
ಹೊನ್ನಾವರ: ಎಂ. ಪಿ. ಇ. ಸೊಸೈಟಿಯ ಎಸ್. ಡಿ. ಎಮ್. ಪದವಿ ಕಾಲೇಜು, ಹೊನ್ನಾವರ ಕಾಲೇಜಿನ ಚಾಣಕ್ಯ ಅರ್ಥಶಾಸ್ತç ವೇದಿಕೆ ಆಶ್ರಯದಲ್ಲಿ “ಬಜೆಟ್ ವಿಶ್ಲೇಷಣೆ- 2023” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಶ್ರೀ ಚಂದ್ರಶೇಖರ ಕಾಳೆ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮದರ್ಜೆಕಾಲೇಜು, ಕುಮಟಾಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮುಂಗಡ ಪತ್ರದ ಹಿನ್ನೆಲೆ, ಅದರ ಪ್ರಾಮುಖ್ಯತೆ ಹಾಗೂ 2023ರ ಕೇಂದ್ರ ಸರ್ಕಾರದ ಮುಂಗಡ ಪತ್ರದ ಮುಖ್ಯಾಂಶಗಳನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ವಿಶ್ಲೇಷಿಸಿದರು. ಬಿ.ಎ. ಮತ್ತು ಬಿ.ಕಾಂ.ನ ಅರ್ಥಶಾಸ್ತçದ ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯಡಾ. ವಿಜಯಲಕ್ಷಿö್ಮ ಎಂ. ನಾಯ್ಕಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅರ್ಥಶಾಸ್ತç ವಿಭಾಗವು ಸಂಘಟಿಸಿದ ಇಂತಹಅಮೂಲ್ಯ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ವೇದಿಕೆ ಸಂಚಾಲಕ ಹಾಗೂ ವಿಭಾಗದ ಮುಖ್ಯಸ್ಥರಾದಡಾ.ಡಿ. ಎಲ್. ಹೆಬ್ಬಾರ ಮುಖ್ಯ ಅತಿಥಿಗಳನ್ನು ಪರಿಚಯಿಸಿ ಸರ್ವರನ್ನು ಸ್ವಾಗತಿಸಿದರು. ಕು.ನಿಹಾರಿಕಾ ಭಟ್ ಪ್ರಾರ್ಥಿಸಿದರು, ಲಾವಣ್ಯ ಹೆಗಡೆ ನಿರೂಪಿಸಿದರು, ಪ್ರೊ.ರೋಹಿತ್ ಡಿಸಿಲ್ವಾ ಸರ್ವರನ್ನು ವಂದಿಸಿದರು. ವೇದಿಕೆಯಲ್ಲಿಚಾಣಕ್ಯಅರ್ಥಶಾಸ್ತç ವೇದಿಕೆಯ ವಿದ್ಯಾರ್ಥಿ ಪ್ರತಿನಿಧಿಯಾದ ಕು.ಪಲ್ಲವಿ ಆಚಾರ್ಯ ಉಪಸ್ಥಿತರಿದ್ದರು.

More Stories
ಹೊನ್ನಾವರ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ
ವಿಜೃಂಭಣೆಯಿoದ ನಡೆದ ಹಿರೇಬೈಲ್ ಶ್ರೀ ಶಂಭುಲಿoಗೇಶ್ವರ ದೇವರ 50 ನೇ ವರ್ಧಂತಿ ಉತ್ಸವ
ಅಕ್ರಮ ಮರಳು ಅಡ್ಡೆಯ ಮೇಲೆ ಸಿಪಿಐ ಮಂಜುನಾಥ ಇ.ಓ ನೇತ್ರತ್ವದಲ್ಲಿ ದಾಳಿ