September 16, 2024

Bhavana Tv

Its Your Channel

ದಾಮೋದರ ನಾಯ್ಕ ಮಾಲಿಕತ್ವದ ರಂಗಭೂಮಿಕಾ ಅಲಂಕಾರ ಸಾಮಗ್ರಿಗೆ ಬೆಂಕಿ, 15 ಲಕ್ಷ ರೂ. ಹಾನಿ.

ಹೊನ್ನಾವರ ತಾಲೂಜಿನ ಕಡ್ಲೆ ಗ್ರಾಮದಲ್ಲಿರುವ ದಾಮೋದರ ನಾಯ್ಕ ಮಾಲಿಕತ್ವದ ರಂಗಭೂಮಿಕಾ ಅಲಂಕಾರ ಸಾಮಗ್ರಿಗೆ ಬೆಂಕಿ 15 ಲಕ್ಷ ರೂ. ಹಾನಿ.

ಹೆಸರಾಂತ ರಂಗನಟ, ವರ್ಣಾಲಂಕಾರ ಪ್ರವೀಣರಾದ ದಾಮೋದರ ನಾಯ್ಕ ದಾಮು ಎಂದೆ ಪ್ರಖ್ಯಾತರಾದ ಇವರ ಹೊನ್ನಾವರ ತಾಲೂಕಿನ ಕಡ್ಲೆಯಲ್ಲಿರುವ  ರಂಗಭೂಮಿಕಾ ಅಲಂಕಾರ ಸಾಮಗ್ರಿಗಳಿಗೆ ಆಕಸ್ಮಾತ್ ಬೆಂಕಿ ತಗುಲಿ 15ಲಕ್ಷ ರೂಪಾಯಿ ಅಂದಾಜಿನ ಸಾಮಗ್ರಿಗಳು ಪೂರ್ತಿ ಸುಟ್ಟು ಹೋಗಿದ್ದು ಇನ್ನಷ್ಟು ಸಾಮಗ್ರಿ ಅರ್ಧಮರ್ದ ಸುಟ್ಟು ಕೆಲಸಕ್ಕೆ ಬಾರದಂತಾಗಿದೆ.

ಜಿಲ್ಲೆಯಲ್ಲಿ ಮಾತ್ರವಲ್ಲ ಹಂಪೆ ಉತ್ಸವ ಮೊದಲಾದ ಕಡೆ ಸಭಾವೇದಿಕೆ ಮತ್ತು ಸಭಾಗೃಹದ ಅಲಂಕಾರಕ್ಕೆ ಪೈಬರ್‌ನಿಂದ ತಯಾರಿಸಿದ ಅರಮನೆ, ಕಂಬಗಳು, ಆನೆ, ಮೊದಲಾದವುಗಳನ್ನು ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ಬಳಸಿ ಸುಂದರ ವೇದಿಕೆ ಸಿದ್ಧಪಡಿಸುತ್ತಿದ್ದ ದಾಮೋದರ ನಾಯ್ಕ 10-15ಜನರಿಗೆ ಕೆಲಸ ಕೊಟ್ಟಿದ್ದರು. ಆದಾಯ ತರುವ ಈ ಸೀಜನ್‌ನಲ್ಲಿ ತನ್ನ ದುಡಿಮೆಯ ಉಳಿತಾಯದ ಬಂಡವಾಳವೆಲ್ಲ ಬೆಂಕಿಗಾಹುತಿಯಾಯಿತು ಎಂದು ದಾಮೋದರ ನಾಯ್ಕ ನೊಂದುಕೊAಡಿದ್ದಾರೆ ಬೆಂಕಿ ಹೊತ್ತಿಕೊಂಡ ತಕ್ಷಣ ತರಗೆಲೆಯಂತೆ ವಸ್ತುಗಳು ಉರಿದು ಹೋದವು. ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದು ವಸ್ತುಗಳು ಕರಕಲಾಗಿದೆ,

error: