April 20, 2024

Bhavana Tv

Its Your Channel

ಫೆ.14 ಕ್ಕೆ ಹೊನ್ನಾವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ 10ನೇ ಸಾಹಿತ್ಯ ಸಮ್ಮೇಳನ

ಹೊನ್ನಾವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ 10ನೇ ಸಾಹಿತ್ಯ ಸಮ್ಮೇಳನ ಫೆ.14ರಂದು ಕೆಳಗಿನೂರಿನ ಒಕ್ಕಲಿಗ ಸಭಾಭವನದಲ್ಲಿ ಹಿರಿಯ ಸಾಹಿತಿ ಡಾ.ಎಸ್.ಡಿ.ಹೆಗಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಸಾಪ ತಾಲೂಕ ಅಧ್ಯಕ್ಷ ಎಸ್.ಎಚ್.ಗೌಡ ಮಾಹಿತಿ ನೀಡಿದರು.

   ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೊಷ್ಟಿ ಉದ್ದೇಶಿಸಿ ಮಾತನಾಡಿ ತಹಶೀಲ್ದಾರ ನಾಗರಾಜ ನಾಯ್ಕಡ್ ರಾಷ್ಟ್ರಧ್ವಜಾರೋಹಣ, ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆ ಪರಿಷತ್ತಿನ ಧ್ವಜಾರೋಹಣ ತಾಲೂಕ ಅಧ್ಯಕ್ಷ ಎಸ್.ಎಚ್.ಗೌಡ ನಾಡಧ್ವಜಾರೋಹಣ ನೇರವೇರಿಸುವರು. ಗುಣವಂತೆಯಿAದ ಸಭಾಭವನದವರೆಗೆ ಸಮ್ಮೇಳನದ ಅಧ್ಯಕ್ಷರನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಿದ್ದು ಕಾರ್ಯಕ್ರಮವನ್ನು ಗ್ರಾ.ಪಂ. ಸದಸ್ಯ ಶಿವಾನಂದ ಗೌಡ ಚಾಲನೆ ನೀಡಲಿದ್ದಾರೆ. ಸಮ್ಮೇಳನದ ಉದ್ಘಾಟನೆ ದಿ. ಶಂಭು ಹೆಗಡೆ ವೇದಿಕೆಯಲ್ಲಿ ನಡೆಯಲಿದ್ದು ಹಿರಿಯ ಪತ್ರಕರ್ತರಾದ ಶಶಿಧರ ಭಟ್ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಹಿರಿಯ ಸಾಹಿತಿಗಳಾದ ಡಾ.ಎಸ್.ಡಿ.ಹೆಗಡೆ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಶಾಸಕ ಸುನೀಲ ನಾಯ್ಕ ಪುಸ್ತಕ ಬಿಡುಗಡೆ ಮಾಡಲಿದ್ದು, ಮಳಿಗೆಯನ್ನು ಶಾಶಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದಾರೆ. ದಿ. ಕೃಷ್ಣ ಭಂಡಾರಿ, ದಿ.ಹನುಮಿ ಗೌಡ ನೆನಪಿನ ದ್ವಾರಗಳನ್ನು ಗ್ರಾ.ಪಂ. ಅಧ್ಯಕ್ಷ ಗಂಗಾಧರ ಗೌಡ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನು ಆಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಶ್ರೀಪಾದ ಹೆಗಡೆ ಧ್ವಜ ಹಸ್ತಾಂತರ ನೇರವೇರಿಸುವರು. ವೇದಿಕೆಯಲ್ಲಿ ಪ.ಪಂ. ಅಧ್ಯಕ್ಷೆ ಭಾಗ್ಯಶ್ರೀ ಮೇಸ್ತ, ಇ.ಓ ಸುರೇಶನಾಯ್ಕ, ಬಿ.ಇ.ಓ ಜಿ.ಎಸ್.ನಾಯ್ಕ, ಸೇಪಸ್ಟಾರ್ ಗ್ರೂಪ್ ಅಧ್ಯಕ್ಷ ಜಿ.ಜಿ.ಶಂಕರ, ನೌಕರರ ಸಂಘದ ಅಧ್ಯಕ್ಷ ಆರ್.ಟಿ.ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಗೌರವಧ್ಯಕ್ಷ ಸುಧೀಶ ನಾಯ್ಕ, ತಾಲೂಕ ಅಧ್ಯಕ್ಷ ಎಂ.ಜಿ.ನಾಯ್ಕ ಉಪಸ್ಥಿತರಿರುವರು. ಸಾಹಿತಿಗಳಾದ ಡಾ.ಎನ್.ಆರ್.ನಾಯಕ, ಸುಮುಖಾನಂದ ಜಲವಳ್ಳಿ, ಡಾ. ಶ್ರೀಪಾದ ಶೆಟ್ಟಿ, ಎನ್.ಎಸ್.ಹೆಗಡೆ, ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ಕಸಾಪ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳಾದ ಪಿ.ಆರ್.ನಾಯ್ಕ, ಜಾರ್ಜ ಫರ್ನಾಂಡಿಸ್, ಮುರ್ತುಜಾ ಹುಸೇನ್ ಗೌರವ ಉಪಸ್ಥಿತಿ ವಹಿಸುವರು. ಮಾದೇವಿ ಗೌಡ ಇವರ " ಮೌನ ಅರಳುವ ಮುನ್ನ" ಕಲ್ಪನಾ ಅರುಣ ಇವರ " ವಚನ ನುಡಿಕಲ್ಪ" ಎನ್ನುವ 2 ಪುಸ್ತಕ ಬಿಡುಗಡೆಗೊಳ್ಳಲಿದೆ.

ಕಾರ್ಯಕ್ರಮದ ಅಂಗವಾಗಿ ಮೂರು ಗೋಷ್ಠಿ ನಡೆಯಲಿದ್ದು ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಡಾ.ಜಿ.ಎಸ್.ಗೌಡ ಅಧ್ಯಕ್ಷತೆಯಲ್ಲಿ ನಡೆಯಲಿದೆ. “ಹೊನ್ನಾವರದ ಅಭಿವೃದ್ದಿಯ ಸಾಧ್ಯತೆ- ಸವಾಲುಗಳು ಎನ್ನುವ ವಿಷಯದ ಮೇಲೆ ಡಾ. ಸತೀಶ ನಾಯ್ಕ ಮಹಿಮೆ, “ಹೊನ್ನಾವರದ ಸಾಂಸ್ಕೃತಿಕ ಹೆಜ್ಜೆಗುರುತುಗಳು” ಎನ್ನುವ ವಿಷಯದ ಮೇಲೆ ನಾರಾಯಣ ಯಾಜಿ ಸಾಲೆಬೈಲು ಮಾತನಾಡಲಿದ್ದಾರೆ. ಎರಡನೇ ಗೊಷ್ಟಿಯಲ್ಲಿ ಕವಿ ಸಮಯ_ ಕಾವ್ಯ ವಾಚನ ನಡೆಯಲಿದ್ದು ಸಾಹಿತಿ ಡಾ.ಎಚ್.ಎಸ್. ಅನುಪಮ ಅಧ್ಯಕ್ಷತೆ ವಹಿಸುವರು. ಸಾಹಿತಿ ಪ್ರಭಾಕರ ಹೆಗಡೆ ಆಶಯದ ನುಡಿಯನ್ನಾಡುವರು. ತಾಲೂಕಿನ ಕವಿಗಳು ಇದೆ ವೇಳೆ ಕವನ ವಾಚಿಸುವರು. 3ನೇ ಗೋಷ್ಟಿಯಲ್ಲಿ ಸಮ್ಮೇಳನಧ್ಯಕ್ಷರ ಜೊತೆ ಸಂವಾದ ನಡೆಯಲಿದ್ದು, ಹಿರಿಯ ಪತ್ರಕರ್ತರಾದ ಟಿ.ಬಿ.ಹರಿಕಂತ್ರ ಆಶಯ ನುಡಿಯನ್ನು ಆಡುವರು. ವಿವಿಧ ಸಾಹಿತ್ಯಸಕ್ತರು ಸಂವಾದದಲ್ಲಿ ಪಾಲ್ಗೊಳ್ಳುವರು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ರೋಹಿದಾಸ ನಾಯಕ ಸಮಾರೋಪ ನುಡಿಯನ್ನು ಆಡಲಿದ್ದಾರೆ. ಅತಿಥಿಗಳಾಗಿ ಮಾಜಿ ಶಾಸಕ ಮಂಕಾಳ ವೈದ್ಯ, ಕೆಳಗಿನೂರು ಗ್ರಾ.ಪಂ. ಉಪಾಧ್ಯಕ್ಷೆ ನೀಲಾ ಗೌಡ, ಸಾಹಿತಿ ಶಾಂತಿ ನಾಯಕ, ಪುಟ್ಟು ಕುಲಕರ್ಣೆ, ಗಣಪಯ್ಯ ಗೌಡ ಮಾಜಿ ಜಿ.ಪಂ. ಸದಸ್ಯರಾದ ಕೃಷ್ಣ ಗೌಡ, ಪುಷ್ಪಾ ನಾಯ್ಕ, ವಿವಿಧ ಕ್ಷೇತ್ರದ ಗಣ್ಯರಾದ ಶಿವಾನಂದ ಹೆಗಡೆ, ಸತೀಶನಾಯ್ಕ, ಮಹೇಶ ಕಲ್ಯಾಣಪುರ, ವಾಸಂತಿ ಅಮಿನ್ ಪಾಲ್ಗೊಳ್ಳಲಿದ್ದಾರೆ. ವಿವಿಧ ರಂಗದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೊಷ್ಟಿಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ತಾಲೂಕ ಕಾರ್ಯದರ್ಶಿ ಎಚ್.ಎಂ. ಮಾರುತಿ ಗಜಾನನ ನಾಯ್ಕ, ಜರ್ನಾದನ ಕಾಣಕೋನಕರ್, ಈಶ್ವರ ಗೌಡ, ಮಹೇಶ ಭಂಡಾರಿ ಉಪಸ್ಥಿತರಿದ್ದರು.

error: