April 19, 2024

Bhavana Tv

Its Your Channel

ಸಾಲ್ಕೋಡ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ

ಹೊನ್ನಾವರ: ಈ ಹಿಂದೆ ಭಾರತ ತುಂಡು ಮಾಡಿದವರು ಇಂದು ಭಾರತ ಜೋಡಿಸುತ್ತೇವೆ ಎಂದು ಹೊರಟಿದ್ದಾರೆ ಎಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಕುರಿತು ಜಿಲ್ಲಾ ಉಸ್ತುವಾರಿ ಸಚೀವರಾದ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.

ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾ.ಪಂ. ವ್ಯಾಪ್ತಿಯ ಅಠಾರ ಪ್ರಾಥಮಿಕ ಶಾಲಾ ಆವರಣದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜಮ್ಮು ಕಾಶ್ಮೀರದಲ್ಲಿ 370 ರದ್ದುಗೊಳಿಸಿ ಅಲ್ಲಿಯ ಸರ್ಕಾರಿ ಕಛೇರಿಯಲ್ಲಿ ಪ್ರತಿನಿತ್ಯ ಧ್ವಜಾರೋಹನ ನಡೆಯುವ ಮೂಲಕ ಭಾರತ ದೇಶದ ಒಂದು ಭಾಗವಾಗಿ ಪ್ರಧಾನಿ ಮೋದಿ ನೇತ್ರತ್ವದಲ್ಲಿ ಜಾರಿಯಾಗಿರುವುದು ಇಡೀ ದೇಶವೇ ಹೆಮ್ಮೆಪಡುತ್ತಿದೆ. ಜಗತ್ತಿನ ವಿವಿಧ ದೇಶಗಳ ಆರ್ಥಿಕ ಸ್ಥಿತಿ ಕುಸಿತ ಕಂಡರೂ ಭಾರತದ ಆರ್ಥಿಕ ವ್ಯವಸ್ಥೆ ಸದೃಡವಾಗಲು ಮೋದಿ ನೇತ್ರತ್ವದ ಕೇಂದ್ರ ಸರ್ಕಾರದ ದೃಡನಿರ್ಧಾರ ಕಾರಣವಾಗಿದೆ. ಕೃಷಿಸಮ್ಮಾನ ಯೋಜನೆಯ ಮೂಲಕ ಕೃಷಿ ಭೂಮಿ ಹೊಂದಿರುವ ಪ್ರತಿ ಕುಟುಂಬಕ್ಕೂ ಕೇಂದ್ರ ರಾಜ್ಯ ಸರ್ಕಾರ ಒಟ್ಟಾಗಿ ಪ್ರತಿ ವರ್ಷ ಹತ್ತು ಸಾವಿರ ಆರ್ಥಿಕ ಸಹಾಯಧನ ನೀಡುವ ಮೂಲಕ ನೆರವಾಗುತ್ತಿದೆ. ಇಂತಹ ಹಲವು ಜನಪರ ಕಾರ್ಯಕ್ರಮದ ಮಾಹಿತಿ ಜನಸಾಮನ್ಯರಿಗೆ ನೀಡಲು ಪಕ್ಷದ ಕಾರ್ಯಕರ್ತರು ಮುಂದಾಗಬೇಕಿದೆ. ಪ್ರಧಾನಿ ಮೋದಿಯವರು ಈ ದೇಶಕ್ಕೆ ಅನಿವಾರ್ಯ ಎಂದು ವಿರೋಧಿಗಳೂ ಹೇಳುವ ರೀತಿ ಭಾರತ ಬದಲಾಗುತ್ತಿದೆ. ಬದಲಾದ ಜಗತ್ತಿಗೂ ಭಾರತ ನಾಯಕತ್ವ ಕೊಡಲಿದೆ ಎಂದರು.
ದೇಶದ ಗಡಿಭಾಗಗಳು ವಿರೋಧಿ ದೇಶದಿಂದ ಸದೃಡವಾಗುತ್ತಿದೆ. ಈ ಹಿಂದಿನ ಅವಧಿಯಲ್ಲಿ ತುಂಡುತುAಡಾಗಿತ್ತು. ಈಗ ಭಾರತ ಜೋಡಣೆಯಾಗಿದೆ. ಮತ್ತೆ ಜೋಡಿಸುತ್ತೇವೆ ಎಂದು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಹಿಂದು ಎನ್ನುತ್ತಾರೆ. ಆದರೆ ಮತಾಂತರ ನಿಷೇಧ, ಗೊಹತ್ಯೆ ನಿಷೇದ ಕಾನುನನ್ನು ವಿರೋದಿಸುತ್ತಾರೆ. ಇವರ ಹಿಂದುತ್ವದ ಕಲ್ಪನೆಯೆ ಅರ್ತವಾಗುವುದಿಲ್ಲ. ಮಂಗಳೂರಿನಲ್ಲಿ ಕುಕ್ಕರನಲ್ಲಿ ಬಾಬ್ ಸ್ಪೋಟವಾಗಿದೆ. ಕುಕ್ಕರನಲ್ಲಿ ಚಿತ್ರಾನ್ನ ಅಥವಾ ಮೊಸರು ತೆಗೆದುಕೊಂಡು ಹೋಗಿಲ್ಲ. ಬಾಂಬ್ ಸ್ಪೋಟ ಸಂಭವಿಸಿದರು ಘಟನೆಯನ್ನು ಖಂಡಿಸುದಿಲ್ಲ. ಈ ಬಾರಿ ಭಯೋತ್ಪಾದಕರನ್ನು ಬೆಂಬಲಿಸುವವರು ಹಾಗೂ ವಿರೋಧಿಸುವವರ ನಡುವೆ ಚುನಾವಣೆ ನಡೆಯಲಿದೆ ಎಂದರು
ಶಾಸಕ ದಿನಕರ ಶೆಟ್ಟಿ ಮಾತನಾಡಿ ಕೇಂದ್ರ ಹಾಗೂ ರಾಜ್ಯಸರ್ಕಾರ ಹಲವು ಜನಪರ ಯೋಜನೆ ಜಾರಿಗೊಳಿಸಿದೆ. ಸಾಲ್ಕೋಡ್ ಗ್ರಾ.ಪಂ. ವ್ಯಾಪ್ತಿಯಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ರಸ್ತೆ ಸೇತುವೆ ಕಾಮಗಾರಿ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಇದನ್ನು ಕಾರ್ಯಕರ್ತರು ಜನತೆಗೆ ಮನವರಿಕೆ ಮಾಡಿಕೊಡಬೇಕಿದೆ. ಈ ಗ್ರಾಮದಲ್ಲಿ ಕೃಷಿಸಮ್ಮಾನ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರದಿಂದ 7 ಕೋಟಿ 50 ಲಕ್ಷಹಣ ನೇರವಾಗಿ ಫಲಾನುಭವಿ ಖಾತೆಗೆ ಜಮಾ ಆಗಿದೆ. ಒಂದಲ್ಲ ಒಂದು ಯೋಜನೆಯ ಮೂಲಕ ನಾವೆಲ್ಲರೂ ಸರ್ಕಾರದ ಫಲಾನುಭವಿಗಳಾಗಿದ್ದೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ ಬೂತ ಗೆದ್ದರೆ ಕ್ಷೇತ್ರ ಗೆಲ್ಲಲಿದೆ. ಪ್ರತಿ ಬೂತನಲ್ಲಿಯೂ ಸಂಘಟನಾತ್ಮಕವಾಗಿ ತಮಗೆ ನೀಡಿದ ಜವಬ್ದಾರಿ ನಿಭಾಯಿಸಬೇಕು. ಪ್ರತಿ ಮನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮತ್ತು ಶಾಸಕರ ಸಾಧನೆಯ ಕರಪತ್ರ ನೀಡಬೇಕು. ಈ ಬಾರಿ ಹಳಿಯಾಳ ಸೇರಿದಂತೆ ಜಿಲ್ಲೆಯ ಆರುಕ್ಷೇತ್ರವನ್ನು ಬಿಜೆಪಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಲಿದೆ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ವಿಷ್ಙುಮೂರ್ತಿ ದೇವಸ್ಥಾನದ ವರ್ಧಂತಿ ಉತ್ಸವದ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಡಳಿತ ಮಂಡಳಿಯಿAದ ಸನ್ಮಾನ ಸ್ವೀಕರಿಸಿದರು.
ವೇದಿಕೆಯಲ್ಲಿ ವಿಭಾಗದ ಸಹ ಪ್ರಭಾರಿ ಎನ್.ಎಸ್.ಹೆಗಡೆ ಕರ್ಕಿ, ಮಂಡಲಧ್ಯಕ್ಷ ರಾಜೇಶ ಭಂಡಾರಿ, ಪಕ್ಷದ ಮುಖಂಡರಾದ ಮಂಜುನಾಥ ನಾಯ್ಕ, ಸುರೇಶ ಹರಿಕಂತ್ರ, ಶ್ರೀಕಾಂತ ನಾಯ್ಕ, ಅಶ್ವಿನಿ ನಾಯ್ಕ, ಗ್ರಾ.ಪಂ ಅಧ್ಯಕ್ಷೆ ರಜನಿ ನಾಯ್ಕ, ಎನ್.ಎಸ್.ಹೆಗಡೆ, ಗಣಪತಿ ನಾಯ್ಕ, ಮಂಜುನಾಥ ನಾಯ್ಕ, ಎಚ್,ಆರ್.ಗಣೇಶ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

error: