April 16, 2024

Bhavana Tv

Its Your Channel

ಕೆರೆಮನೆ ಶಂಭು ಹೆಗಡೆ ರಾಷ್ಟೀಯ ನಾಟ್ಯೋತ್ಸವ-13 ಎರಡನೇ ದಿವಸದ ಕಾರ್ಯಕ್ರಮ ವಿದ್ಯುಕ್ತವಾಗಿ ಉದ್ಘಾಟನೆ

ಹೊನ್ನಾವರ: ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವ-13 ಎರಡನೇ ದಿವಸದ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು

ಕೆರೆಮನೆಗಜಾನನ ಹೆಗಡೆ ಪ್ರಶಸ್ತಿ-2021 ಅನ್ನು ಶ್ರೀಯುತ ತಿಮ್ಮಪ್ಪ ಹೆಗಡೆ, ಶಿರಳಗಿ ಅವರಿಗೆ ನೀಡಕಾಯಿತು, ತಿಮ್ಮಪ್ಪ ಹೆಗಡೆ, ಶಿರಳಗಿ ಇವರು ಶ್ರೀ ಗಜಾನನ ಹೆಗಡೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಾ ಕೆರೆಮನೆ ಮೇಳದಿಂದ ಪದೆದ ಅನುಭವವನ್ನು ಬಹಳ ಪ್ರೀತಿಯಿಂದ ಸ್ಮರಿಸಿದರು. ಕೆರೆಮನೆಕುಟುಂಬದ ಹಿರಿಯ ಶ್ರೇಷ್ಠತಮಕಲಾವಿದರ ಕಲಾಸೇವೆಯೇ ನನ್ನನ್ನು ಮತ್ತಷ್ಟು ಪ್ರೇರೆಪಿಸಿದೆ. ಈ ಮೇಳದ ಬದ್ಧತೆಜೊತೆಗೆ ಮಾಡಿದ ಪಾತ್ರಗಳ ಅನುಭವ, ಈ ಮೇಳದೊಡನೆ ಇರುವ ಅವಿನಾಭಾವ ಸಂಬAಧ ಈ ಪ್ರಶಸ್ತಿ ಪಡೆಯಲುಅರ್ಹತೆ ಸಿಕ್ಕಿದೆ ಎನ್ನುವುದು ನನ್ನ ಭಾವವಾಗಿದೆಎಂದರು.
ಎಮ್.ಕೆ. ಭಾಸ್ಕರರಾವ ಅವರು ಮಾತನ್ನಾಡುತ್ತಾ ಶಿರಳಗಿ ತಿಮ್ಮಪ್ಪ ಹೆಗಡೆಯವರು ಪಾತ್ರನಿರ್ವಹಿಸಿದ ಸುಭದ್ರಾ ಕಲ್ಯಾಣದ ಘಟನೆಯನ್ನು ನೆನಪಿಸುವುದರ ಮೂಲಕ ಕಲಾಪ್ರೌಢಿಮೆಯನ್ನು ನೆನೆಸಿಕೊಂಡರು.
ನಾಟ್ಯೋತ್ಸವ ಸಂಮಾನವನ್ನು ಕಡತೋಕ ಗೋಪಾಲಕೃಷ್ಣ ಭಾಗವತ, ಜೆ. ಶ್ರೀನಿವಾಸಮೂರ್ತಿ ಮತ್ತು ಅಶೋಕ್ ಭಟ್ ಉಜಿರೆ ಇವರಿಗೆ ನೀಡಿ ಗೌರವಿಸಲಾಯಿತು. ಸಂಮಾನ ಸ್ವೀಕರಿಸಿ ಮಾತನಾಡಿದ ಗೋಪಾಲಕೃಷ್ಣ ಭಾಗವತರು ನಾನು ನಡೆಸುತ್ತಿರುವ ಯಕ್ಷರಂಗ ಪತ್ರಿಕೆಯ ಬರವಣಿಗೆ ಶಂಭು ಹೆಗಡೆಯವರಿಂದ ಪ್ರಭಾವವಾಗಿದೆ. ಈ ಮೇಳದ ಮೂರುತಲೆಮಾರಿನ ಹಿರಿಯಕಲಾವಿದರ ಶ್ರೇಷ್ಠ ಚಿಂತನೆಗಳನ್ನು ಪ್ರಕಟಿಸುವುದರ ಮೂಲಕ ಬದ್ಧತೆಯ ಕೆಲಸವನ್ನು ಮಾಡಿದ್ದೇನೆಎಂದರು ಜೆ. ಶ್ರೀನಿವಾಸಮೂರ್ತಿ ಮತ್ತು ಅಶೋಕ್ ಭಟ್,ಉಜಿರೆ ಇವರುಕೂಡ ಸಂಮಾನದ ತೃಪ್ತಿಯನ್ನು ಮಾತಿನ ಮೂಲಕ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಬುಕ್ ಬ್ರಹ್ಮ ಪತ್ರಿಕೆಯ ಸಂಪಾದಕರಾದ ದೇವು ಪತ್ತಾರ್, ಪಹರೆ ವೇದಿಕೆಯಅಧ್ಯಕ್ಷರಾದ ನಾಗರಾಜ ನಾಯಕ, ಗ್ರಾಮ ಪಂಚಾಯತ ಅಧ್ಯಕ್ಷರಾದ ಗಂಗಾಧರಗೌಡ ಮಾತನಾಡಿದರು. ಹಿರಿಯ ಸಾಹಿತಿ ಮತ್ತು ಯಕ್ಷಗಾನ ಚಿಂತಕರಾದ ಜಿ.ಎಸ್. ಭಟ್‌ಅವರು ಅಧ್ಯಕ್ಷೀಯ ಭಾಷಣ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಯಕ್ಷಗಾನದ ಬದ್ಧತೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಯಕ್ಷಗಾನದ ಶ್ರೇಯೋಭಿವೃದ್ಧಿಗೆ ಆಗಬೇಕಾದ ಚಿಂತನೆಯನ್ನು ಅವಲೋಕಿಸಿದರು. ಸರಿತಾ ಮಿಶ್ರ ಮತ್ತು ತಂಡದವರಿoದ ಮನಮೋಹಕವಾಗಿ ಓಡಿಸ್ಸಿ ನೃತ್ಯಜನಮನ ಸೂರೆಗೊಂಡಿತು. ಆನೂರು ಅನಂತ ಕೃಷ್ಣ ಶರ್ಮಾ ಬೆಂಗಳೂರು ಇವರತಂಡದಿAದ ಲಯ-ಲಾವಣ್ಯ ಎಂಬ ಸೃಜನಶೀಲ ಪರಿಕಲ್ಪನೆಂಯು ಪ್ರಸ್ತುತಿಗೊಂಡಿತು.

error: