
ಹೊನ್ನಾವರ ತಾಲೂಕಿನ ಹಿರೇಬೈಲ್ ಶ್ರೀ ಶಂಭುಲಿAಗೇಶ್ವರ ದೇವರ 50 ನೇ ವರ್ಧಂತಿ ಉತ್ಸವವು, ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನದೊಂದಿಗೆ ವಿಜೃಂಭಣೆಯಿAದ ನೆರವೇರಿತು.
ಹಿರೇಬೈಲ್ ಗ್ರಾಮದ ಆರಾಧ್ಯ ದೇವರಾದ ಶ್ರೀ ಶಂಭುಲಿAಗೇಶ್ವರ, ಶ್ರೀ ಮಹಾಗಣಪತಿ ಹಾಗೂ ಅಮ್ಮನವರ ಸಹಿತ 50 ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವವು, ವೈದಿಕರಾದ ಕಟ್ಟೆ ಶಂಕರ ಭಟ್ಟರ ಆಚಾರ್ಯತ್ವದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು. ರುದ್ರ ಹೋಮ, ಶಾಂತಿ ಹೋಮ, ಸಾಮೂಹಿಕ ಸತ್ಯನಾರಾಯಣ ಕಥೆ, ನೂತನ ಶಿಲಾ ಧ್ವಜಕ್ಕೆ ಕ್ಷೀರಾಭಿಷೇಕ, ಮಹಾಮಜ್ಜನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ತದನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಅತಿಥಿ ಕಲಾವಿದರು ಹಾಗೂ ಊರಿನ ಪ್ರಮುಖ ಕಲಾವಿದರ ಕೂಡುವಿಕೆಯಲ್ಲಿ “ವಾಲಿ ವಿಜಯ” ಎಂಬ ಸುಂದರ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು. ವಾಲಿಯಾಗಿ ಜನಾರ್ಧನ್ ನಾಯ್ಕ್ ಹಿರೇಬೈಲ್, ಸುಗ್ರೀವನಾಗಿ ನಾಗೇಶ್ ಗೌಡ ಕುಳಿಮನೆ, ತಾರೆಯಾಗಿ ವಸಂತ ನಾಯ್ಕ್ ಚಿಕ್ಕೊಳ್ಳಿ, ಗಂಧರ್ವನಾಗಿ ಈಶ್ವರ ನಾಯ್ಕ್ ಹಿರೇಬೈಲ್ ಪ್ರಮುಖ ವೇಷದಲ್ಲಿ ಕಾಣಿಸಿಕೊಂಡರು. ಇನ್ನು ಪುಟಾಣಿ ಮಕ್ಕಳು ಸಹಿತ ಹಿರಿಯವರ ಜೊತೆ ಸೇರಿ ಊರ ಆಟದಲ್ಲಿ ಉತ್ಸಾಹದಿಂದ ವೇಷ ಮಾಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಸಾಕ್ಷಿಯಾದರು.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಊರಿನ ಹಾಗೂ ಪರ ಊರಿನ ಭಕ್ತರು, ಕಲಾಭಿಮಾನಿಗಳು ಶೃದ್ದೆಯಿಂದ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.
ವರದಿ: ನರಸಿಂಹ ನಾಯ್ಕ್ ಹರಡಸೆ

More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ