸುಬ್ರಹ್ಮಣ್ಯ ಅಭಿನಂದನಾ ನುಡಿಗಳನ್ನಾಡುವರು. ಬೆಳಿಗ್ಗೆ 8ಗಂಟೆಯಿAದ ಭಜನೆ, ಪೂರ್ಣಕುಂಭ ಸ್ವಾಗತ, ಸಂಜೆ 4ಗಂಟೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ.
ಡಿ.10ರಂದು ಸಂಜೆ 5.30ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆ ವಹಿಸುವರು. ರಾಷ್ಟ್ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಜೆ.ಕೈರನ್ ಸಮಾರೋಪ
ನುಡಿಗಳನ್ನಾಡುವರು. ಮಾಜಿ ಶಾಸಕ ಮಂಕಾಳು ವೈದ್ಯ ಮತ್ತಿತರರು ಪಾಲ್ಗೊಳ್ಳುವರು. ಸಂಜೆ 3ಗಂಟೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾರುತಿ ವಿ.ನಾಯ್ಕ, ವಿಷ್ಣು ನಾಯ್ಕ, ಈಶ್ವರ ಮೇಸ್ತ, ನಾಗೇಶ ನಾಯ್ಕ, ಎಚ್.ಆರ್.ಗಣೇಶ, ಅನಂತ ನಾಯ್ಕ, ಧರ್ಮ ನಾಯ್ಕ, ಸದಾಶಿವ ನಾಯ್ಕ, ಬಿಇಓ ಕಚೇರಿಯ ಶ್ರೀಧರ ನಾಯ್ಕ, ಶಿಕ್ಷಕರ ಸಂಘದ ಸುಧೀಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

error: