June 8, 2023

Bhavana Tv

Its Your Channel

ಹೊನ್ನಾವರ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

ಹೊನ್ನಾವರ : ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆರಿದರೇ, ಪ್ರತಿ ತಿಂಗಳು ಕುಟುಂಬದ ಯಜಮಾನಿಗೆ ರೂಪಾಯಿ 2,000, ಪ್ರತಿಕುಟುಂಬಕ್ಕೆ ಉಚಿತ ವಿದ್ಯುತ್ ಮತ್ತು ಪ್ರತಿಯೊಬ್ಬರಿಗೂ 10ಕೆ.ಜಿ. ಅಕ್ಕಿ ಪೂರೈಸುವ ಯೋಜನೆ ಜಾರಿಯಲ್ಲಿ ತರುವ ಕುರಿತಂತೆ ಕಾಂಗ್ರೆಸ್ ಪಕ್ಷ ಪ್ರತಿ ಮನೆಮನೆಗೆ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದೆ.

ಹೊನ್ನಾವರ ಬ್ಲಾಕ್‌ಕಾಂಗ್ರೆಸ್ ವ್ಯಾಪ್ತಿಯ ಗ್ರಾಮೀಣ ಭಾಗದ ಪ್ರತಿ ಮತಗಟ್ಟೆಯಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ, ಗ್ಯಾರಂಟಿಕಾರ್ಡ್ ವಿತರಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಸಾರ್ವಜನಿಕರು ಮತ್ತು ಸಮಾಜದ ಎಲ್ಲಾ ವರ್ಗದ ಜನರು ಉತ್ತಮರೀತಿಯಲ್ಲಿ ಸಹಕರಿಸಿ, ಬೆಂಬಲಿಸುತ್ತಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ತಿಳಿಸಿದ್ದಾರೆ.
ಅವರು ರವಿವಾರ ಹೊನ್ನಾವರ ತಾಲೂಕಿನ ನವಿಲಗೋಣ ಗ್ರಾಮ ಪಂಚಾಯತ್ ವ್ಯಾಪ್ಟಿಯ 178 ಮತಗಟ್ಟೆಯ ಕಲ್ಲಟ್ಟಿ ಕೇರಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊAದಿಗೆ ಪ್ರತಿ ಮನೆಮನೆಗೆ ತೆರಳಿ ಗ್ಯಾರಂಟಿಕಾರ್ಡ ವಿತರಿಸಿ ಮಾತನಾಡುತ್ತಿದ್ದರು.
ಗ್ಯಾರಂಟಿಕಾರ್ಡ ವಿತರಿಸುವ ಸಂದರ್ಭದಲ್ಲಿ ನವಿಲಗೋಣ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಂ.ಡಿ.ನಾಯ್ಕ, ಪಂಚಾಯತ್ ಸದಸ್ಯರಾದ ಮಾದೇವಿ ನಾಯ್ಕ, ಲಕ್ಷಿö್ಮÃ ನವಿಲಗೋಣ, ಬೇಬಿ ಮುಕ್ರಿ, ನ್ಯಾಯವಾದಿ ಉದಯ ನಾಯ್ಕ, ನವಿಲಗೋಣ ಕಾಂಗ್ರೆಸ್ ಘಟಕದ ಅಧ್ಯಕ್ಷ ರವಿ ಪಟಗಾರ, ನ್ಯಾಯವಾದಿ ವಿನಾಯಕ ನಾಯ್ಕ, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಹೊನ್ನಾವರ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಜಿಲ್ಲಾಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ರಮೇಶ ಶೆಟ್ಟಿ, ಕಾರ್ಯದರ್ಶಿ ಮಾರುತಿ ನಾಯ್ಕ, ರಾಜೇಶ ಶೆಟ್ಟಿ, ಸುರೇಶ ನವಿಲಗೋಣ ಇನ್ನೂ ಹಲವು ಪ್ರಮುಖರು ಪಾಲ್ಗೊಂಡಿದ್ದರು.

About Post Author

error: