September 16, 2024

Bhavana Tv

Its Your Channel

ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ

ಹೊನ್ನಾವರ: ತಾಲೂಕಿನ ಹೊಸಗೋಡ ಗ್ರಾಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ಕಲಾ ನಾಟ್ಯ ಸಂಘ ಇವರ ಆಶ್ರಯದಲ್ಲಿ ೨೨ ನೇ ಕಲಾ ಕುಸುಮ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ ಎಂಬ ಸುಂದರ ಸಾಮಾಜಿಕ ನಾಟಕವನ್ನು ರಂಗ ಪ್ರದರ್ಶನ ಮಾಡಲಾಯಿತು. ರೈತರ ಇಂದಿನ ಜೀವನ, ಕೆಲವು ಅಧಿಕಾರ ಶಾಹಿಗಳಿಂದ ರೈತರ ಜಮೀನು, ಬದುಕು ಹದಗೇಡುವ ಪರಿಸ್ಥಿತಿಯನ್ನು ಕಲಾವಿದರು ಭಾವನಾತ್ಮಕವಾಗಿ ಅಭಿನಯಿಸಿ ಜನ ಮನ ಗೆದ್ದರು. ಸಮಾಜಕ್ಕೆ ಇಂತಹ ಸಂದೇಶ ಸಾರುವ ನಾಟಕಗಳು ಬರಬೇಕು. ರಂಗಭೂಮಿ ಉಳಿಯಬೇಕು, ರಂಗಕಲಾವಿದರು ಬೆಳೆಯಬೇಕೆಂದು ರಂಗಭೂಮಿ ಬರಹಗಾರರಾದ ಲೇಖನ್ ನಾಗರಾಜ್ ರವರು ಮೆಚ್ಚುಗೆ ವ್ಯಕ್ತ ಪಡಿಸಿದರು.

error: