March 21, 2023

Bhavana Tv

Its Your Channel

ಫೆಬ್ರವರಿ 3 ಕ್ಕೆ ಶ್ರೀ ವೆಂಕಟ್ರಮಣ ದೇವಾಲಯ ಬಾಳೆಗದ್ದೆ ದೇವರ ವಾರ್ಷಿಕ ವರ್ಧಂತಿ ಉತ್ಸವ

ಹೊನ್ನಾವರ ತಾಲೂಕಿನ ಶ್ರೀ ವೆಂಕಟ್ರಮಣ ದೇವಾಲಯ ಬಾಳೆಗದ್ದೆ ದೇವರ ವಾರ್ಷಿಕ ವರ್ಧಂತಿ ಉತ್ಸವ ಫೆಬ್ರವರಿ 3 ರಂದು ಶ್ರೀ ಕ್ಷೇತ್ರ ಮಂಜುಗುಣಿಯ ವೇ.ಪುಟ್ಟ ಭಟ್ಟ ಹಾಗೂ ಅಣ್ಣಯ್ಯ ಭಟ್ಟ ಧಾರ್ಮಿಕ ಆರ್ಚಾಯತ್ವದಲ್ಲಿ ನಡೆಯಲಿದೆ. ಫೆಬ್ರವರಿ 2 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊAಡು ರಾತ್ರಿ 8:30ರವರೆಗೆ ನಡೆಯಲಿದೆ. ಫೆಬ್ರವರಿ 3 ರಂದು 1008 ಬ್ರಹ್ಮಕಲಾಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಪಲ್ಲಕ್ಕಿ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ನೃತ್ಯಸ್ವರ ಕಲಾ ಟ್ರಸ್ಟ್ ಕವಲಕ್ಕಿ ಇವರಿಂದ ಭರತನಾಟ್ಯ, ನೃತ್ಯರೂಪಕ ನಾಡಿನ ಪ್ರಸಿದ್ದ ಕಲಾವಿದರಿಂದ ನಾಟಕ “ಕಣ್ಣಾಮುಚ್ಚಾಲೆ” ನಾಟಕ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Post Author

error: