April 26, 2024

Bhavana Tv

Its Your Channel

ಎಂ.ಪಿ.ಇ.ಸೊಸೈಟಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ಮನಸೂರೆಗೊಂಡ ಚಿಣ್ಣರ ಕಲರವ ಕಾರ್ಯಕ್ರಮ

ಹೊನ್ನಾವರ ; ವಿಭಿನ್ನ, ವಿಶೇಷ, ವಿನೂತನ ಕಾರ್ಯಕ್ರಮಗಳ ಮೂಲಕ ಸದಾ ಸುದ್ದಿಯಲ್ಲಿರುವ
ಎಂ.ಪಿ.ಇ.ಸೊಸೈಟಿಯ ಸೆಂಟ್ರಲ್ ಸ್ಕೂಲ್ ಇದೀಗ ಚಿಣ್ಣರಕಲರವಅನ್ನುವ ವಿನೂತನಕಾರ್ಯಕ್ರಮ ನೆರೆದಿದ್ದಜನರ ಮನಸೂರೆಗೊಂಡಿತು.ಸೆ0ಟ್ರಲ್ ಸ್ಕೂಲ್‌ನ ಸಭಾಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿಚಿಣ್ಣರುಕುಣಿದು ಕುಪ್ಪಳಿಸಿದರು.ಚಿಣ್ಣರಕಲರವ ಎಂಬ ವಿಶೇಷ ಕಾರ್ಯಕ್ರಮವನ್ನುಬಾಲಚಂದ್ರ ಜಿ. ಗೌಡ ಉದ್ಘಾಟಿಸಿದರು.
ಮಕ್ಕಳಿಗೆ ಶಾಲಾ ಕಲಿಕೆಯಜೊತೆಗೆಸಾಂಸ್ಕೃತಿಕ ಚಟುವಟಿಕೆಗಳು ಕೂಡಾ ಮಹತ್ವವಾದದ್ದು.ಅಂತಹ ವಾತಾವರಣವನ್ನು ಈ ಶಾಲೆ ಒದಗಿಸಿಕೊಟ್ಟಿದೆ ಎಂದು ಸಂಸ್ಥೆಯ ಪೂರ್ವ ವಿದ್ಯಾರ್ಥಿನಿಯಾದ, ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಚಂದಾವರಗ್ರಾಮ ಪಂಚಾಯತಿಯಅಧ್ಯಕ್ಷೆ ಶ್ರೀಮತಿ ಛಾಯಾಉಭಯಕರ್ ಹೇಳಿದರು.
ಮಕ್ಕಳಿಗೆ ಸಮಾಜದಲ್ಲಿ ಬದುಕುವ ಸಂಸ್ಕಾರವನ್ನು ಕಲಿಸಬೇಕು.ಶಿಕ್ಷಣದ ಜೊತೆಗೆ ಸಂಸ್ಕಾರಕೂಡಾ ಮಹತ್ವವಾದದ್ದು.ಇಂದಿನ ಸ್ಪರ್ಧಾತ್ಮಕಯುಗದಲ್ಲಿ ಮಕ್ಕಳಿಗೆ ಪೂರಕವಾದ ಶೈಕ್ಷಣಿಕ ವಾತವರಣ ನಿರ್ಮಿಸುವುದುಎಲ್ಲಾ ಪಾಲಕರಜವಾಬ್ದಾರಿ. ಈ ಶಾಲೆಯು ಮಕ್ಕಳ ಸ್ಪರ್ಧಾತ್ಮಕ ಚಟುವಟಿಕೆಗಳಿಗೆ ಪೂರಕವಾಗಿದೆಎಂದುಕಾರ್ಯಕ್ರಮದಉದ್ಘಾಟಕರಾದ ಪಿ.ಸಿ.ಎ.ಆರ್.ಡಿ ಬ್ಯಾಂಕಿನ ಮೇಲ್ವಿಚಾರಕರಾದ ಬಾಲಚಂದ್ರ ಜಿ. ಗೌಡ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಶಾಲೆ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣವನ್ನು ಒದಗಿಸಿಕೊಟ್ಟಿದೆ.ಈ ಶಾಲೆಯಲ್ಲಿ ಪಠ್ಯ ಮತ್ತು ಪಠ್ಯ ಪೂರಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಎಂ.ಪಿ.ಇ. ಸೊಸೈಟಿಯಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಭಟ್ಟ, ಶಿವಾನಿ ಅವರು ಹೇಳಿದರು.
ವಿವಿಧ ವಯೋಮಾನದ ವಿದ್ಯಾರ್ಥಿಗಳಿಗಾಗಿ ಛದ್ಮವೇಷ,ಭಕ್ತಿಗೀತೆ, ಚಿತ್ರಕ್ಕೆ ಬಣ್ಣತುಂಬುವುದು ಸ್ಫರ್ಧೆಯನ್ನುಆಯೋಜಿಸಲಾಗಿತ್ತು.. ಹೊನ್ನಾವರದ ಸುತ್ತಣ ಊರುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.ಸರಿ ಸುಮಾರು೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಒಸೋಕಾಯ್ ಮಾರ್ಸಲ್ ರ‍್ಟ್ ಮೈಸೂರ ಇವರು ಮೈಸೂರಿನಲ್ಲಿ ನಡೆಸಿದ ೧೦೦೦ ಟೈಲ್ಸ್ ೧ ಸೆಕೆಂಡ್ ೧೬ ಮಿಲಿಸೆಕೆಂಡ್‌ನಲ್ಲಿ ಒಡೆಯುವ ನೊಬೆಲ್ ಬುಕ್ ಆಪ್ ರೆಕೊರ್ಡ್ಸ ಸರ್ಟಿಪಿಕೇಟ್ ಪಡೆದು ಕೀರ್ತಿತಂದ ಶಾಲೆಯ ವಿದ್ಯಾರ್ಥಿ ಋತ್ವಿಕ್ ಶಂಕರ ಮೇಸ್ತ ಇವನಿಗೆ ಶಾಲೆಯವತಿಯಿಂದ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಎಂ.ಪಿ.ಇ. ಸೊಸೈಟಿಯ ಕಾರ್ಯದರ್ಶಿಗಳಾದ ಶ್ರೀ ಎಸ್.ಎಂ.ಭಟ್ಟ, ಖಜಾಂಚಿ ಶ್ರೀ ಉಮೇಶ್ ನಾಯ್ಕ, ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಕಾಂತಿ ಭಟ್ಟ ಉಪಸ್ಥಿತರಿದ್ದರುಶಾಲಾ ಪ್ರಾಂಶುಪಾಲರಾದ ಶ್ರೀಮತಿ ಕಾಂತಿ ಭಟ್ಟ ಸ್ವಾಗತಿಸಿದರು.ಶ್ರೀಮತಿ ವಿಜಯಲಕ್ಷಿö್ಮÃ ನಾಯ್ಕ ವಂದಿಸಿದು.ಶ್ರೀಮತಿ ಶಾರದಾ ಭಟ್ಟಕಾರ್ಯಕ್ರಮ ನಿರೂಪಣೆ ಮಾಡಿದರು.

error: