March 21, 2023

Bhavana Tv

Its Your Channel

ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ಹೊನ್ನಾವರ ತಾಲೂಕಾ ಆಡಳಿತದಿಂದ ಆಯೋಜಿಸಿರುವ ಮಡಿವಾಳ ಕುಲ ಗುರು ಮಡಿವಾಳ ಮಾಚಿದೇವರ ಜಯಂತಿ ತಹಸೀಲ್ದಾರ್ ಕಚೇರಿಯಲ್ಲಿ ನಡೆಯಿತು. ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಾ ದಂಡಾಧಿಕಾರಿಗಳಾದ ಶ್ರೀ ನಾಗರಾಜ್ ನಾಯ್ಕಡ್ ಅಧ್ಯಕ್ಷತೆ ವಹಿಸಿ ಮಾಚಿದೇವರ ವಚನ ಸಾಹಿತ್ಯ ಕೇವಲ ಮಡಿವಾಳ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ ಎಲ್ಲ ಸಮಾಜಕ್ಕೂ ಪ್ರೇರಣೆಯಾಗಿರುವದಾಗಿ, ಸಮಾಜಕ್ಕೆ ಪರಿಶಿಷ್ಟ ಜಾತಿಯ ಅವಶ್ಯಕತೆ ಇದೆ ಎಂದು ಹೇಳಿ ಮಾಚಿದೇವ ಜಯಂತಿಗೆ ಶುಭ ಹಾರೈಸಿದರು. ಉಪನ್ಯಾಸಕರಾಗಿ ಆಗಮಿಸಿದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಡಿ ಡಿ ಮಡಿವಾಳ ಮಾಚಿದೇವರ ಜೀವನ ಚರಿತ್ರೆ, ಅವರು ಬರೆದ ವಚನ ಸಾಹಿತ್ಯದ ಕುರಿತು ತಿಳಿಸಿ, ರಾಜ್ಯದಲ್ಲಿ ಮಡಿವಾಳ ಸಮಾಜದವರು ಅಂದಾಜು 14 ಲಕ್ಷ ಜನಸಂಖ್ಯೆ ಇದ್ದರೂ ವಿಧಾನಸೌಧದಲ್ಲಿ ಸಮುದಾಯವನ್ನು ಪ್ರತಿನಿದಿಸುವ ಒಬ್ಬ ಶಾಸಕರೂ ಇಲ್ಲದಿರುವದು ವಿಪರ್ಯಾಸ, ಮಡಿವಾಳ ಸಮಾಜ ಅತೀ ಹಿಂದುಳಿರುವದನ್ನು ಒಪ್ಪಿ ವಿವಿಧ ರಾಜಕೀಯ ಪಕ್ಷಗಳು 2ಎ ಪ್ರವರ್ಗದಿಂದ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವ ಭರವಸೆ ನೀಡಿದರೂ ಇನ್ನೂ ಭರವಸೆಯಾಗೆ ಉಳಿದಿದೆ ಎಂದು ತಿಳಿಸಿದರು. ತಾಲೂಕಾ ಮಡಿವಾಳ ಸಂಘದ ಅಧ್ಯಕ್ಷರಾದ ನಾಗೇಶ ಮಡಿವಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ, ತಾಲೂಕಾ ಪಂಚಾಯತ್, ಪಟ್ಟಣ ಪಂಚಾಯತ್, ಸಮಾಜ ಕಲ್ಯಾಣ, ಪಿ ಡಬ್ಲು ಡಿ, ಕಂದಾಯ ಇಲಾಖೆ ಅಧಿಕಾರಿಗಳು, ಮಡಿವಾಳ ಸಂಘದ ಅನಿಲ ಮಡಿವಾಳ, ಉಮೇಶ ಮಡಿವಾಳ, ಶಿವಾನಂದ್ ಹೊನ್ನಾವರ, ವಿನಾಯಕ್ ಮಡಿವಾಳ, ವಿಠ್ಠಲ ಮಡಿವಾಳ, ಮುಕ್ತಾ ಮಡಿವಾಳ, ಸಮಾಜ ಬಾಂದವರು ಇದ್ದರು, ಸುದೇಶ್ ನಾಯ್ಕ್ ನಿರ್ವಹಿಸಿದರು.

About Post Author

error: